Advertisement

Vijayapura; ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಕ್ರಾಂತಿ: ಯತ್ನಾಳ

04:50 PM Dec 23, 2023 | keerthan |

ವಿಜಯಪುರ: ರಾಜ್ಯ ಬಿಜೆಪಿ ಪಕ್ಷದಲ್ಲಿ ಲೋಕಸಭೆ ಚುನಾವಣೆ ಬಳಿಕ ಬಹುದೊಡ್ಡ ಕ್ರಾಂತಿ ಆಗಲಿದೆ. ಅಲ್ಲಿಯವರೆಗೆ ಪಾಪ ಅವರಿಗೆ ಲೋಕಸಭೆ ಚುನಾವಣೆವರೆಗೆ ಸಂಭಾಳಿಸುವುದು ಬೇಕಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗಲಿದ್ದಾರೆ. ವಂಶವಾದ, ಭ್ರಷ್ಟಾಚಾರ, ಹೊಂದಾಣಿಕೆ ಮೂರು ಖತಂ ಕರೇಗಾ ಎಂದಿದ್ದು, ಚುನಾವಣೆವರೆಗೆ ಎಲ್ಲವನ್ನೂ ಜಗ್ಗಿಕೊಂಡು ಹೋಗುತ್ತಾರೆ ಎಂದು ಪರೋಕ್ಷವಾಗಿ ರಾಜ್ಯದಲ್ಲಿ ಪಕ್ಷದ ನಾಯಕತ್ವದ ಬದಲಾವಣೆ ಆಗಲಿದೆ ಎಂಬ ಭವಿಷ್ಯ ನುಡಿದ್ದಾರೆ.

ಇಷ್ಟಕ್ಕೂ ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯಲ್ಲ, ತಿರುಕನ ಕನಸಿನಂತೆ ನಾನು ಹಗಲುಗನಸು ಕಾಣುವುದಿಲ್ಲ. ನನಗೆ ಏನೂ ಕೊಡುವುದು ಬೇಕಿಲ್ಲ, ಯಾವ ಅಧಿಕಾರದ ಅವಕಾಶವೂ ಬೇಕಿಲ್ಲ ಎಂದರು.

ನಕಲಿ ಗಾಂಧಿಗಳು ಬೆಳಗಾವಿಗೆ ಬರಬೇಕಿತ್ತು: ಉತ್ತರ ಪ್ರದೇಶದಲ್ಲಿ ಬೆತ್ತಲೆ ಪ್ರಕರಣ ನಡೆದರೆ ಬೈಕ್ ಮೇಲೆ ಹೋಗಿ ಹೋರಾಟ ಮಾಡುವ ನಕಲಿ ಗಾಂಧಿಗಳಾದ ರಾಹುಲ್ ಹಾಗೂ ಪ್ರಿಯಾಂಕಾ ಬೆಳಗಾವಿಗೂ ಬರಬೇಕಿತ್ತು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜಸ್ತಾನ ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಅಲ್ಲಿಗೆ ಹೋಗಿ ಸಂತ್ರಸ್ತರನ್ನು ಸಂತೈಸಲಿಲ್ಲ. ಇದೀಗ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮಹಿಳೆಯ ಬೆತ್ತಲೆ ಪ್ರಕರಣದ ನಡೆದಾಗ ಇಲ್ಲಿಗೂ ಬರಬೇಕಿತ್ತು ಎಂದು ಟೀಕಿಸಿದರು.

Advertisement

ಮಮತಾ ಬ್ಯಾನರ್ಜಿ ಆಡಳಿತ ಇರುವ ಪಶ್ಚಿಮ ಬಂಗಾಳದಲ್ಲಿ ನಿತ್ಯವೂ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆದರೂ ಇವರು ಅಲ್ಲಿಗೆ ಹೋಗುವುದಿಲ್ಲ. ಬದಲಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ಹೋಗಿ ಪ್ರತಿಭಟಿಸುವ ಮೂಲಕ ಒಂದು ನಿರ್ಧಿಷ್ಟ ಕೋಮಿನ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಜಾಗೃತ ಸ್ಥಿತಿಯಲ್ಲಿರುವ ದೇಶದ ಮತದಾರರು 2024 ರಲ್ಲಿ ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದರು.

ಇದನ್ನೂ ಓದಿ:Shimogga: ತೀರ್ಥಹಳ್ಳಿಯಲ್ಲಿ ಆಂಗ್ಲ ಭಾಷೆಯ ಬೋರ್ಡ್ ಗೆ ಕಪ್ಪು ಮಸಿ ಬಳಿದ ಕರವೇ

ರಾಜ್ಯ ಸರ್ಕಾರರ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ವಿಷಯ ಗಂಭೀರವಾಗಿದ್ದರೂ, ಸರ್ಕಾರದ ನಿರ್ಲಕ್ಷ ವಹಿಸಿರಿವುದು ದುರಂತ ಎಂದರು.

ಭಯೋತ್ಪಾದನೆಯಂಥ ಘಟನೆಗಳ ವಿಷಯದಲ್ಲೂ ಏನೂ ಆಗಿಲ್ಲ, ಗಂಭೀರವಾಗಿ ಪರಿಗಣಿಸಬೇಡಿ ಎಂಬಂತೆ ಗೃಹ ಸಚಿವರೇ ಹೇಳುವಾಗ ಸರ್ಕಾರದ ಉದ್ಧಟತನಕ್ಕೆ ಇದಕ್ಕಿಂತ ನಿರ್ಲಕ್ಷದ ನಡೆ ಬೇಕೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next