Advertisement
ಮುಂದಿನ ಕ್ಯಾಪ್ಟನ್ ಯಾರು?:ಭವ್ಯ – ಐಶ್ವರ್ಯಾ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಆ್ಯಕ್ಟಿವಿಟಿ ರೂಮ್ ನಲ್ಲಿ ಬಾಕ್ಸ್ ಗಳನ್ನು ಇಡಲಾಗಿದ್ದು, ಆ ಬಾಕ್ಸ್ ಗಳನ್ನು ಆಯಾ ಬಣ್ಣಗಳು ಸೂಚಿಸುವ ಪೆಡಸ್ಟ್ರಿಯಲ್ ಮೇಲೆ ಇಡಬೇಕು. ಈ ಕ್ಯಾಪ್ಟನ್ಸಿ ಓಟದ ಟಾಸ್ಕ್ ನಲ್ಲಿ ಭವ್ಯ ಅವರು ಗೆದ್ದು ಕ್ಯಾಪ್ಟನ್ ಆಗಿದ್ದಾರೆ. 36 ಸೆಕೆಂಡ್ ಗಳ ಅಂತರದಲ್ಲಿ ಭವ್ಯ ಅವರು ಗೆದ್ದಿದ್ದಾರೆ.
Related Articles
Advertisement
ನನಗೂ ನಿಮ್ಗೂ ಕ್ಯಾಪ್ಟನ್ಸಿ ಆಗುವ ಯೋಗ್ಯವೇ ಇಲ್ಲ ಇರಬೇಕು ಮೋಕ್ಷಿತಾ ಎಂದು ಚೈತ್ರಾ ಅವರು ಹೇಳಿದ್ದಾರೆ.
ಲಕ್ಷುರಿ ಪಾಯಿಂಟ್ಸ್ ಗಳಿಸುವ ನಿಟ್ಟಿನಲ್ಲಿ ಸದಸ್ಯರಿಗೆ ಫನ್ ಟಾಸ್ಕ್ ನೀಡಲಾಗಿದೆ.
ಟಾಸ್ಕ್ ಆದ ಬಳಿಕ ತ್ರಿವಿಕ್ರಮ್ ಅವರು ಟಾಸ್ಕ್ ಏರಿಯಾಕ್ಕೆ ಹೋಗಿದ್ದಾರೆ. ಇದಕ್ಕೆ ಭವ್ಯ ಅಲ್ಲಿಗೆ ಹೋಗಬೇಡಿ ಎಂದಿದ್ದಾರೆ. ನಾನೇನು ಸಾಮಾಗ್ರಿ ಮುಟ್ಟಿಲ್ಲ ಜಸ್ಟ್ ನೋಡೋಕೆ ಬಂದಿದ್ದೇನೆ. ನನಗೆ ಕಾಮನ್ ಸೆನ್ಸ್ ಇದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತಿಗೆ ಭವ್ಯ ಅವರು ನಾನು ಹೇಳಿದ್ದನ್ನು ಹೇಳಿದ್ದೇನೆ ಪಾಯಿಂಟ್ಸ್ ಕಟ್ ಆದ್ರೆ ನಾನು ಜವಾಬ್ದಾರಿ ಅಲ್ಲವೆಂದು ಹೇಳಿದ್ದಾರೆ.
ಯಾರು ಉತ್ತಮ – ಕಳಪೆ?:ಈ ವಾರ ಎರಡು ತಂಡಗಳ ನಡುವೆ ನಡೆದ ಟಾಸ್ಕ್ ಗಮನದಲ್ಲಿಟ್ಟುಕೊಂಡು ವಾರದ ಉತ್ತಮ ಹಾಗೂ ಕಳಪೆ ಪಟ್ಟವನ್ನು ಸ್ಪರ್ಧಿಗಳು ನೀಡಿದ್ದಾರೆ. ರಜತ್, ಐಶ್ವರ್ಯಾ, ಮೋಕ್ಷಿತಾ, ಧನರಾಜ್, ಹನುಮಂತು ಅವರು ಚೈತ್ರಾ ಅವರನ್ನು ಈ ವಾರದ ಉಸ್ತುವಾರಿ ಆಟದ ಕಾರಣವನ್ನು ನೀಡಿ ಕಳಪೆಯನ್ನು ನೀಡಿದ್ದಾರೆ. ಆ ಮೂಲಕ ಚೈತ್ರಾ ಅವರು ಸತತ ಮೂರನೇ ಬಾರಿ ಕಳಪೆ ಸ್ಥಾನ ಪಡೆದಿದ್ದಾರೆ. ಕ್ಯಾಪ್ಟನ್ ಭವ್ಯ ಅವರು ತ್ರಿವಿಕ್ರಮ್ ಅವರಿಗೆ ಉತ್ತಮ ನೀಡಿದ್ದು, ಹನುಮಂತು ಅವರಿಗೆ ಕಳಪೆ ನೀಡಿದ್ದಾರೆ. ರಜತ್ ಅವರು ಮೋಕ್ಷಿತಾ ಅವರಿಗೆ ಉತ್ತಮ ನೀಡಿದ್ದು, ಚೈತ್ರಾ ಅವರಿಗೆ ಕಳಪೆಯನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಮಂಜು ಅವರು ತ್ರಿವಿಕ್ರಮ್ ಅವರಿಗೆ ಉತ್ತಮ ನೀಡಿದ್ದು, ಕಳಪೆಯನ್ನು ರಜತ್ ಅವರಿಗೆ ನೀಡಿದ್ದಾರೆ. ಐಶ್ವರ್ಯಾ ಅವರು ಚೈತ್ರಾ ಅವರಿಗೆ ಕಳಪೆ, ರಜತ್ ಅವರಿಗೆ ಉತ್ತಮವನ್ನು ನೀಡಿದ್ದಾರೆ. ಗೌತಮಿ ಅವರು ತ್ರಿವಿಕ್ರಮ್ ಅವರಿಗೆ ಉತ್ತಮ, ಕಳಪೆಯನ್ನು ರಜತ್ ಅವರಿಗೆ ನೀಡಿದ್ದಾರೆ. ಮೋಕ ಅವರು ಧನರಾಜ್ ಅವರಿಗೆ ಉತ್ತಮ, ಚೈತ್ರಾ ಅವರಿಗೆ ಕಳಪೆಯನ್ನು ನೀಡಿದ್ದಾರೆ. ಧನರಾಜ್ ಅವರು ಕಳಪೆಯನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಐಶ್ವರ್ಯಾ ಅವರಿಗೆ ಉತ್ತಮವನ್ನು ನೀಡಿದ್ದಾರೆ. ಚೈತ್ರಾ ಅವರು ತ್ರಿವಿಕ್ರಮ್ ಅವರಿಗೆ ಉತ್ತಮ, ರಜತ್ ಅವರಿಗೆ ಕಳಪೆಯನ್ನು ನೀಡಿದ್ದಾರೆ. ಹನುಮಂತು ಅವರು ಕಳಪೆಯನ್ನು ಚೈತ್ರಾ ಅವರಿಗೆ ನೀಡಿದ್ದು, ತ್ರಿವಿಕ್ರಮ್ ಅವರಿಗೆ ಉತ್ತಮವನ್ನು ನೀಡಿದ್ದಾರೆ. ತ್ರಿವಿಕ್ರಮ್ ಅವರು ಮೋಕ್ಷಿತಾ ಅವರಿಗೆ ಉತ್ತಮ, ಕಳಪೆಯನ್ನು ಹನುಮ ಅವರಿಗೆ ನೀಡಿದ್ದಾರೆ. ಈ ವಾರದ ಉತ್ತಮವಾಗಿ ತ್ರಿವಿಕ್ರಮ್, ಕಳಪೆ ಚೈತ್ರಾ ಅವರಿಗೆ ಸಿಕ್ಕಿದೆ. ಕಳಪೆ ವಿಚಾರದಲ್ಲಿ ಮಂಜು – ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಹಳೆಯ ಮಾತುಗಳನ್ನಿಟ್ಟುಕೊಂಡು ನಿನ್ನದೇನು – ನನ್ನದೇನು ಎನ್ನುವ ಮಾತು ವಾಗ್ವಾದಕ್ಕೆ ತಿರುಗಿದೆ. ಜುಟ್ಟು ಕಾರಣವನ್ನು ಯಾಕೆ ನೀಡ್ತೀಯಾ ಎಂದು ಮಂಜು ಅವರು ರಜತ್ ಅವರಿಗೆ ನೇರವಾಗಿಯೇ ಹೇಳಿದ್ದಾರೆ. ಇಬ್ಬರ ನಡುವೆ ಏಕವಚನದಲ್ಲೇ ಮಾತಿನ ವಾಗ್ವಾದ ನಡೆದಿದೆ. ಟೀಮ್ ಮಾಡ್ಕೊಂಡು ಕಳಪೆ ನೀಡುವುದನ್ನು ಜನ ನೋಡ್ತಾರೆ. ಜನ ಈ ತಪ್ಪನ್ನು ನೋಡುತ್ತಾರೆ. ಇದು ನನಗೆ ಅಭ್ಯಾಸವಾಗಿದೆ ಎಂದು ಚೈತ್ರಾ ಅವರು ಜೈಲು ಸೇರಿದ್ದಾರೆ. ನಾನು ಖುಷಿಯಿಂದಲೇ ಹೋಗ್ತೇನೆ ಎಂದು ಚೈತ್ರಾ ಹೇಳಿದ್ದಾರೆ. ಬೇರೆ ಯಾವ ಯಾವ ಕೇಸ್ ಅಲ್ಲಿ ಜೈಲಿಗೆ ಹೋಗ್ತಾ ಇದ್ದೆ ಇರಬೇಕು ಇಲ್ಲಿ ಮುಗಿಸಿಕೊಂಡು ಹೋಗ್ತಾ ಇದ್ದೇನೆ ಅನ್ನಿಸುತ್ತದೆ ಎಂದು ಚೈತ್ರಾ ಹೇಳಿದ್ದಾರೆ