Advertisement
ಅತಿಥಿಯಾಗಿ ಬಂದಿರುವ ರಾಧಾ ಹಿರೇಗೌಡರ್ ಎರಡು ಪಕ್ಷಗಳ ಅಧ್ಯಕ್ಷರಲ್ಲಿ ತಮ್ಮ ಪಕ್ಷವನ್ನು ಜನ ಯಾಕೆ ಮತ ಹಾಕಬೇಕು, ಜನರಿಗೆ ಏನು ಕೊಡ್ತೀರಿ ಎಂದು ಪ್ರಶ್ನಿಸಿದ್ದಾರೆ. ಐಶ್ವರ್ಯಾ ಅವರ ಬಳಿ ರಾಧಾ ಅವರು ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿರಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.
ಮನೆಯಲ್ಲಿ ಯಾರು ನಿಷ್ರಯೋಜಕ ವ್ಯಕ್ತಿ ಯಾರು ಆಯಾ ಪಕ್ಷದವರಲ್ಲಿ ಕೇಳಿದಾಗ ಮಂಜು ಅವರು ವಿರೋಧ ಪಕ್ಷದ ಮಾನಸ ಅವರ ಹೆಸರು, ಹೇಳಿದ್ದು ಮಾನಸ ಅವರು ಐಶ್ವರ್ಯಾ ಅವರ ಹೆಸರನ್ನು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೇಡಿ ಯಾರು?
ಈ ಮನೆಯ ಎದುರಾಳಿ ಪಕ್ಷದ ಹೇಡಿ ಯಾರು ಎನ್ನುವ ಪ್ರಶ್ನೆಗೆ ಧನರಾಜ್ ಅವರು ಧರ್ಮ ಅವರ ಹೆಸರನ್ನು ಹೇಳಿದ್ದಾರೆ. ಅವರು ಈ ಮನೆಯಲ್ಲಿ ಯಾವುದೇ ಧ್ವನಿ ಎತ್ತಿಲ್ಲ ಎಂದು ಧನರಾಜ್ ಅವರು ಹೇಳಿದ್ದಾರೆ.
Related Articles
Advertisement
ಶಿಶಿರ್ ಅವರು ಧನರಾಜ್ ಅವರೇ ನಿಜವಾದ ಹೇಡಿ ಎಂದಿದ್ದಾರೆ. ಟಾಸ್ಕ್ ಆಡುವಾಗ ಅವರು ಮುಂದೆ ಬಂದಿಲ್ಲ ಎನ್ನುವ ಕಾರಣವನ್ನು ನೀಡಿದ್ದಾರೆ.
ಧನರಾಜ್ ಅವರು ಹೇಡಿಯಲ್ಲ ಎಂದು ಅವರ ಪಕ್ಷದ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ.
ನಯವಂಚಕ ಯಾರು? ಎದುರಾಳಿ ಪಕ್ಷದ ನಯವಂಚಕ ಯಾರು ಎನ್ನುವ ಪ್ರಶ್ನೆಗೆ ಚೈತ್ರಾ ಅವರು, ಮಂಜು ಅವರ ಹೆಸರನ್ನು ಹೇಳಿದ್ದಾರೆ. ಅವರು ಫಿಟ್ಟಿಂಗ್ ಮಾಸ್ಟರ್ ಎಂದು ಚೈತ್ರಾ ಹೇಳಿದ್ದಾರೆ.
ಮೋಕ್ಷಿತಾ ಚೈತ್ರಾ ಅವರ ಹೆಸರನ್ನು ಹೇಳಿದ್ದಾರೆ. ಅವರಿಗೆ ಈಗಾಗಲೇ ಕುತಂತ್ರಿ ಎನ್ನುವ ಹಣೆಪಟ್ಟಿ ಸಿಕ್ಕಿದೆ ಎನ್ನುವ ಕಾರಣವನ್ನು ನೀಡಿದ್ದಾರೆ.
ಸಕ್ಕರೆ ಕಮ್ಮಿ ಹಾಕಿಕೊಳ್ಳುವ ವಿಚಾರಕ್ಕೆ ಚೈತ್ರಾ ಹಾಗೂ ಇತರೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನಾನು ನಮ್ಮವರಿಗೆ ಹೇಳಿದ್ದೇನೆ ಎಂದಿರುವ ಚೈತ್ರಾ ಅವರ ಮಾತಿಗೆ ತಿನ್ನುವ ವಿಚಾರಕ್ಕೆ ಏನು ಹೇಳಬೇಡಿ ಎಂದು ಇತರರು ಹೇಳಿದ್ದಾರೆ.
ಚರ್ಚಾ ಕೂಟದಲ್ಲಿ ತಿವಿಕ್ರಮ್ ಅವರ ಪಕ್ಷ ಗೆದ್ದಿದೆ. ಆ ನಿಟ್ಟಿನಲ್ಲಿ ಸೋತ ಪಕ್ಷದವರು ಗೆದ್ದ ಪಕ್ಷ ಹೇಳಿದ ಎಲ್ಲಾ ಕೆಲಸವನ್ನು ಮಾಡಬೇಕಿದೆ.
ಪಕ್ಷಗಳ ಬಹಿರಂಗ ಪ್ರಚಾರಕ್ಕೆ ಸಾರ್ವಜನಿಕರು ದೊಡ್ಮನೆಗೆ ಬಂದಿದ್ದಾರೆ. ಜನತಾ ದರ್ಶನದಲ್ಲಿ ಸಾರ್ವಜನಿಕರು ಆಯಾ ಪಕ್ಷದ ಮುಖಂಡರಿಗೆ ಜೈಕಾರ ಹಾಕಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.