Advertisement

ಸೊಪ್ಪು-ತರಕಾರಿ ಮಾರಿದ ಬಿಗ್‌ಬಾಸ್‌ ರನ್ನರ್‌ ಅಪ್‌ ದಿವಾಕರ್‌

04:28 AM Jun 08, 2020 | Lakshmi GovindaRaj |

ಬಿಗ್‌ಬಾಸ್‌ ಮನೆಗೆ ಹೋಗಿ ರನ್ನರ್‌ ಅಪ್‌ ಆಗಿದ್ದ ದಿವಾಕರ್‌, ಆ ಮನೆಗೆ ಹೋಗುವ ಮುನ್ನ ಸೇಲ್ಸ್‌ ಮ್ಯಾನ್‌ ಆಗಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರ ಮನಗೆದ್ದಿದ್ದ ಅವರು ರನ್ನರ್‌ ಅಪ್‌ ಆಗಿ ಅಲ್ಲಿಂದ ಹೊರಬಂದ ಅವರಿಗೆ ಹೆಸರು ಸಿಕ್ಕಿತ್ತು. ಒಂದೆರೆಡು ಸಿನಿಮಾಗಳಲ್ಲಿ ನಟಿಸಿದರೂ ಕೂಡ. ಆದರೆ, ಕಾಲ ಕ್ರಮೇಣ ಎಲ್ಲರಿಗೂ ಆದಂತೆ, ದಿವಾಕರ್‌ ಬದುಕಲ್ಲೂ ಕೊರೊನಾ ಸಾಕಷ್ಟು ಸಮಸ್ಯೆ ತಂದಿಟ್ಟಿದ್ದು ಸುಳ್ಳಲ್ಲ.

Advertisement

ಬಿಗ್‌ಬಾಸ್‌ ಮನೆಯಿಂದ ಹೊರಬಂದು,ಹೀರೋ ಆಗಿದ್ದರೂ ಸಾಮಾನ್ಯರಂತೆಯೇ ಇರುವ ದಿವಾಕರ್‌, ತಮ್ಮ ಮೂಲ ಸೇಲ್ಸ್‌ ಮ್ಯಾನ್‌ ಕೆಲಸ ಬಿಟ್ಟಿಲ್ಲ. ಹೊರಬಂದರೂ, ಅವರು ಬದುಕಿಗಾಗಿ ಕೆಲಸ ಮಾಡುತ್ತಿದ್ದಾರೆ. ಹೌದು, ದೇಶಾದ್ಯಂತ ಲಾಕ್‌ಡೌನ್‌ ಪರಿಣಾಮ ಅವರು ಬೀದಿಯಲ್ಲಿ ಕೆಲಸ ಮಾಡೋಕೆ ಮುಂದಾಗಿದ್ದಾರೆ. ಹಾಗಂತ ಮೊದಲು ಮಾಡುತ್ತಿದ್ದ ಸೇಲ್ಸ್‌ಮ್ಯಾನ್‌ ಕೆಲಸವಂತೂ ಅಲ್ಲ. ಬದಲಿಗೆ ಅವರು ತರಕಾರಿಗಳನ್ನು ಮಾಡುವ ಮೂಲಕ ನಿತ್ಯ ಬದುಕು ಸವೆಸುತ್ತಿದ್ದಾರೆ.

ಬೆಳಗ್ಗೆ 4 ಗಂಟೆಗೆ ಏಳುವ ದಿವಾಕರ್‌, ಯಲಹಂಕ ಮಾರ್ಕೆಟ್‌ನಿಂದ ತರಕಾರಿ ತಂದು ದಿವಾಕರ್‌ ತರಕಾರಿ ಮಾಡುತ್ತಿದ್ದಾರೆ. ಜೊತೆಗೆ ಈ ವೇಳೆ ಅವರು ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ, ದಿವಾಕರ್‌ ಅಭಿನಯದ ಗುಲಾಲ್‌ ಡಾಟ್‌ ಕಾಮ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದರೊಂದಿಗೆ ದಿವಾಕರ್‌ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಕಾಯಕವೇ ಕೈಲಾಸ ಎನ್ನುವ ದಿವಾಕರ್‌, ಯಾವ ಕೆಲಸವಾದರೂ, ಸರಿ ಪ್ರೀತಿಯಿಂದ ಮಾಡಬೇಕು ಎನ್ನುವ ಸಿದ್ಧಾಂತದಲ್ಲೆ ಅವರೀಗ ತರಕಾರಿ ಮಾರುವ ಕೆಲಸದಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next