ಮಹಾರಾಷ್ಟ್ರ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ನೇತೃತ್ವದ ಯುವಸೇನಾದ ಮುಖಂಡ ವಿಕಾಸ್ ಗೋಗವಾಲೆ ಬುಧವಾರ (ಜುಲೈ 13) ಮುಖ್ಯಮಂತ್ರಿ ಏಕನಾಥ ಶಿಂಧೆ ಬಣವನ್ನು ಸೇರ್ಪಡೆಯಾಗಿದ್ದು, ಇದರಿಂದ ಆದಿತ್ಯ ಠಾಕ್ರೆಗೆ ತೀವ್ರ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮುಸಲ್ಮಾನ ಹಿರಿಯರ ವಾಗ್ದಾನ ಸುಳ್ಳಾಗಿದೆ: ಈಶ್ವರಪ್ಪ ಕಿಡಿ
ವಿಕಾಸ್ ಗೋಗವಾಲೆ ಅವರ ತಂದೆ ಭರತ್ ಗೋಗವಾಲೆ ಶಿಂಧೆ ಬಣದ ಮುಖ್ಯ ಸಚೇತಕರಾಗಿದ್ದಾರೆ. ಮಂಗಳವಾರ ರಾತ್ರಿ ವಿಕಾಸ್ ಮುಖ್ಯಮಂತ್ರಿ ಶಿಂಧೆ ಅವರ ನಿವಾಸಕ್ಕೆ ಆಗಮಿಸಿದ್ದರು. ಗುರು ಪೂರ್ಣಿಮೆಗೂ ಮುನ್ನಾ ವಿಕಾಸ್ ಶಿಂಧೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಈ ವಾರದಲ್ಲಿ ಯುವಸೇನಾದ 50 ಪದಾಧಿಕಾರಿಗಳು ಶಿಂಧೆ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವಿಕಾಸ್ ಗೋಗವಾಲೆ ತಿಳಿಸಿದ್ದಾರೆ. ಮಂಗಳವಾರ ಶಿವಸೇನಾ ವಕ್ತಾರ, ಮುಂಬೈನ ಮಾಜಿ ಕೌನ್ಸಿಲರ್ ಶೀತಲ್ ಮ್ಹಾತ್ರೆ ಹಾಗೂ ಶಿವಸೇನಾ ಕಾರ್ಯಕರ್ತರು ಶಿವಸೇನಾ ಬಣವನ್ನು ಸೇರಿದ್ದರು.
ಕಳೆದ ತಿಂಗಳು ಶಿವಸೇನಾ ಮುಖಂಡ ಏಕನಾಥ ಶಿಂಧೆ ಬಂಡಾಯ ಸಾರುವ ಮೂಲಕ ಉದ್ಧವ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಜೂನ್ 30ರಂದು ಪತನಗೊಂಡಿತ್ತು. ನಂತರ ಬಿಜೆಪಿ ಬೆಂಬಲಗೊಂದಿಗೆ ಏಕನಾಥ ಶಿಂಧೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಆದರೆ ಈವರೆಗೂ ಯಾವುದೇ ಸಚಿವರು ಪ್ರಮಾಣವಚನ ಸ್ವೀಕರಿಸಿಲ್ಲ.