ಮೆಲ್ಬರ್ನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಪ್ರವಾಸ ಕೊನೇ ಕ್ಷಣದಲ್ಲಿ ರದ್ದಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮುಂದಿನ ವಾರ ನಡೆಯಬೇಕಿದ್ದ ಕ್ವಾಡ್ ನಾಯಕರ ಶೃಂಗಸಭೆಯನ್ನು ರದ್ದು ಪಡಿಸಲಾಗಿದೆ ಎಂದು ಆಸ್ಟ್ರೇಲಿಯ ಪ್ರಧಾನಿ ಆ್ಯಂಥೋನಿ ಆಲ್ಬನೀಸ್ ತಿಳಿಸಿದ್ದಾರೆ.
ಪ್ರತಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು “ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರು ಕ್ವಾಡ್ ಶೃಂಗಸಭೆಯಲ್ಲಿ ಭೇಟಿಯಾಗಬೇಕಿತ್ತು. ಆದರೆ ಜಪಾನ್‌ನ ಹಿರೋಶಿಮಾದಲ್ಲಿ ಇದೇ ಶನಿವಾರ ಮತ್ತು ರವಿವಾರ ನಡೆಯಲಿರುವ ಜಿ7 ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಕಿಶಿಡಾ ಮತ್ತು ನಾನು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಲಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
“ಈ ತಿಂಗಳ ಅಂತ್ಯದಲ್ಲಿ ಅಮೆರಿಕದ ಸಾಲಗಳು ಸುಸ್ಥಿಯಾಗುವುದನ್ನು ತಪ್ಪಿಸಲು ಜೋ ಬೈಡೆನ್ ಅವರು ರಿಪಬ್ಲಿಕನ್ ಸಂಸದರೊಂದಿಗೆ ಮಾತುಕತೆ ನಡೆಸಿ ಒಂದು ಒಪ್ಪಂದಕ್ಕೆ ಬರಬೇಕಿದೆ. ಅಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಲಕ್ಷ್ಯ ಹರಿಸಲು ಬೈಡೆನ್ ದೇಶದಲ್ಲಿ ಇರಬೇಕಾಗಿದ ಹೀಗಾಗಿ ಆಸ್ಟ್ರೇಲಿಯಾ ಪ್ರವಾಸವನ್ನು ರದ್ದುಪಡಿಸಿ
ದ್ದಾರೆ” ಎಂದು ಆಲ್ಬನೀಸ್ ಹೇಳಿದ್ದಾರೆ.