Advertisement

ಚಂಪಾ ಅಗಲಿಕೆ ನಾಡಿಗೆ ದೊಡ್ಡ ನಷ್ಟ

11:17 PM Jan 13, 2022 | Team Udayavani |

ಚನ್ನಪಟ್ಟಣ: ಅಪ್ಪಟ ಕನ್ನಡ ಅಭಿಮಾನಿ, ಪ್ರಶ್ನಾತೀತ ಕನ್ನಡ ಹೊರಾಟಗಾರ ಪ್ರೊ. ಚಂದ್ರಶೇಖರ ಪಾಟೀಲರ ನಿಧನದಿಂದ ಕನ್ನಡ ಚಳವಳಿಗೆ ದೊಡ್ಡ ನಷ್ಟವಾಗಿದೆ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶಿವಮಾದು ಕಂಬನಿ ಮಿಡಿದರು. ಪಟ್ಟಣದ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಚಂಪಾ ಅವರ ಶ್ರದ್ಧಾಂಜ ಲಿ ಸಭೆಯಲ್ಲಿ ಮಾತನಾಡಿದರು. ಚಂಪಾ ಅವರು ಸಾಹಿತ್ಯ ಕೃಷಿ ಜತೆಗೆ ನಾಡು -ನುಡಿಗಾಗಿ ತಮ್ಮ ಬದುಕು ಮೀಸಲಿಟ್ಟಿ ದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ತತ್ವ-ಸಿದ್ಧಾಂತವುಳ್ಳ ಮೇರು ವ್ಯಕ್ತಿತ್ವ: ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿಂ. ಲಿಂ. ನಾಗರಾಜು ಮಾತನಾಡಿ, ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಲೋಹಿಯಾವಾದಿ, ಸಮಾಜವಾದಿ ಚಿಂತನೆಯಿಂದ ರೂಪುಗೊಂಡ ಸ್ವತಂತ್ರ ಪ್ರಜ್ಞೆಯ, ನಿರ್ಭೀತ ಲೇಖಕರಲ್ಲಿ ಚಂದ್ರಶೇಖರ ಪಾಟೀಲರೂ ಒಬ್ಬರು, ಸಂಕ್ರಮಣ ಪತ್ರಿಕೆಯ ಮೂಲಕ ನೂರಾರು ಕವಿಗಳನ್ನು ಬೆಳೆಸಿದವರು ಪ್ರೊ.ಚಂದ್ರಶೇಖರ ಪಾಟೀಲ. ತಾವು ನಂಬಿದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದ ಮೇರು ವ್ಯಕ್ತಿತ್ವ ಅವರದು ಎಂದು ಸ್ಮರಿಸಿದರು. ಜನವಿರೋಧಿ ಸರ್ಕಾರಕ್ಕೆ ತರಾಟೆ : ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಯೋಗೇಶ್‌ ಚಕ್ಕೆರೆ ಮಾತನಾಡಿ, ಚಂಪಾ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಗೋಕಾಕ್‌ ಚಳವಳಿ ಸೇರಿದಂತೆ ಹಲವಾರು ಹೋರಾಟಗಳನ್ನು ರೂಪಿಸಿದ್ದ ಲ್ಲದೇ ಮುಂಚೂಣಿಯಾಗಿ ನಿಂತಿದ್ದ ಅವರು ಅಭಿವ್ಯಕ್ತಿ ಸ್ವಾತಂತ್ರÂದ ಪ್ರತೀಕವಾಗಿದ್ದರು. ರಾಜ್ಯದಲ್ಲಿ ಏನಾದರೂ ಸಮಸ್ಯೆ ಉದ್ಭವವಾದಾಗ ಆಳುವ ಸರ್ಕಾರದ ಜನ ವಿರೋಧಿ ಧೋರಣೆ ಖಂಡಿಸುತ್ತಿದ್ದರು. ಕನ್ನಡ ಶಾಲೆಗಳ ಉಳಿವಿಗಾಗಿ ನಡೆದ ಹೋರಾಟದಲ್ಲಿ ಧ್ವನಿ ಎತ್ತಿದ ಹಿರಿಯ ಜೀವಿ ಎಂದು ಬಣ್ಣಿಸಿದರು. ಚಂಪಾ ಆಶಯ ಉಳಿಸಿ ಬೆಳೆಸಿ: ಹಿರಿಯ ಸಾಹಿತಿ ಎಲೆಕೇರಿ ಶಿವರಾಂ ಮಾತನಾಡಿ ಚಂಪಾ ಅವರು, ಪ್ರಗತಿಪರ, ಜೀವಪರ ಚಟುವಟಿಕೆಗಳಲ್ಲಿ ಮುಂಚೂ  ಣಿಯಲ್ಲಿದ್ದರು. ಬಹುತ್ವ, ಸಮಾಜವಾದಿ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ನಾವೆಲ್ಲರೂ ಅವರ ಆಶಯ ಉಳಿಸಿ ಬೆಳೆಸಬೇಕು ಎಂದರು. ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭುಗೌಡ, ಭಾರತ ವಿಕಾಸ ಪರಿಷತ್ತು ಅಧ್ಯಕ್ಷ ವಸಂತ್‌ಕುಮಾರ್‌, ಕಾರ್ಯ  ದರ್ಶಿ ಕಾಡಯ್ಯ, ಉಪ ಪ್ರಾಂಶುಪಾಲ ಸಿ.ಬಿ.ಕುಮಾರ್‌, ಉಪನ್ಯಾಸಕ ಇಂದ್ರಕುಮಾರ್‌, ಶಿಕ್ಷಕರಾದ ದೇವರಾಜು, ಕರಿಯಪ್ಪ, ಸದಾನಂದ, ಪ್ರಕಾಶ್‌ ರೆಡ್ಡಿ, ರಂಗಭೂಮಿ ಕಲಾವಿದರಾದ ದಶವಾರ ಮಹೇಶ್‌, ಕುಂತೂರು ದೊಡ್ಡಿ ಪುಟ್ಟರಾಜು, ಲಿಪಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಶಾಂತ್‌ ಶರ್ಮಾ, ಸದಾನಂದ, ಉಮೇಶ್‌ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೊದಲು ಚಂಪಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next