ಬೆಂಗಳೂರು: ಬಿಗ್ ಬಾಸ್ ಕನ್ನಡ -11(Bigg Boss Kannada-11) ಕನ್ನಡದ ಎಲ್ಲಾ ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ಒಟ್ಟು 17 ಮಂದಿ ಸ್ಪರ್ಧೆಗಳಲ್ಲಿ 7 ಮಂದಿ ನರಕದ ಮನೆಯಲ್ಲಿ ಇದ್ದಾರೆ. 10 ಮಂದಿ ಸ್ವರ್ಗದಲ್ಲಿದ್ದಾರೆ.
ಕೊನೆಯ ಮೂವರು ಸ್ಪರ್ಧಿಗಳು ಇವರೇ..
ಉಗ್ರಂ ಮಂಜು:
ರಂಗಭೂಮಿ ಹಿನ್ನೆಲೆಯಲ್ಲಿ ಬಂದು, ಕಿರುತೆರೆಯಲ್ಲಿ ಮಿಂಚಿದ ‘ಮಂಜು’ ಚಂದನವನದಲ್ಲಿ ‘ಉಗ್ರಂ ಮಂಜು’ ಎಂದೇ ಖ್ಯಾತಿ ಆಗಿದ್ದಾರೆ.
ಸಂತು ಸ್ಟ್ರೇಟ್ ಫಾರ್ವರ್ಡ್, ಕಿರಿಕ್ ಪಾರ್ಟಿ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ!, ಭರಾಟೆ, ದೂರದರ್ಶನ, ಬುದ್ಧಿವಂತ 2, ರಾನಿ, ಮ್ಯಾಕ್ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಕರಾವಳಿ ಬೆಡಗಿ ಮೋಕ್ಷಿತಾ ಪೈ ಎಂಟ್ರಿ:
ಬಿಗ್ ಬಾಸ್ ಕನ್ನಡ-11 (Bigg Boss Kannada-11) ಕರಾವಳಿ ಬೆಡಗಿ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಘಟಾನುಘಟಿ ಸ್ಪರ್ಧಿಗಳು ಹೋಗಿದ್ದಾರೆ. ಒಬ್ಬರಿಗಿಂತ ಒಬ್ಬರು ಡಿಫ್ರೆಂಟ್ ಕ್ಯಾರೆಕ್ಟರ್ ವುಳ್ಳ ಸ್ಪರ್ಧಿಗಳ ನಡುವೆ ಮತ್ತೊಬ್ಬರು ದೊಡ್ಮನೆಗೆ ಪ್ರವೇಶಿಸಿದ್ದಾರೆ.
‘ಪಾರು’ ಧಾರಾವಾಹಿಯಿಂದ ಕರುನಾಡಿನ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಮೋಕ್ಷಿತಾ ಪೈ (Mokshitha Pai) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
‘ಪಾರು’ (Paaru) ಸೀರಿಯಲ್ ಬಳಿಕ ಮೋಕ್ಷಿತಾ ಅವರಿಗೆ ಅಷ್ಟಾಗಿ ಅವಕಾಶ ಸಿಕ್ಕಿಲ್ಲ. ಸ್ನೇಹಿತರೊಂದಿಗೆ ಪ್ರವಾಸ ಮಾಡುತ್ತಿದ್ದ ಮೋಕ್ಷಿತಾ ಅವರಿಗೆ ಬಿಗ್ ಬಾಸ್ ಬಾಗಿಲು ತೆರೆದಿದೆ.
ಕೊನೆಯ ಸ್ಪರ್ಧಿ ರಂಜಿತ್:
ಕಿರುತೆರೆ ನಟ ರಂಜಿತ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.’ಶನಿ’ ಸೀರಿಯಲ್‌ನಿಂದ ಜನಪ್ರಿಯತೆ ಪಡೆದುಕೊಂಡ ಅವರು ‘ಸೂರ್ಯದೇವ’ ಎನ್ನುವ ಪಾತ್ರ ಮಾಡಿ ಮಿಂಚಿದ್ದಾರೆ.