ನವ ದೆಹಲಿ : ಕೋವಿಡ್1 19 ಸೋಂಕಿನ ನಡುವೆಯೇ ಹಲವಾರು ಆದಾಯ ತೆರಿಗೆ ಗಡುವನ್ನು ಸರ್ಕಾರ ವಿಸ್ತರಿಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಮಾತ್ರವಲ್ಲದೇ, ಸೋಂಕಿನ ಎರಡನೇ ಸಂದರ್ಭದಲ್ಲಿ ಹಾಗೂ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಈ ಸಂಕಷ್ಟದ ದಿನಮಾನಗಳಲ್ಲೂ ಕೋವಿಡ್ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಘೋಷಿಸಿದೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಉದಾಹರಣೆ ಇಲ್ಲ : ಪಾಟೀಲ್
ಮಾತ್ರವಲ್ಲದೇ, ಕೋವಿಡ್ 19 ಸಂದರ್ಭದಲ್ಲಿ ಉದ್ಯೋಗಿಯೊಬ್ಬರು ಮೃತಪಟ್ಟರೇ, ಉದ್ಯೋಗದಾತರಿಂದ ಅಥವಾ ಕಂಪೆನಿಯಿಂದು ಕುಟುಂಬದವರು ಹಣವನ್ನು ಪಡೆದಲ್ಲಿ ಅದು ತೆರಿಗೆ ಮುಕ್ತವಾಗಿರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇನ್ನು ಕಂಪೆನಿ ತನ್ನ ನೌಕರರ ಕೋವಿಡ್ ಚಿಕತ್ಸೆಗಾಗಿ ಖರ್ಷು ಮಾಡುವ ಯಾವುದೇ ಮೊತ್ತವನ್ನು ಹಾಗೂ ಚಿಕಿತ್ಸೆಗೆ ನೀಡಲಾಗುವ ಮೊತ್ತ ಯಾರಗೆ ಪಾವತಿಸಲಾಗುತ್ತದೆ ಎನ್ನುವುದರ ಮೇಲೆ ಯಾವುದೇ ರೀತಿಯ ತೆರಿಗೆ ಹೇರಲಾಗುವುದಿಲ್ಲವೆಂದು ಎಂದು ಸಹ ಮಾಹಿತಿ ನೀಡಿದೆ.
ಇನ್ನು, ಟಿಡಿಎಸ್ ರಿಟರ್ನ್ ಕೊನೆಯ ದಿನಾಂಕವನ್ನು ಜೂನ್ 30 ರಿಂದ 2021 ಜುಲೈ 15 ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ : ವದಂತಿಗಳಿಗೆ ಕಿವಿಗೊಡಬೇಡಿ, ಹಿಂಜರಿಕೆ ಬಿಟ್ಟು ಲಸಿಕೆ ಪಡೆಯಿರಿ: ಪ್ರಧಾನಿ ಮೋದಿ