ಚೆನ್ನೈ: ಬಿಗ್ ಬಾಸ್ ಆಟ ಫಿನಾಲೆ ಹಂತಕ್ಕೆ ಬರುತ್ತಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ಆಟದಿಂದ ವೀಕ್ಷಕರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.
ಕನ್ನಡ ಬಿಗ್ ಬಾಸ್ನಂತೆ ತಮಿಳು ಬಿಗ್ ಬಾಸ್ (Bigg Boss Tamil Season 8) ಆಟವೂ ರೋಚಕ ಘಟ್ಟಕ್ಕೆ ತಲುಪಿದೆ. ವಿಜಯ್ ಸೇತುಪತಿ ( Vijay Sethupathi) ನಡೆಸಿಕೊಡುವ ಬಿಗ್ ಬಾಸ್ ತಮಿಳು ಶೋನ ವೀಕೆಂಡ್ ಎಪಿಸೋಡ್ ವೀಕ್ಷಕರಿಗೆ ಶಾಕ್ ನೀಡಿದೆ.
ಒಂದೇ ಬಾರಿಗೆ ಒಬ್ಬರಲ್ಲ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಇಲ್ಲಿಯವರೆಗೆ 12 ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಹಾಕಲ್ಪಟ್ಟಿದ್ದಾರೆ. ಉಳಿದ 12 ಸ್ಪರ್ಧಿಗಳಲ್ಲಿ ಇಬ್ಬರು ಆಚೆ ಬಂದಿದ್ದಾರೆ. ಈ ನಡುವೆ ವೀಕ್ಷಕರ ಗಮನ ಸೆಳೆದಿದ್ದ ಕಿರುತೆರೆ ನಟಿ ಅಂಶಿತಾ ಅಂಜಿ ಅವರು ಬಿಗ್ ಬಾಸ್ ಮನೆಯ ಆಟವನ್ನು ಮುಗಿಸಿ ಆಚೆ ಬಂದಿದ್ದಾರೆ. ಇದರ ಜತೆ ಗಾಯಕ ಜೆಫ್ರಿ ಕೂಡ ಅಂಶಿದಾ ಜತೆ ತಮ್ಮ ದೊಡ್ಮನೆ ಆಟದ ಪಯಣವನ್ನು ಮುಗಿಸಿದ್ದಾರೆ.
ಇಬ್ಬರು ಜನಪ್ರಿಯ ಸ್ಪರ್ಧಿಗಳ ಎಲಿಮಿನೇಟ್ನಿಂದಾಗಿ ವೀಕ್ಷಕರು ಶಾಕ್ ಆಗಿದ್ದಾರೆ.
ವಿಶಾಲ್ ಟ್ರೋಫಿ ಗೆಲ್ಲಬೇಕೆಂದು ಅಂಶಿದಾ ಹೇಳಿದ್ದು, ಪ್ರತಿಯಾಗಿ, ವಿಶಾಲ್ ಅವಳಿಗೆ ಸರವನ್ನು ಉಡುಗೊರೆಯಾಗಿ ನೀಡಿ ತನ್ನನ್ನು ಎಂದಿಗೂ ಮರೆಯಬಾರದೆಂದು ಹೇಳಿದ್ದಾರೆ. ಜೆಫ್ರಿ ನನ್ನ ಮೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಸೇತುಪತಿ ಹೇಳಿ ಅವರಿಗೆ ಶುಭ ಹಾರೈಸಿದ್ದಾರೆ.
ಇಬ್ಬರು ಸ್ಪರ್ಧಿಗಳ ಎಲಿಮಿನೇಟ್ನಿಂದಾಗಿ ಫಿನಾಲೆ ಓಟ ರೋಚಕವಾಗಿ ಸಾಗಲಿದೆ.