Advertisement
ಮಲಯಾಳಂನಲ್ಲೂ ಬಿಗ್ ಬಾಸ್ ಕಾರ್ಯಕ್ರಮ ಜನಪ್ರಿಯವಾಗಿದೆ. ಇದರ 6ನೇ ಸೀಸನ್ ಭಾನುವಾರ(ಮಾ.10 ರಂದು) ಶುರುವಾಗಿದೆ. ʼಬಿಗ್ ಬಾಸ್ ಮಲಯಾಳಂ 6ʼ ಕಾರ್ಯಕ್ರಮವನ್ನು ಮೋಹನ್ ಲಾಲ್ ಅವರು ಹಿಂದಿನ ಬಾರಿಯಂತೆ ಈ ಬಾರಿಯೂ ನಡೆಸಿಕೊಳ್ಳಲಿದ್ದಾರೆ.
Related Articles
Advertisement
ಯಮುನಾ ರಾಣಿ: ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಖ್ಯಾತ ಕಿರುತೆರೆ ನಟಿ ಯಮುನಾ ರಾಣಿ ಅವರು ಪ್ರವೇಶ ಮಾಡಿದ್ದಾರೆ. ಇವರು. ‘ಇಟ್ಟಿಮನಿ ಮೇಡ್ ಇನ್ ಚೈನಾ’, ‘ಮೀಸಮಾಧವನ್’ ಮುಂತಾದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ರಿಷಿ ಎಸ್ ಕುಮಾರ್: ಕೇರಳ ಕಿರುತರೆಯಲ್ಲಿ ಬಹುತೇಕ ವೀಕ್ಷಕರಿಗೆ ರಿಷಿ ಕುಮಾರ್ ಮುಖ ಪರಿಚಯವಿದೆ. ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ಅವರು ʼ ಉಪ್ಪುಂ ಮುಳಕುಂʼ ಶೋನಿಂದ ಜನಪ್ರಿಯರಾಗಿದ್ದಾರೆ.
ಜಾಸ್ಮಿನ್ ಜಾಫರ್: ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಸೌಂದರ್ಯ ಬ್ಲಾಗರ್ ಜಾಸ್ಮಿನ್ ಜಾಫರ್ ಐದನೇ ಸ್ಪರ್ಧಿ ಆಗಿ ಮನೆಯೊಳಗೆ ಎಂಟ್ರಿ ಆಗಿದ್ದಾರೆ.
ಸಿಜೋ ಜಾನ್: ಶಿಕ್ಷಕನಿಂದ ಯೂಟ್ಯೂಬರ್ ಆದ ಸಿಜೋ ಜಾನ್ ತನ್ನ ʼಸಿಜೋಟಾಕ್ಸ್ʼ ಯೂಟ್ಯೂಬ್ ಚಾನೆಲ್ ನಿಂದ ಫೇಮ್ ಆಗಿದ್ದಾರೆ. ಒಂದು ವೇಳೆ ಕಾರ್ಯಕ್ರಮ ಗೆದ್ದರೆ ಅದರಿಂದ ಬರುವ ಹಣದಿಂದ ಅವರು ಬ್ಯುಸಿನೆಸ್ ಆರಂಭಿಸುವುದಾಗಿ ವೇದಿಕೆಯಲ್ಲಿ ಹೇಳಿದ್ದಾರೆ.
ಶ್ರೀತು ಕೃಷ್ಣನ್: ಜನಪ್ರಿಯ ಕಿರುತೆರೆ ನಟಿಯಾಗಿರುವ ಶ್ರೀತು ಕೃಷ್ಣನ್ ಬಿಗ್ ಬಾಸ್ ಮನೆಯಲ್ಲಿ ಏಳನೇ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ. ತಮಿಳು ಮತ್ತು ಮಲಯಾಳಂನಲ್ಲಿ ಕಿರುತರೆಯಲ್ಲಿ ಅವರು ಖ್ಯಾತರಾಗಿದ್ದಾರೆ. ʼಅಮ್ಮಯಾರಿಯಾತೆʼ ಧಾರಾವಾಹಿಯಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಜಾನ್ಮೋನಿ ದಾಸ್: ಕೇರಳದ ಮೊದಲ ಮೇಕಪ್ ಅರ್ಟಿಸ್ಟ್ ಎಂದೇ ಗುರುತಿಸಲ್ಪಾಡುವ ಜಾನ್ಮೋನಿ ದಾಸ್ ಎಂಟನೇ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಆಗಿದ್ದಾರೆ. 300 ಕ್ಕೂ ಹೆಚ್ಚು ಕಲಾವಿದರೊಂದಿಗೆ ಮೇಕಪ್ ಅರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರತೀಶ್ ಕುಮಾರ್: ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಹಾಸ್ಯನಟ ಮತ್ತು ಗಾಯಕ ರತೀಶ್ ಕುಮಾರ್ ಅವರು 9ನೇ ಸ್ಪರ್ಧಿಯಾಗಿ ಎಂಟ್ರಿ ಆದರು.
ಶ್ರೀರೇಖಾ ರಾಜಗೋಪಾಲ್:
ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ನಟಿ ಶ್ರೀರೇಖಾ ರಾಜಗೋಪಾಲ್ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಪ್ರವೇಶ ಪಡೆದರು.
ಅಸಿ ರಾಕಿ: ಹೆಸರಾಂತ ಟ್ಯಾಟೂ ಕಲಾವಿದರಾಗಿರುವ ರಾಕಿ ಅವರು ಎರಡು ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಮತ್ತು ಪ್ರಶಸ್ತಿಯನ್ನು ಗೆಲ್ಲುವುದು ಅವರ ಏಕೈಕ ಗುರಿಯಾಗಿದೆ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ್ದಾರೆ. 11ನೇ ಸ್ಪರ್ಧಿಯಾಗಿ ಅವರು ಮನೆಯೊಳಗೆ ಎಂಟ್ರಿ ಆದರು.
ಅಪ್ಸರಾ ರತ್ನಾಕರನ್: ಕಿರುತೆರೆ ನಟಿ ಅಪ್ಸರಾ ರತ್ನಕರನ್ ಅವರು ʼಸಾಂತ್ವನಂʼ ಕಾರ್ಯಕ್ರಮದ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಿಗ್ ಬಾಸ್ ಮಲಯಾಳಂನ ಆರನೇ ಸೀಸನ್‌ನಲ್ಲಿ 12ನೇ ಸ್ಪರ್ಧಿ ಆಗಿ ಅವರು ಪ್ರವೇಶ ಪಡೆದರು.
ಗಾಬ್ರಿ ಜೋಸ್: ನಟ ಗಾಬ್ರಿ ಅವರು 13ನೇ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಪಡೆದರು. ಮಾಲಿವುಡ್ ಸಿನಿರಂಗಕ್ಕೆ ಇವರ ಪರಿಚಯ ಹೊಸತೇನಲ್ಲ. ಕಮಲ್ ನಿರ್ದೇಶನದ ಅವರ ಚೊಚ್ಚಲ ಚಿತ್ರ ʼಪ್ರಣಯ ಮೀನುಕಾಲುಡೆ ಕಡಲ್ʼ ನಿಂದಾಗಿ ಅವರು ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿದ್ದಾರೆ.
ನೋರಾ ಮುಸ್ಕಾನ್: ಸೋಶಿಯಲ್ ಮೀಡಿಯಾ ತಾರೆ ಆಗಿರುವ ನೋರಾ ಮುಸ್ಕಾನ್ ಅವರು 14ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಆದರು.
ಅರ್ಜುನ್ ಶ್ಯಾಮ್ ಗೋಪನ್: ಮಾಡೆಲ್ ಮತ್ತು ನಟ ಆಗಿರುವ ಅರ್ಜುನ್ ಶ್ಯಾಮ್ ಗೋಪನ್ ಅವರು 15ನೇ ಅಧಿಕೃತ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಆದರು.
ಸುರೇಶ್ ಮೆನನ್: ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಹೆಚ್ಚು ಗಮನ ಸೆಳೆದಿರುವ ಸ್ಪರ್ಧಿಗಳಲ್ಲಿ ಸುರೇಶ್ ಮೆನನ್ ಕೂಡ ಒಬ್ಬರು. ನಟ-ಹಾಸ್ಯಗಾರ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರ ʼಭ್ರಮರಂʼ ಕೂಡ ಅವರು ನಟಿಸಿದ್ದಾರೆ.
ಶರಣ್ಯ ಆನಂದ್: ಸ್ಪರ್ಧಿಗಳ ಪಟ್ಟಿಯಲ್ಲಿ ಮತ್ತೊಂದು ಜನಪ್ರಿಯ ಹೆಸರು ಎಂದರೆ ಅದು ಶರಣ್ಯ ಆನಂದ್ ಅವರದು. ʼಕುಟುಂಬವಿಲಕ್ಕುʼ ಧಾರಾವಾಹಿನಿಂದ ಅವರು ಜನಪ್ರಿಯರಾಗಿದ್ದಾರೆ.
ರೆಸ್ಮಿನ್ ಬಾಯಿ: ಇವರು ದೈಹಿಕ ಶಿಕ್ಷಣ ತರಬೇತುದಾರೆ ಆಗಿದ್ದಾರೆ. ಬಿಗ್ ಬಾಸ್ ಮನೆಗೆ 18ನೇ ಸ್ಪರ್ಧಿಯಾಗಿ ಎಂಟ್ರಿ ಆದರು.
ನಿಶಾನಾ: ಬೈಕರ್ ಆಲ್ ಓವರ್ ಇಂಡಿಯಾ ತಿರುಗಾಡಿರುವ ನಿಶಾನಾ ಅವರು, 19ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಆದರು.