Advertisement

ಕೆಐಎಫ್ಎಫ್ ಉದ್ಘಾಟಿಸಿದ ಬಿಗ್ ಬಿ; ಶಾರುಖ್, ಬ್ಯಾನರ್ಜಿ, ಗಂಗೂಲಿ ಭಾಗಿ

07:31 PM Dec 15, 2022 | Team Udayavani |

ಕೋಲ್ಕತ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಗುರುವಾರ ದೀಪ ಬೆಳಗಿಸುವ ಮೂಲಕ ಕೋಲ್ಕತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಕೆಐಎಫ್ಎಫ್) 28 ನೇ ಆವೃತ್ತಿಯನ್ನು ಉದ್ಘಾಟಿಸಿದರು.

Advertisement

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಗ್ ಬಿ ಪತ್ನಿ ಜಯಾ ಬಚ್ಚನ್, ಸೂಪರ್ ಸ್ಟಾರ್ ಶಾರುಖ್ ಖಾನ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ಹಿರಿಯ ನಟ ಶತ್ರುಘ್ನ ಸಿನ್ಹಾ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಲನಚಿತ್ರೋತ್ಸವದಲ್ಲಿ 80ರ ಹರೆಯದ ಅಮಿತಾಬ್ ಅವರ ಉದ್ಘಾಟನಾ ಚಲನಚಿತ್ರ ‘ಅಭಿಮಾನ್’ ಮತ್ತು ಜೀವನ ಮತ್ತು ಕೃತಿಗಳ ಪ್ರದರ್ಶನ ಮಾಡಲಾಗುತ್ತಿದೆ.

ಡಿಸೆಂಬರ್ 16-22ರವರೆಗೆ ನಗರದಾದ್ಯಂತ 10 ಚಿತ್ರಮಂದಿರಗಳಲ್ಲಿ ಒಟ್ಟು 183 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next