ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada) ಇದೇ ಭಾನುವಾರ(ಸೆ.29ರಿಂದ) ಆರಂಭಗೊಳ್ಳಲಿದೆ. ಕಿಚ್ಚ ಸುದೀಪ್ (Kiccha Sudeep) ಅವರನ್ನು ʼಬಿಗ್ ಬಾಸ್ ಹೋಸ್ಟ್ʼ ಆಗಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಪ್ರತಿ ವರ್ಷ ಬಿಗ್ ಬಾಸ್ ಹೊಸ ಥೀಮ್‌ನೊಂದಿಗೆ ಶುರುವಾಗುತ್ತದೆ. ಕಳೆದ ವರ್ಷ ಸಮರ್ಥರು ಹಾಗೂ ಅಸರ್ಮಥರು ಎನ್ನುವ ಎರಡು ತಂಡಗಳನ್ನು ಬಿಗ್ ಬಾಸ್ ನಲ್ಲಿ ರಚಿಸಲಾಗಿತ್ತು. ಈ ಬಾರಿ ಸ್ವರ್ಗ – ನರಕ ಎನ್ನುವ ಕಾನ್ಸೆಪ್ಟ್‌ನಲ್ಲಿ ನಡೆಯಲಿದೆ.
ಕೆಲ ಸ್ಪರ್ಧಿಗಳ ಹೆಸರು ಈ ಸಲಿ ಮೊದಲೇ ರಿವೀಲ್ ಆಗಲಿದೆ. ಸ್ವರ್ಗ – ನರಕ ಎನ್ನುವುದು ಕನ್ನಡಕ್ಕೆ ಹೊಸತು. ಆದರೆ ರಿಯಾಲಿಟಿ ಶೋಗೆ ಇದು ಹೊಸತಲ್ಲ. ಈ ಹಿಂದೆ ಹಿಂದಿ ಬಿಗ್ ಬಾಸ್ ನಲ್ಲಿ ಈ ಕಾನ್ಸೆಪ್ಟ್ ಬಂದಿತ್ತು.
ಹೇಗಿರುತ್ತದೆ ಸ್ವರ್ಗ – ನರಕದ ಮನೆ..?: ಬಿಗ್ ಬಾಸ್ ಹಿಂದಿ -7ನಲ್ಲಿ(Bigg Boss Hindi) ಸ್ವರ್ಗ – ನರಕ ಎನ್ನುವ ಎರಡು ಮನೆಯಿತ್ತು. ಇದರಲ್ಲಿ ಮೊದಲೇ ಕೆಲವೊಂದಿಷ್ಟು ಸ್ಪರ್ಧಿಗಳು ಸ್ವರ್ಗದಲ್ಲಿ , ಕೆಲವೊಂದಿಷ್ಟು ಸ್ಪರ್ಧಿಗಳು ನರಕದಲ್ಲಿ ಇರುತ್ತಾರೆ.
ಮೊದಲು ಎರಡು ತಂಡಗಳನ್ನು ರಚಿಸಲಾಗುತ್ತದೆ. ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಈಜುಕೊಳ, ಆರಾಮದಾಯಕವಾದ ಹಾಸಿಗೆಗಳು, ಜಿಮ್, ಅಡುಗೆಮನೆ ಮತ್ತು ಹೆಚ್ಚಿನ ಸೌಲಭ್ಯಗಳಿರುತ್ತದೆ. ಇತ್ತ ನರಕದಲ್ಲಿನ ಸ್ಪರ್ಧಿಗಳಿಗೆ ಸಾಮಾನ್ಯ ಸ್ನಾನಗೃಹ ಮತ್ತು ಶೌಚಾಲಯ, ಸರಿಯಾಗಿಲ್ಲದ ಹಾಸಿಗೆಗಳು, ಕುಡಿಯುವ ನೀರಿಗಾಗಿ ಒಂದೇ ನಲ್ಲಿ ಇರುತ್ತದೆ ಮತ್ತು ಅಡುಗೆ ಕೋಣೆ ಇರುವುದಿಲ್ಲ. ನರಕಕ್ಕೆ ಕಳುಹಿಸಲ್ಪಟ್ಟವರು ಆಹಾರಕ್ಕಾಗಿ ಇನ್ನೊಂದು ಬದಿಯವರನ್ನು ಅವಲಂಬಿಸಿರುತ್ತಾರೆ. ಇದನ್ನು ಹೊರತುಪಡಿಸಿ, ಎರಡು ಗುಂಪುಗಳ ನಡುವೆ ಬೇರೆ ಯಾವುದನ್ನೂ ಹಂಚಿಕೊಳ್ಳಲಾಗುವುದಿಲ್ಲ.
ಆದರೆ ಹಿಂದಿ ಬಿಗ್ ಬಾಸ್‌ನಲ್ಲಿ 31 ದಿನಗಳ ನಂತರ ಎರಡೂ ಕಡೆಯ ಸ್ಪರ್ಧಿಗಳನ್ನು ವಿಲೀನಗೊಳಿಸಲಾಗಿತ್ತು. ಮತ್ತು ಎಲ್ಲರಿಗೆ ಸಾಮಾನ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಕನ್ನಡ ಬಿಗ್ ಬಾಸ್ ಈ ಕಾನ್ಸೆಪ್ಟ್ ಹೊಸತಾಗಿತ್ತು. ಹೇಗಿರುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಶನಿವಾರ (ಸೆ.28ರಂದು) ʼರಾಜಾ ರಾಣಿʼ ಫಿನಾಲೆ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ರಿವೀಲ್ ಆಗಲಿದೆ. ಇನ್ನು ಇದೇ ಸೆ.29ರಂದು ಶೋ ಆರಂಭಗೊಳ್ಳಲಿದೆ.
ಇತ್ತೀಚೆಗೆ ಬಿಗ್ ಬಾಸ್‌ಗೆ ಹೋಗುವ ಸ್ಪರ್ಧಿಗಳ ಹೆಸರು ಲೀಕ್ ಆಗಿತ್ತು. ಈ ಪಟ್ಟಿಯಲ್ಲಿ ರೀಲ್ಸ್ ಮೂಲಕ ಖ್ಯಾತಿ ಆಗಿರುವ ಭೂಮಿಕ ಬಸವರಾಜ್, ʼಸತ್ಯʼ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್, ‘ಕನ್ನಡತಿ’ ಸೀರಿಯಲ್ ಖ್ಯಾತಿಯ ಕಿರಣ್ ರಾಜ್, ‘ಒಲವಿನ ನಿಲ್ದಾಣ’ ಸೀರಿಯಲ್ ನಟ ಅಕ್ಷಯ್ ನಾಯಕ್, ಎಸ್ ನಾರಾಯಣ್ ಅವರ ಪುತ್ರ ಪಂಕಜ್, , ನಟಿ ಭಾವನಾ ಮೆನನ್, ಹರಿಪ್ರಿಯಾ, ನಭಾ ನಟೇಶ್ ನಟಿ ಪ್ರೇಮಾ ಅವರ ಹೆಸರು ಕೇಳಿ ಬಂದಿದೆ.
ಆದರೆ ಹರಿಪ್ರಿಯಾ, ತಾವು ಯಾವ್ ಬಿಗ್ ಬಾಸ್‌ಗೂ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.