Advertisement

ಒಂದು ದಿನದ ಮಟ್ಟಿಗೆ ರೈತರಾಗಿ!

04:06 PM May 20, 2017 | Team Udayavani |

ಮಳೆ ಬಿದ್ದಿದೆ. ಮಣ್ಣನ್ನು ಉಳುಮೆ ಮಾಡ್ಬೇಕು. ಸಾಲು ಸಾಲಲ್ಲಿ ಬೀಜ ಬಿತ್ತಬೇಕು… ಕೊಟ್ಟಿಗೆಯಲ್ಲಿ ಜಾನುವಾರು ಹಸಿದಿದೆ. ಅದಕ್ಕೆ ಕುಡಿಯಲು ನೀರು, ಕಲಗಚ್ಚು ತಿಳಿ ನೀಡ್ಬೇಕು. ಹಣ್ಣಿನ ಸಿಪ್ಪೆ ಕೊಟ್ರೆ ಅದಕ್ಕೆ ಗಮ್ಮತ್ತು ಊಟ. ಬೆಳಗ್ಗೆ ಹುಲ್ಲು, ಸಂಜೆ ತಿನ್ನಲು “ಹಿಂಡಿ’ ಕೊಟ್ಟರೂ, ಚಪ್ಪರಿಸ್ಕೊಂಡು ತಿನ್ನುತ್ತೆ… ಸಗಣಿ ಹಾಕಿದ್ದನ್ನು ಬಾಚಿ, ಗುಂಡಿಗೆ ಗೊಬ್ಬರ ಹಾಕ್ಬೇಕು…

Advertisement

ರೈತನೊಬ್ಬನ ದಿನಚರಿ ಇದು. ಫಾರ್‌ ಎ ಚೇಂಜ್‌, ರೈತ ಮಾಡೋ ಈ ಕೆಲ್ಸವನ್ನೇ ಆಫೀಸಿನಲ್ಲಿ ಕಂಪ್ಯೂಟರಿನ ಮುಂದೆ ಕೂತವರೂ ಮಾಡಿದ್ರೆ? ಇಂಥದ್ದೊಂದು ಚಾನ್ಸ್‌ ಕೊಡುವ ಫಾರ್ಮ್ ಒಂದಿದೆ. ಒಂದು ದಿನದ ಮಟ್ಟಿಗೆ ನೀವೇ ಇಲ್ಲಿ ರೈತರಾಗಿ, ಹೊಲದಲ್ಲಿ ದುಡೀಬಹುದು. ಹಸುಗಳ ಮೈಡವಿ, ಅವಕ್ಕೆ ಮೇವುಣ್ಣಿಸಬಹುದು. ಬೆಂಗ್ಳೂರು ಸಮೀಪದ “ಬಿಗ್‌ ಬಾರ್ನ್ ಫಾರ್ಮ್’ ನಿಮ್ಮನ್ನು ಒಂದು ದಿನ ಮಟ್ಟಿಗೆ ರೈತರನ್ನಾಗಿಸುತ್ತೆ!

ಏನೇನಿದೆ ಇಲ್ಲಿ?
ಮಳೆ ಬೀಳುವ ಮುಂಚೆ ಇಲ್ಲಿಗೆ ಹೋದ್ರೆ ಭರ್ತಿ ಕೆಲ್ಸ ಇರುತ್ತೆ. ಮಣ್ಣನ್ನು ಉಳುಮೆ ಮಾಡಿ ತರಕಾರಿ ಸಾಲುಗಳನ್ನು ನಿರ್ಮಿಸºಹುದು. ಇಲ್ಲಿನ ರೈತ ಮಾರ್ಗದರ್ಶಕರು ನಿಮಗೆ ಕೃಷಿಪಾಠ ಹೇಳಿಕೊಡ್ತಾರೆ. ನಿಮ್ಮ ಕೈಯಿಂದಲೇ ಕೆಲವು ಕೆಲಸಗಳನ್ನು ಮಾಡಿಸಿ, ಅಪರೂಪದ ಅನುಭವ ಕಲ್ಪಿಸುತ್ತಾರೆ. ಇಲ್ಲಿನ ಮೇವಿನ ರಾಶಿಯಿಂದ ಹುಲ್ಲಿನ ಕಟ್ಟುಗಳನ್ನು ತೆಗೆದು, ಹಸುಗಳಿಗೆ ಉಣ್ಣಿಸಬಹುದು. ನೀರು ಕೊಟ್ಟು ಅವುಗಳ ಬಾಯಾರಿಕೆ ತಣಿಸºಹುದು. ಕುರಿಗಳು ಇರುತ್ತವೆ. ಅವುಗಳಿಗೂ ಮೇವುಣ್ಣಿಸಬಹುದು.

ಮಕ್ಕಳು ಥ್ರಿಲ್ಲಾಗ್ತಾರೆ!
ವಾರವಿಡೀ ಕಂಪ್ಯೂಟರಿನ ಮುಂದೆ ಕುಳಿತು ಕೆಲ್ಸದಲ್ಲಿ ಮುಳುಗಿ ಹೋಗುವ ಟೆಕ್ಕಿಗಳ ನೆಚ್ಚಿನ ಆಯ್ಕೆ ಇದು. “ಕೃಷಿಯ ಚಟುವಟಿಕೆಗಳು ಟೆನÒನ್‌ ಓಡಿಸುತ್ತೆ’ ಎನ್ನುತ್ತಾರೆ ಇಲ್ಲಿಗೆ ಭೇಟಿ ನೀಡಿದ ಸಾಫ್ಟ್ವೇರ್‌ ತಂತ್ರಜ್ಞ ಆರ್‌. ಮೋಹನ್‌. ಕಂಪ್ಯೂಟರಿನ ಮುಂದೆ ಕುಳಿತು ವಾರವಿಡೀ ಕೆಲಸದ ಒತ್ತಡದಲ್ಲಿದ್ದವರು ಒಮ್ಮೆ ಹೀಗೆ ಹೊಲಕ್ಕೆ ಇಳಿದರೆ, ಅವರ ಒತ್ತಡವನ್ನೆಲ್ಲ ಹೀರಿಕೊಳ್ಳುವ ಜಾದೂಗಾರಿಕೆ ರೈತನ ಕಸುಬಿಗಿದೆ. 

ಇಂಥ ಅನುಭವ ದೊಡ್ಡವರಿಗಾದರೆ, ಮಕ್ಕಳು ಇಲ್ಲಿ ವಿಶೇಷ ಆನಂದ ಅನುಭವಿಸುತ್ತಾರೆ. ಮೇಕೆ, ಹಸುಗಳನ್ನು ಆರೈಕೆ ಮಾಡುವಾಗ ಅವುಗಳ ಖುಷಿಯೇ ಬೇರೆ. ಅಲ್ಲದೆ, ಇಲ್ಲಿನ ಮರಗಳಿಗೆ ಅಲ್ಲಲ್ಲಿ ಜೋಕಾಲಿ ಕಟ್ಟಿದ್ದಾರೆ. ಅದರಲ್ಲಿ ಜೀಕುತ್ತಾ ಮಜಾ ಅನುಭವಿಸಬಹುದು. ಅಲ್ಲದೆ, ಇಲ್ಲೊಂದು ದೊಡ್ಡ ಬಂಡೆಯಿದೆ. ಅದನ್ನೂ ಹತ್ತಿ ಇಳಿದು, ಮಕ್ಕಳು ಥ್ರಿಲ್ಲಾಗ್ತಾರೆ. ಟಿಲ್ಲರ್‌ನಲ್ಲಿ ಕುಳಿತು ಇಡೀ ತೋಟ ಸುತ್ತುವ ಆ ಖುಷಿಯೇ ಬೇರೆ. 

Advertisement

ಹೋಗೋಕ್ಕೂ ಮುನ್ನ…
ಇದು ಮೋಜು ಮಸ್ತಿ ಮಾಡಲು ಇರುವ ಸ್ಥಳ ಅಲ್ಲ. ಕೇವಲ ರೈತಜ್ಞಾನ ನೀಡುವ ತಾಣ. ಇಲ್ಲಿ ಮುಗ್ಧಪ್ರಾಣಿಗಳಿವೆ. ಅವುಗಳ ಪರಿಶುದ್ಧ ಬದುಕಿಗೆ ತೊಂದರೆ ನೀಡದೆ ಇರುವ ಹೊಣೆ ಪ್ರವಾಸಿಗರದ್ದು. ದಿಢೀರನೆ “ಬಿಗ್‌ ಬಾರ್ನ್ ಫಾರ್ಮ್’ಗೆ ಹೋದರೆ, ಪ್ರವೇಶ ಸಿಗುವುದಿಲ್ಲ. ವಾರಕ್ಕೂ ಮೊದಲು ಫಾರ್ಮ್ನವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅನುಮತಿ ಪಡೆದು, ಅವರು ಹೇಳಿದ ದಿನಾಂಕದಂದು ಭೇಟಿ ಕಾರ್ಯಕ್ರಮ ಇಟ್ಟುಕೊಳ್ಳಬೇಕು.

ಎಲ್ಲಿದೆ?
ಬಿಲ್ವರದ ಹಳ್ಳಿ, ಬನ್ನೇರುಘಟ್ಟ ರಸ್ತೆ

ಸಂಪರ್ಕ: 9900321111

ಇಮೇಲ್‌: bigbarnplay@gmail.com ಫೇಸ್‌ಬುಕ್‌.www.facebook.com/thebigbarn

ಬರ್ತ್‌ಡೇ ಪ್ಲ್ರಾನ್‌
ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮಗಳನ್ನೂ ಇಲ್ಲಿ ಆಚರಿಸಿಕೊಳ್ಳಬಹುದು. ಆದರೆ, ಮುಂಚಿತವಾಗಿ ಫಾರ್ಮ್ನವರಿಗೆ ತಿಳಿಸಬೇಕಷ್ಟೇ.

ರೈತರ ಅನುಭವ ದಕ್ಕುವ ಇನ್ನಿತರ ತಾಣಗಳು
1. ದಿ ಫಾರ್ಮ್
ವಿಳಾಸ: ಬನ್ನೇರುಘಟ್ಟ ರಸ್ತೆಯಿಂದ 19 ಕಿ.ಮೀ.
ವಿಶೇಷತೆ: ಹಣ್ಣು, ಹೂವಿನ ತೋಟಗಳಲ್ಲಿ ಕೃಷಿ ಅನುಭವ.
ಮೊ. 9980661706

2. ಚಿಗುರು
ದೊಡೂxರು, ತೇರುಬೀದಿ ಹಳ್ಳಿ, ಕನಕಪುರ ತಾ.
ವಿಶೇಷತೆ: 25 ಎಕರೆ ಪ್ರದೇಶದಲ್ಲಿ ಹಣ್ಣು, ತರಕಾರಿ ತೋಟದೊಳಗೆ ಸುತ್ತಾಟ.
ಮೊ. 9845258575

3. ದಿ ಗ್ರೀನ್‌ ಪಾಥ್‌
ವಿಳಾಸ: ಚಿಕ್ಕಮಾರನ ಹಳ್ಳಿ, ನೆಲಮಂಗಲ ಸಮೀಪ
ವಿಶೇಷತೆ: 40 ಎಕರೆ ಪ್ರದೇಶದಲ್ಲಿ ಆರ್ಗಾನಿಕ್‌ ಫಾರ್ಮ್ನ ಕೃಷಿ ಅನುಭವ.
ಮೊ. 080- 42664777

4. ಅದಿತಿ ಫಾರ್ಮ್, ಕನಕಪುರ ರಸ್ತೆ
ವಿಳಾಸ: ಕನಕಪುರ ರಸ್ತೆ, ಆರ್ಟ್‌ ಆಫ್ ಲಿವಿಂಗ್‌ ಆಶ್ರಮ ಸಮೀಪ
ವಿಶೇಷತೆ: ವೇದ ಕಾಲದ ಕೃಷಿ, ನೂರಾರು ದೇಸಿ ತಳಿ ಬಗ್ಗೆ ಅರಿವು
ಸಂಪರ್ಕ: 9886400312

– ವಸಂತ ಕುಮಾರ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next