Advertisement
ಎಲೆಕ್ಟ್ರಾನಿಕ್ ಸಿಟಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಕೋರಮಂಗಲ, ಯಶವಂತಪುರ, ಯಲಹಂಕ, ಮಲ್ಲೇಶ್ವರ, ಜಯನಗರ, ಜೆಪಿ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಅಪಾರ್ಟ್‌ಮೆಂಟ್‌ಗಳ ಮುಂದೆ ಈಗಾಗಲೇ ದೊಡ್ಡ ಪರದೆಗಳು ನಿಂತಿವೆ. ಅಪಾರ್ಟ್‌ಮೆಂಟ್ ಆವರಣದಲ್ಲೇ ಫುಡ್‌ಕೌಂಟರ್ ತೆರೆದು ಉಪಾಹಾರ ನೀಡುವ ವ್ಯವಸ್ಥೆ ಯೂ ನಡೆಯಲಿದೆ. ಬಾಡಿಗೆಗೆ ಇರುವ ಪ್ಲ್ರಾಟ್‌ಗಳಲ್ಲೂ ಇದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈಗಾ ಗಲೇ ಸಾಕಷ್ಟು ಪ್ಲ್ರಾಟ್‌ಗಳು ಬುಕ್ ಆಗಿವೆ. ಅಪಾ ರ್ಟ್‌ಮೆಂಟ್ ನಿವಾಸಿಗಳು ಕ್ರಿಕೆಟ್ ವೀಕ್ಷಿಸಲು ತುದಿಗಾಲಲ್ಲಿ ನಿಂತು ಕಾತುರರಾಗಿದ್ದಾರೆ. ಇನ್ನು ಸೆಂಚುರಿ ಕ್ಲಬ್, ಗಾಲ್ಫ್ ಕ್ಲಬ್, ಜಯನಗರ ಕ್ಲಬ್ ಸೇರಿದಂತೆ ಬೆಂಗಳೂರಿನಲ್ಲಿರುವ ಶೇ.70ರಷ್ಟು ಕ್ಲಬ್‌ಗಳಲ್ಲಿ ಕ್ರಿಕೆಟ್ ವಿಶ್ವಕಪ್ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
-ಬೈಗ್ ಬ್ರೂಸ್ಕಿ ಬ್ರೂಯಿಂಗ್ ಕಂಪನಿ- ಹೆಣ್ಣೂರು, ಗೋಲ್ಡ್ ರಶ್ ಬ್ರೂಸ್-ಹಳೆ ಮದ್ರಾಸು ರಸ್ತೆ, ಬ್ರೂಕ್ಲಿನ್-ಕಲ್ಯಾಣ ನಗರ, ಸೀಕ್ರೆಟ್ ಸ್ಟೋರಿ- ಇಂದಿರಾನಗರ, ರಾಹಿ ನಿಯೋ ಕಿಚನ್ ಆ್ಯಂಡ್ ಬಾರ್-ಸೇಂಟ್ ಮಾರ್ಕ್ಸ್ ರಸ್ತೆ, ಡ್ಯಾಡಿ- ಇಂದಿರಾನಗರ, ಪ್ಲೈ ಓವರ್ ಡ್ರಿಂಕರಿ-ಎಸ್ಟೀಮ್ ಮಾಲ್, ಹೆಬ್ಟಾಳ, ಬಿಗ್ ಪಿಚರ್-ಸರ್ಜಾಪುರ ರಸ್ತೆ, ಲಾರ್ಡ್ ಆಫ್ ದಿ ಡ್ರಿಂಕ್ಸ್-ವೈಟ್‌ಫೀಲ್ಡ್ ಸೇರಿದಂತೆ ನಗರದಲ್ಲಿರುವ ಪ್ರಸಿದ್ಧ ಬಾರ್ ಆ್ಯಂಡ್ ರೆಸ್ಟೋ ರೆಂಟ್‌ಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಗಲ್ಲಿ-ಗಲ್ಲಿಗಳಲ್ಲಿ ವೀಕ್ಷಣೆ:
ಬೆಂಗಳೂರಿನ ಗಲ್ಲಿ-ಗಲ್ಲಿಗಳಲ್ಲಿರುವ ಹೋಟೆಲ್, ಅಂಗಡಿಗಳಲ್ಲಿ ಟೀವಿ ವೀಕ್ಷಿಸಲು ನೂರಾರು ಮಂದಿ ಸೇರುವ ಸಾಧ್ಯತೆಗಳಿವೆ. ಗಲ್ಲಿ-ಗಲ್ಲಿಗಳಲ್ಲೂ ಕ್ರಿಕೆಟ್ ಹುಚ್ಚು ಹೆಚ್ಚಾಗಿದ್ದು, ಮದ್ಯ ಮಾರಾಟದಲ್ಲಿ ಭಾರಿ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮಾಲೀಕರು ತಿಳಿಸಿದ್ದಾರೆ. ಆದರೆ, ಭಾನುವಾರ ಹೋಟೆಲ್, ಅಂಗಡಿ, ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ವ್ಯಾಪಾರವಾಗುತ್ತದೆ. ವಿಶ್ವಕಪ್ ಪಂದ್ಯ ಇರುವ ಹಿನ್ನೆಲೆಯಲ್ಲಿ ರಸ್ತೆಗಿಳಿಯುವವರ ಪ್ರಮಾಣ ಕಡಿಮೆಯಾಗಲಿದೆ.
ಸ್ವಿಗ್ಗಿ, ಜೊಮ್ಯಾಟೋಗೆ ಹೆಚ್ಚಿನ ಬೇಡಿಕೆ:
ವಿಶ್ವಕಪ್ ಪಂದ್ಯ ವೀಕ್ಷಿಸುವ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಭಾನುವಾರ ಸ್ವಿಗ್ಗಿ, ಜೋಮ್ಯಾಟೋ ಸೇರಿದಂತೆ ಆನ್‌ಲೈನ್ ಮೂಲಕವೇ ಹೆಚ್ಚಿನ ಆಹಾರ ತರಿಸಿಕೊಳ್ಳಲಿದ್ದಾರೆ. ಹೀಗಾಗಿ ಆನ್‌ಲೈನ್ ಆಹಾರ ಡೆಲಿವರಿ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಹೋಟೆಲ್ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.