Advertisement

ಬೀದರಿನ ಕೀರ್ತನಾ ಅಮೆರಿಕ ವಿವಿ ರಾಯಭಾರಿ…ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ

09:37 PM Feb 22, 2021 | Team Udayavani |

ಬೀದರ್ : ಬೀದರಿನ ಎಂಜಿನಿಯರಿಂಗ್ ಪದವೀಧರೆ ಕೀರ್ತನಾ ಡಿ. ಕೋಳೆಕರ್ , ಅಮೆರಿಕದ ಪ್ರತಿಷ್ಠಿತ ‘ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್ ನ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಬೀದರನಲ್ಲಿ ನೆಲೆಸಿರುವ 26 ವರ್ಷದ ಕೀರ್ತನಾ ಅಮೆರಿಕದ ಕಾಲಮಾನದಲ್ಲಿ ಆನ್‌ಲೈನ್‌ ಮೂಲಕ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಯ ವಿವಿಧ ಕೋರ್ಸ್‌ಗಳು, ಉತ್ಕೃಷ್ಟ ಶೈಕ್ಷಣಿಕ ಗುಣಮಟ್ಟ ಹಾಗೂ ಸೌಕರ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೀರ್ತನಾ ಅವರು ಯುನಿವರ್ಸಿಟಿ ಆಫ್ ಮೆರಿಲ್ಯಾಂಡ್ ಬಾಲ್ಟಿಮೋರ್‌ನಲ್ಲಿ ಎರಡು ವರ್ಷಗಳ ಮಾಸ್ಟರ್ಸ್ ಇನ್ ಇನ್ಫಾರ್ಮೆಷನ್ ಸಿಸ್ಟಂ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದು, ಡಿಸೆಂಬರ್‌ನಲ್ಲಿ ಅವರ ಕೋರ್ಸ್ ಪೂರ್ಣಗೊಳ್ಳಲಿದೆ.

ನಗರದ ವಕೀಲ ದಾದಾರಾವ್ ಕೋಳೆಕರ್ ಹಾಗೂ ದಿ.ಪ್ರೊ. ಅಲ್ಕಾ ಕೋಳೆಕರ್ ದಂಪತಿಯ ಪುತ್ರಿ ಕೀರ್ತನಾ, ಬೀದರನ ಗುರುನಾನಕ ಸಂಸ್ಥೆಯಲ್ಲಿ ಪ್ರೌಢ, ಕಾಲೇಜು ಶಿಕ್ಷಣ ಮುಗಿಸಿ, ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

ವಿವಿ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾಗಿದ್ದಕ್ಕೆ ಬಹಳ ಸಂತಸವಾಗಿದೆ. ನಾನು 2020ನೇ ಸಾಲಿನ ಮೊದಲ ರಾಯಭಾರಿ ಆಗಿರುವುದನ್ನು ವಿಶ್ವವಿದ್ಯಾಲಯ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕೋವಿಡ್ ಸಂದರ್ಭದಲ್ಲಿನ ಕಾರ್ಯಕ್ಕಾಗಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪರಿಶ್ರಮ ವಹಿಸಿ ವ್ಯಾಸಂಗ ಮಾಡಿದರೆ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋಗಬಹುದು. ತಂದೆ, ತಾಯಿ, ಕಲಿತ ಶಾಲೆ, ಕಾಲೇಜು ಹಾಗೂ ಊರಿಗೂ ಕೀರ್ತಿ ತರಬಹುದು ಎಂದು ಹೇಳಿದ್ದಾರೆ.

Advertisement

ಸನ್ಮಾನ: ಅಮೇರಿಕ ಪ್ರತಿಷ್ಠಿತ ವಿಶ್ವವಿದ್ಯಾಲಯದ ಜಾಗತಿಕ ರಾಯಭಾರಿಯಾಗಿ ಆಯ್ಕೆಯಾದ ಪ್ರಯುಕ್ತ ಕೀರ್ತನಾ ಅವರನ್ನು ನಗರದಲ್ಲಿ ವಕೀಲರಾದ ವೀರಶೆಟ್ಟಿ ಭಂಡೆ, ಕೆ. ಕಾಶೀನಾಥ, ಬಾಬುರಾವ್ ಎಂ.ಪಾಟೀಲ ಹಾಗೂ ನಿವೃತ್ತ ಶಿಕ್ಷಕಿ ವಿಮಲಾ ಪಾಟೀಲ ಸನ್ಮಾನಿಸಿದರು. ಬೀದರ ಪ್ರತಿಭೆ ಅಮೆರಿಕದ ವಿವಿಯೊಂದರ ರಾಯಭಾರಿ ಆಗಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next