Advertisement

Bigg Boss OTT: ಫಿನಾಲೆ ವಾರದಲ್ಲೇ ಡಬಲ್‌ ಎಲಿಮಿನೇಷನ್; ವೀಕ್ಷಕರಿಗೆ ಶಾಕ್

12:22 PM Aug 01, 2024 | Team Udayavani |

ಮುಂಬಯಿ: ಬಿಗ್‌ ಬಾಸ್‌ ಓಟಿಟಿ ಸೀಸನ್‌ -3 (Bigg Boss OTT 3)  ಫಿನಾಲೆ ಹಂತಕ್ಕೆ ತಲುಪಿದೆ. ಅಂತಿಮ ವಾರದಲ್ಲಿ ಬಿಗ್‌ ಬಾಸ್‌ ಮನೆಯಿಂದ ವಾರದ ಮಧ್ಯದಲ್ಲೇ ಡಬಲ್‌ ಎಲಿಮಿನೇಷನ್‌ ಮಾಡಿ ಟ್ವಿಸ್ಟ್‌ ನೀಡಲಾಗಿದೆ.

Advertisement

ಆರಂಭದಿಂದಲೇ ಬಿಗ್‌ ಬಾಸ್‌ ಮನೆಯಲ್ಲಿ ವಾದ- ವಿವಾದದಿಂದ ಸುದ್ದಿಯಾಗಿದ್ದ ಅರ್ಮಾನ್‌ ಮಲಿಕ್‌ (Armaan Malik) ಹಾಗೂ ಟ್ರೋಫಿ ಗೆಲ್ಲುವವರಲ್ಲಿ ವೀಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದ ಲವಕೇಶ್ ಕಟಾರಿಯಾ (Lovekesh Kataria) ಮಿಡ್‌ ವೀಕ್‌ ಎಲಿಮಿನೇಷನ್‌ ಮೂಲಕ ಫಿನಾಲೆ ವಾರದಲ್ಲೇ ದೊಡ್ಮನೆಯಿಂದ ಹೊರಬಂದಿದ್ದಾರೆ.

ಕ್ರಮವಾಗಿ ಅತಿ ಹೆಚ್ಚು ಮತ್ತು ಕಡಿಮೆ ಸಂಖ್ಯೆಯ ನಾಮಿನೇಷನ್‌ ಪಡೆದ ಆಧಾರದದಲ್ಲಿ ಈ ಎಲಿಮಿನೇಷನ್‌ ಪ್ರಕ್ರಿಯೆಯನ್ನು ಮಾಡಲಾಗಿದೆ. ಇವರಿಬ್ಬರ ಮಿಡ್‌ ವೀಕ್‌ ಎಲಿಮಿನೇಷನ್ ವೀಕ್ಷಕರು ಹಾಗೂ ಸಹ ಸ್ಪರ್ಧಿಗಳಿಗೆ ಶಾಕ್‌ ನೀಡಿದೆ.

Advertisement

ಲವಕೇಶ್ ಅವರು ಅತಿ ಹೆಚ್ಚು ಮತಗಳನ್ನು ಪಡೆದು, ಅರ್ಮಾನ್  ಅತಿ ಕಡಿಮೆ ಮತಗಳನ್ನು ಪಡದು ಮನೆಯಿಂದ ಹೊರಬಿದ್ದಿದ್ದಾರೆ.

ಅನಿಲ್ ಕಪೂರ್ ನಡೆಸಿಕೊಡುವ ‘ಬಿಗ್ ಬಾಸ್ OTT 3’ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಆಗಸ್ಟ್ 2 ರಂದು ಪ್ರಸಾರ ಕಾಣಲಿದೆ.

ಸನಾ ಮಕ್ಬುಲ್, ಕೃತಿಕಾ ಮಲಿಕ್, ರಣವೀರ್ ಶೋರೆ, ನೇಜಿ ಮತ್ತು ಸಾಯಿ ಕೇತನ್ ರಾವ್ ಫಿನಾಲೆ ಸ್ಪರ್ಧಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next