Advertisement

ಬಿಗ್‌ಬಾಸ್‌ 2 ವಾರ ಮುಂದಕ್ಕೆ? ಪ್ರಥಮ್‌, ಮಾಳವಿಕಾ ಔಟಾಗ್ತಾರಾ?

03:45 AM Jan 08, 2017 | |

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಬಿಗ್‌ಬಾಸ್‌ಮುಂದಿನ ವಾರ ಗ್ರ್ಯಾಂಡ್‌ ಫಿನಾಲೆ ತಲುಪಬೇಕಿತ್ತು. ಆದರೆ, ಹಾಗಾಗುತ್ತಿಲ್ಲ! 

Advertisement

ಹೌದು, ಬಿಗ್‌ಬಾಸ್‌ ರಿಯಾಲಿಟಿ ಶೋ ಇನ್ನೂ ಎರಡು ವಾರ ಮುಂದುವರೆಯಲಿದೆ. ಅದನ್ನು ಕಾರ್ಯಕ್ರಮದ ನಿರ್ವಾಹಕ ಕಿಚ್ಚ ಸುದೀಪ್‌ ಪ್ರಕಟಿಸಿದ್ದಾರೆ. ಆದರೆ, ಏಕೆ ಮುಂದುವರೆಯಲಿದೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ನೀಡಿಲ್ಲ.

ಇನ್ನು, ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದಾರೆ. ಒಬ್ಬರು ಪ್ರಥಮ್‌, ಇನ್ನೊಬ್ಬರು ಮಾಳವಿಕ. ಆದರೆ, ಬಿಗ್‌ಬಾಸ್‌ಗೆ ಟ್ವಿಸ್ಟ್‌ ಕೊಡುವ ಕಾರಣಕ್ಕಾಗಿ ಈ ಹಿಂದೆ ಶಾಲಿನಿ ಹಾಗೂ ಶೀತಲ್‌ಶೆಟ್ಟಿ ಅವರನ್ನು ಸೀಕ್ರೇಟ್‌ ರೂಮ್‌ಗೆ ಕಳುಹಿಸಿದಂತೆ ಇವರಿಬ್ಬರನ್ನೂ ಅಥವಾ ಇಬ್ಬರಲ್ಲಿ ಒಬ್ಬರನ್ನು ಸೀಕ್ರೇಟ್‌ ರೂಮ್‌ನಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಅದಕ್ಕೆ ಭಾನುವಾರ ಖಚಿತ ಉತ್ತರ ಸಿಗಲಿದೆ.

ಇನ್ನೊಂದು ಸುದ್ದಿಯೆಂದರೆ, ಬಹುತೇಕ ಕಡೆ ಈ ಬಾರಿಯ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ರೇಖಾ ಅವರೇ ಗೆಲ್ಲಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದುವರೆಗೆ ಹೊರಬಂದಿರುವ ಸ್ಪರ್ಧಿಗಳ ಪ್ರಕಾರ, ರೇಖಾ ಅವರು ಉತ್ತಮವಾಗಿ ಆಟವಾಡುತ್ತಿದ್ದು, ಅವರೇ ಬಿಗ್‌ಬಾಸ್‌ ಆಗುವ ಸಾಧ್ಯತೆ ಇದೆ. ಪ್ರಥಮ್‌ ಹಾಗೂ ಮಾಳವಿಕ ಎಲಿಮಿನೇಟ್‌ ಆಗುವುದರೊಂದಿಗೆ ಬಿಗ್‌ಬಾಸ್‌ ಮನೆಯಲ್ಲೀಗ ಭುವನ್‌, ಕಿರಿಕ್‌ ಕೀರ್ತಿ, ಶಾಲಿನಿ, ಮೋಹನ್‌ ಹಾಗೂ ರೇಖಾ ಉಳಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next