Advertisement

SonuSrinivasGowda: ಜೈಲಿನಲ್ಲಿನ ಕರಾಳ ದಿನಗಳ ಅನುಭವ ಹಂಚಿಕೊಂಡ ಸೋನು ಗೌಡ

03:32 PM Apr 13, 2024 | Team Udayavani |

ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿರುವ ಬಿಗ್‌ ಬಾಸ್‌ ಹಾಗೂ ಟಿಕ್‌ ಟಾಕ್‌ ಸ್ಟಾರ್ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ತಮ್ಮ ಜೈಲಿನ ಅನುಭವದ ಬಗ್ಗೆ ಮಾತನಾಡಿದ್ದಾರೆ.

Advertisement

ಈ ಬಗ್ಗೆ ತಮ್ಮ ಯೂಟ್ಯೂಬ್‌ ನಲ್ಲಿ ವಿಡಿಯೋ ಮಾಡಿರುವ ಅವರು,  “ಮೊದಲಿಗೆ ನನ್ನನ್ನು ಕಾನೂನತ್ಮಕವಾಗಿ ವಿಚಾರಣೆ ಮಾಡಲೆಂದು ಕರೆದುಕೊಂಡು ಹೋದರು. ಆ ಬಳಿಕ ನನ್ನನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು. ಅಲ್ಲಿಗೆ ಹೋದ ಬಳಿಕ ತುಂಬಾ ಬೇಸರವಾಯಿತು. 23 -24 ರ ವಯಸಿಗೆ ಆ ನಾಲ್ಕು ಗೋಡೆಗಳ ಮಧ್ಯೆ ಇದ್ದೆ. ಅಲ್ಲಿರುವ ಜನ, ಸ್ಥಳ, ವಾತಾವಾರಣ ನೋಡಿ ಯಾಕೆ ಇವೆಲ್ಲಾ ಬೇಕಿತ್ತಾ ಅಂಥ ಅನ್ನಿಸಿತು. ಜೈಲಿನಲ್ಲಿ ನನ್ನ ಅನುಭವ ಹೇಗಿತ್ತು ಅಂದ್ರೆ, ನನ್ನ ರೀತಿಯೇ ಸಾಕಷ್ಟು ಜನ ಇರ್ತಾರೆ. ಏನೇನೋ ಕೇಸ್‌ಗಳು. ಅವರ ಮಧ್ಯೆ ನಾನು ಇದ್ದೆ ಅದಕ್ಕೆ ಏನು ಹೇಳೋದಂತೆಲ್ಲೇ ನನಗೆ ಗೊತ್ತಾಗ್ತಾ ಇಲ್ಲ” ಎಂದು ಹೇಳಿದ್ದಾರೆ.

“ಜೈಲಿನಲ್ಲಿ ಮೂರು ದಿನಕ್ಕೆ ಒಂದು ಸಲಿ ಫೋನ್‌ ಕೊಡ್ತಾರೆ. ಆಗ ನಾವು ಫ್ಯಾಮಿಲಿ ಜೊತೆ ಮಾತನಾಡಬಹುದು, ವಕೀಲರ ಜೊತೆ, ಯಾರ ಜೊತೆ ಬೇಕಾದರೂ ಮಾತನಾಡಬಹುದು. ನನ್ನ ಜೊತೆ ಮಾತನಾಡುವವರು ಇದ್ದರು, ಅನ್‌ ಲಿಮಿಟಿಡ್‌ ಕಾಲ್ಸ್‌ ಕೂಡ ಇತ್ತು. ಆದರೆ ನಾನು ಮಾತನಾಡುತ್ತಿರಲಿಲ್ಲ. ಅಲ್ಲಿದ್ದು ನಮಗೆ ವ್ಯಕ್ತಿಯ ಮೌಲ್ಯ ಗೊತ್ತಾಗುತ್ತದೆ. ನಾಲ್ಕು ಗೋಡೆಯೇ ನಿಮ್ಮ ಜೊತೆ ಏನೆಲ್ಲಾ ಆಯಿತೆಂದು ಹೇಳಿಕೊಡುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೌದಿಯಲ್ಲಿ ಮರಣದಂಡನೆಗೆ ಒಳಗಾದ ಕೇರಳದ ವ್ಯಕ್ತಿಗಾಗಿ 34 ಕೋಟಿ ರೂ ಸಂಗ್ರಹ: ಏನಿದು ಸ್ಟೋರಿ?

“ಸ್ಟೇಷನ್‌ನಲ್ಲಿ ಇದ್ದಾಗ ಅಕ್ಕ ಪಕ್ಕ ಇದ್ದವರ ಫೋನ್ ನೋಡುತ್ತಿದ್ದೆ. ತುಂಬಾ ನೆಗೆಟಿವ್ ಕಾಮೆಂಟ್ಸ್ ಬರುತ್ತಿತ್ತು. ಈ ವೇಳೆ ಮತ್ತೆ ನನ್ನ ಲೈಫ್ ನೆಗೆಟಿವ್ ಆಗಿಬಿಡ್ತು ಅಂತ ಬೇಸರಗೊಂಡಿದ್ದೆ. ನನ್ನ ಇಷ್ಟದ ಜನ, ಕುಟುಂಬ, ಊಟ, ಪೆಟ್ಸ್‌ ಏನೂ ಇಲ್ಲದೆ ನಾನು ಹೇಗೆ ಜೀವನ ಕಳೆದ ಅಂತ ನನಗೆ ಹೇಳೋಕೆ ಆಗ್ತಾ ಇಲ್ಲ. ನನಗೆ ತುಂಬಾ ಬೇಸರವಾಯಿತು. ನನಗೆ ತುಂಬಾನೇ ಖುಷಿ ಆದದ್ದು ಏನೆಂದರೆ ಟ್ರೋಲ್‌ ಪೇಜ್‌ ನವರು ನನಗೆ ಸಪೋರ್ಟ್‌ ಮಾಡಿದ್ದೀರಿ ಅದಕ್ಕೆ ಥ್ಯಾಂಕ್ಸ್”‌ ಎಂದು ಸೋನು ಹೇಳಿದ್ದಾರೆ.

Advertisement

“ಕಷ್ಟದಲ್ಲಿ ಯಾರು ಜೊತೆಗಿರುತ್ತಾರೆ ಎನ್ನುವುದು ಮುಖ್ಯ. ನನಗೆ ಅದು ಈ ಘಟನೆಯಿಂದ ಗೊತ್ತಾಯಿತು. ಜೈಲಿನಲ್ಲಿ ತುಂಬಾ ಸೊಳ್ಳೆ ಇರ್ತಿತ್ತು. ನಾವು ಹೊರಗೆ ನೋಡಿದ ಲೈಫ್ ಬೇರೆ, ಅಲ್ಲಿ ನೋಡಿದ ಲೈಫ್ ಬೇರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದನ್ನೆಲ್ಲಾ ನೋಡಿದೆ ಎನ್ನುವುದು ಬೇಸರ. ನಮ್ಮ ಫ್ಯಾಮಿಲಿ ಹಾಗೂ ಆಪ್ತರ ಸಹಾಯದಿಂದ ಬೇಗ ಹೊರಬಂದೆ. ನಿಯಮಗಳ ಪ್ರಕಾರ ನಾನು ಪ್ರಕರಣದ ಬಗ್ಗೆ ಮಾತನಾಡುವಂತಿಲ್ಲ. ಹಾಗಾಗಿ ಮಾತನಾಡಲಿಲ್ಲ” ಎಂದು ಸೋನು ಹೇಳಿದ್ದಾರೆ.

ಏನಿದು ಪ್ರಕರಣ: ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು. ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಶ್ರೀನಿವಾಸ್‌ ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಏಪ್ರಿಲ್ 6ರಂದು ಕೇಂದ್ರ ಕಾರಾಗೃಹದಿಂದ ಜಾಮೀನು ಮೂಲಕ ಸೋನು ಹೊರ ಬಂದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next