ಮುಂಬಯಿ: ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಓಟಿಟಿ -2 ಆರಂಭವಾಗಿ ಕೆಲ ದಿನಗಳೇ ಕಳೆದಿದೆ. ಆಗಲೇ ಮನೆಯಲ್ಲಿ ವಾದ – ವಿವಾದಗಳ ಚರ್ಚೆ ಜೋರಾಗಿ ನಡೆಯುತ್ತಿದೆ.
ಟಾಸ್ಕ್ ಅಂಗವಾಗಿ ಮನೆಯ ಸ್ಪರ್ಧಿಗಳು ಎರಡು ತಂಡಗಳಾಗಿ ವಿಂಗಡನೆ ಆಗಿದ್ದಾರೆ. ಪೂಜಾ ಭಟ್, ಫಲಕ್ ನಾಜ್, ಸೈರಸ್ ಬ್ರೋಚಾ, ಅವಿನಾಶ್ ಸಚ್‌ದೇವ್ ಮತ್ತು ಬೇಬಿಕಾ ಧುರ್ವೆ ಮುಂತಾದವರು ಒಂದು ತಂಡದಲ್ಲಿದ್ದಾರೆ. ಹಾಗೆ ಇನ್ನೊಂದು ತಂಡದಲ್ಲಿ ಮನಿಶಾ ರಾಣಿ, ಆಕಾಂಕ್ಷಾ ಪುರಿ, ಜಡ್ ಹದಿದ್, ಜಿಯಾ ಶಂಕರ್, ಮತ್ತು ಅಭಿಷೇಕ್ ಮಲ್ಹಾನ್ ಇದ್ದಾರೆ. ಎರಡೂ ತಂಡಗಳ ಸದಸ್ಯರು ನಾನಾ ಟಾಸ್ಕ್ ನಲ್ಲಿ ಭಾಗಿಯಾಗಿದ್ದಾರೆ.
ಟಾಸ್ಕ್ ನ ಭಾಗವಾಗಿ ʼಎʼ ತಂಡದ ಅವಿನಾಶ್ ಸಚ್‌ದೇವ್ ʼಬಿʼ ತಂಡದ ಆಕಾಂಕ್ಷಾ ಪುರಿ ಅವರಿಗೆ ಒಂದು ಚಾಲೆಂಜ್ ನ್ನು ಕೊಟ್ಟಿದ್ದಾರೆ. 30 ಸೆಕೆಂಡ್ ನೀವು ಅವರಿಗೆ ಕಿಸ್ ಕೊಡಬೇಕೆಂದು ಹೇಳಿದ್ದಾರೆ. ಈ ಸವಾಲಿಗೆ ಆಕಾಂಕ್ಷಾ ಪುರಿ ಮುಂದೆ ಬಂದಿದ್ದಾರೆ. ಆ ಬಳಿಕ ತನ್ನ ತಂಡದ ಸಹ ಸ್ಪರ್ಧಿ ಜಡ್ ಹದಿದ್ ಅವರೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. 30 ಸೆಕೆಂಡ್ ಗಳಿಗಿಂತ ಜಾಸ್ತಿಯೇ ನಡೆದ ಈ ಕಿಸ್ಸಿಂಗ್ ಉಳಿದವರನ್ನು ಮುಜುಗರಕ್ಕೀಡು ಮಾಡಿದೆ. ಈ ವೇಳೆ ಪೂಜಾ ಭಟ್ ಮತ್ತು ಅಭಿಷೇಕ್ ಮಧ್ಯಪ್ರವೇಶಿಸಿ ಅವರನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಸಲ್ಮಾನ್ ಖಾನ್ ನಿರೂಪಣೆ ಮಾಡುವ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಮನೆಯಲ್ಲಿ ಇರುವ ವ್ಯಕ್ತಿತ್ವದ ಹೆಚ್ಚು ಗಮನ ಕೊಡುತ್ತಾರೆ. ಈ ಕಾರಣದಿಂದ ಆಕಾಂಕ್ಷಾ ಮನಿಶಾ ರಾಣಿಯೊಂದಿಗೆ ಲಿಪ್‌ಲಾಕ್ ಬಗ್ಗೆ ಚರ್ಚಿಸಿದ್ದಾರೆ. ಸಲ್ಮಾನ್ ಖಾನ್ ತನ್ನ ಹಾವಭಾವದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಭಯವನ್ನು ಮನಿಶಾ ಅವರೊಂದಿಗೆ ಆಕಾಂಕ್ಷಾ ಮಾತನಾಡಿದ್ದಾರೆ. ಇದು ಕೇವಲ ಒಂದು ಚಟುವಟಿಕೆ ಮತ್ತು ಇದು ಪ್ರೇಕ್ಷಕರಿಂದ ಮತಗಳನ್ನು ಗಳಿಸಲು ನಿನಗೆ ಸಹಾಯಕವಾಗಲಿದೆ ಎಂದು ಮನೀಶಾ ಆಕಾಂಕ್ಷಾ ಪುರಿಗೆ ಭರವಸೆ ನೀಡಿದ್ದಾರೆ.
ಕಿಸ್ ಮಾಡುವ ಸಮಯದಲ್ಲಿ ಆಕಾಂಕ್ಷಾ ನಡಗುತ್ತಿದ್ದಳು. ಅವಳು ಕೆಟ್ಟ ಕಿಸ್ಸರ್ ಎಂದು ಜಡ್ ಹದಿದ್ ಹೇಳಿದಾಗ ಪೂಜಾ ಭಟ್ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಸ್ಸಂಶಯವಾಗಿ, ಹುಡುಗಿಯನ್ನು ಇಡೀ ಪ್ರಪಂಚದ ಮುಂದೆ ಕಿಸ್ ಮಾಡಲು ಕೇಳಿದರೆ ಏನು ಮಾಡುತ್ತಾಳೆ? ಈ ಕಾಮೆಂಟ್ ಸರಿಯಾಗಿಲ್ಲ, ಕ್ಷಮಿಸಿ ನಾನು ಅದನ್ನು ಒಪ್ಪುವುದಿಲ್ಲ ನೀನು ಹುಡುಗನಲ್ಲ, ಗಂಡು ಎಂದು ನಾನು ಭಾವಿಸಿದ್ದೆ” ಎಂದಿದ್ದಾರೆ.
“ಭಾರತೀಯ ಮಹಿಳಾ ಕಲಾವಿದೆಯಾಗಿ, ಈ ಕಿಸ್ ನನಗೆ ಅಸಹ್ಯವಾಗಿಸಿದೆ. ಇದನ್ನು ಜಾಡ್ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.