Advertisement
ಜೋಡಿ ಹಕ್ಕಿ ಟಾಸ್ಕ್ ನಲ್ಲಿ ದೊಡ್ಮನೆ ಸಂಬಂಧ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಟಾಸ್ಕ್ ನಲ್ಲಿ ಶಿಶಿರ್ ಅವರ ತಂಡ ಗೆದ್ದಿದ್ದು ಪನೀಶ್ ಮೆಂಟ್ ಕಾರ್ಡ್ ಆಯ್ಕೆ ಮಾಡಲಾಗಿದೆ.
Related Articles
Advertisement
ನೀರು ಹರಿಯುವುದನ್ನು ತಡೆಯುತ್ತಿದ್ದ ಗೋಲ್ಡ್ ಸುರೇಶ್ ಅವರನ್ನುಅನುಷಾ ಎಳೆಯಲು ಯತ್ನಿಸಿದಾಗ ಗೋಲ್ಡ್ ಸುರೇಶ್ ಕಾಲಿನಲ್ಲಿ ಒದ್ದಿದ್ದಾರೆ.
ಇದಕ್ಕೆ ಅನುಷಾ ಒಂದು ಕಾಮನ್ ಸೆನ್ಸ್ ಇಲ್ಲ ಹೇಗೆ ವರ್ತಿಸಬೇಕಂಥ. ಹಿಂಗೆನಾ ಮನೆಯಲ್ಲಿ ಬೆಳೆಸಿರುವುದು. ಕೈಯಲ್ಲಿ ಎಳೆಯೋಕೆ ಬಂದರೆ ಕಾಲಿನಲ್ಲಿ ಒದ್ದಿತ್ತೀರಿ. ದೊಡ್ಡ ಮನುಷ್ಯರು.
ನೀನು ನನ್ನನ್ನು ಒದ್ದಿದ್ದೀಯಾ ಆ ಪಾಪ ನಿನ್ನ ಸುಮ್ಮನೆ ಬಿಡಲ್ಲ ಎಂದು ಅನುಷಾ ಸುರೇಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರಿಗೆ ಬೇಕಾದಾಗೆ ಗುದ್ದಿದ್ರೆ ಇವರು ಅಪ್ಪ ಸಾಕ್ತಾರ ನನ್ನನ್ನು ಅಂಥ ಅನುಷಾ ಹೇಳಿದ್ದಾರೆ.
ನಮ್ಮ ಟೀಮ್ ಬಗ್ಗೆ ನಾನು ಹೇಳ್ತಾ ಇದ್ದೇನೆ ಅಂಥ ಸುರೇಶ್ ಹೇಳಿದ್ದು, ಅನುಷಾ ನಮ್ ಟೀಮ್ ಎಂದು ತ್ರಿವಿಕ್ರಮ್ ಎದುರಿಗೆ ವಾಗ್ವಾದ ನಡೆಸಿದ್ದಾರೆ.
ಈ ಟಾಸ್ಕ್ ನ ಮೊದಲ ಸುತ್ತಿನಲ್ಲಿ ಮಂಜು ಅವರ ತಂಡ ಗೆದ್ದಿದ್ದು, ಚೈತ್ರಾ ಅವರ ತಂಡವನ್ನು ಮುಂದಿನ ಸುತ್ತಿನಿಂದ ಹೊರಗಿಟ್ಟಿದ್ದಾರೆ.
ನಮ್ಮನ್ನು ಟಾರ್ಗೆಟ್ ಮಾಡಿ ಆಟ ಆಡುತ್ತಿದ್ದಾರೆ ಅಂಥ ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರೇಶ್, ಮಂಜು ಇಬ್ಬರು ಟಾರ್ಗೆಟ್ ಮಾಡಿ ಆಡ್ತಾ ಇದ್ದಾರೆ. ಅವರಿಬ್ಬರು ಮಾಸ್ಟರ್ ಗಳೆಂದು ಮೋಕ್ಷಿತಾ ಹೇಳಿದ್ದಾರೆ.
ನೀರು ಉಳಿಸುವ ಭರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದಿದ್ದು, ತಿವಿಕ್ರಮ್ ಮಂಜು, ಸುರೇಶ್ ಅವರನ್ನು ಜೋರಾಗಿ ಹಿಡಿದುಕೊಂಡಿದ್ದಾರೆ. ಪರಿಣಾಮ ಸುರೇಶ್ ಅವರ ಕಾಲಿನ ಮೇಲೆ ನೀರಿನ ಡ್ರಮ್ ಬಿದ್ದು ಏಟಾಗಿದೆ.
ಎರಡನೇ ಸುತ್ತಿನಲ್ಲೂ ಮಂಜು ಅವರ ತಂಡ ಮೇಲುಗೈ ಸಾಧಿಸಿದೆ. ಗೌತಮಿ ಅವರ ತಂಡವನ್ನು ಮುಂದಿನ ಸುತ್ತಿನಿಂದ ಹೊರಗಿಟ್ಟಿದ್ದಾರೆ.
ಈ ಸುತ್ತಿನಲ್ಲಿ ಮಂಜು ಅವರ ತಂಡ ಗೆದ್ದಿದೆ. ಅವರು ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್ ಆಯ್ಕೆ ಮಾಡಿದ್ದಾರೆ. ಆ ಮೂಲಕ ಅವರ ತಂಡದಿಂದ ಮೂವರು ನೇರವಾಗಿ ಕ್ಯಾಪ್ಟನ್ಸಿ ಸ್ಥಾನಕ್ಕೆ ತೇರ್ಗಡೆ ಆಗಿದ್ದಾರೆ.
ಸೋತ ತಂಡಗಳ ಪೈಕಿ ಒಬ್ಬೊಬ್ಬರನ್ನು ಕ್ಯಾಪ್ಟನ್ ಹನುಮಂತು ಕ್ಯಾಪ್ಟನ್ಸಿ ಸ್ಥಾನದಿಂದ ಹೊರಗಿಟ್ಟಿದ್ದಾರೆ. ಐಶ್ವರ್ಯಾ, ಗೌತಮಿ, ಚೈತ್ರಾ ಅವರನ್ನು ಕ್ಯಾಪ್ಟನ್ಸಿ ಸ್ಥಾನದಿಂದ ಹೊರಗಿಟ್ಟಿದ್ದಾರೆ.
ಆ ಮೂಲಕ ಹನುಮಂತು ಕ್ಯಾಪ್ಟನ್ ಆಗಿ ಟಾಸ್ಕ್ ಉಸ್ತುವಾರಿ ಹಾಗೂ ಕೆಲ ಪ್ರಮುಖ ಜವಾಬ್ದಾರಿ ತೆಗೆದುಕೊಂಡು ಮನೆಯ ಕಿಂಗ್ ಮೇಕರ್ ಆಗಿದ್ದಾರೆ.