ಬೀದರ: ಜಿಲ್ಲೆಯಲ್ಲಿ ಸುಮಾರು ಐದಾರು ಸಾವಿರ ಪ್ಲಂಬರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇತರ ಸಂಘಟನೆಗಳಂತೆ ಪ್ಲಂಬರ್ಸಂ ಘದ ಕಾರ್ಯಕರ್ತರು ಸಹ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳು ಹಾಗೂ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕುರಿ ಮತ್ತು ಮೇಕೆ ಮಹಾಮಂಡಳದ ಅಧ್ಯಕ್ಷ ಪಂಡಿತ ಚಿದ್ರಿ ಹೇಳಿದರು.
ನಗರದ ಗಾಂಧಿ ಗಂಜ್ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಪ್ಲಂಬರ್ಅ ಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ವಿಶ್ವ ಪ್ಲಂಬರ್ಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮ್ಯಯನವರ ಅವಧಿಯಲ್ಲಿ ಪ್ಲಂಬರ್ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗಿದೆ. ಪ್ಲಂಬರ್ ಕಾರ್ಮಿಕರು ಕೆಲಸ ಮಾಡುವಾಗ ಅಪಘಾತ ಸಂಭವಿಸಿದರೆ 5 ಲಕ್ಷ ರೂ.ವರೆಗೆ ಧನಸಹಾಯದ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಲಾಭ ಪಡೆಯಬೇಕು ಎಂದರು.
ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದ ಪ್ಲಂಬರ್ ಗಳು ತರಬೇತಿ ಪ್ರಮಾಣಪತ್ರ ಇಟ್ಟುಕೊಂಡು ದೇಶ-ವಿದೇಶಗಳಲ್ಲಿಯೂ ಪ್ಲಂಬರ್ ಕೆಲಸ ಮಾಡಬಹುದು. ಇದರಿಂದ ಪ್ಲಂಬರ್‌ಗಳ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಈ ಯೋಜನೆಯಡಿ 180 ಜನ ಪ್ಲಂಬರ್‌ಗಳು ತರಬೇತಿ ಪಡೆದಿದ್ದು, ಉಳಿದು ಪ್ಲಂಬರ್‌ಗಳೂ ಇದರ ಲಾಭ ಪಡೆದು ಪ್ರಮಾಣ ಪತ್ರದೊಂದಿಗೆ ಸೌದಿ, ದುಬೈಗಳಲ್ಲಿ ಪ್ಲಂಬರ್ ಕೆಲಸ ಮಾಡಿದರೆ ತಿಂಗಳಿಗೆ 1 ರಿಂದ 2 ಲಕ್ಷ ರೂ. ದುಡಿಯಬಹುದು ಎಂದರು.
ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ನೌಬಾದ್ ಮಾತನಾಡಿ, ರಾಜ್ಯ ಸರ್ಕಾರ ಕಟ್ಟಡ ಹಾಗೂ ಇತರೆ ಕಾರ್ಮಿಕರ ಏಳ್ಗೆಗಾಗಿ 9 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಹಣ ಕಟ್ಟಡ ಹಾಗೂ ಇತರೆ ಕಾರ್ಮಿಕರ ಏಳ್ಗೆಗೆ ಮಾತ್ರ ಬಳಕೆ ಮಾಡಲು ಬರುತ್ತದೆ ಎಂದರು.
ಹಿರಿಯ ಪ್ಲಂಬರ್ ಕಾರ್ಮಿಕ ಅಬ್ದುಲ್ ಖಾದರ್ ಮಾತನಾಡಿ, ಬೀದರನಲ್ಲಿ 1965ರ ವೇಳೆ ನಾನೊಬ್ಬನೇ ಪ್ಲಂಬರ್ ಕೆಲಸ ಮಾಡುತ್ತಿದ್ದೆ. ಈಗ ಜಿಲ್ಲೆಯಲ್ಲಿ 5-6 ಸಾವಿರ ಜನ ಕಾರ್ಮಿಕರಿರುವುದ ಸಂತೋಷದ ವಿಷಯ ಎಂದು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಎಂ.ಡಿ. ಅಯೂಬ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷ ಏಜಾಜ್ ಅಹ್ಮೆದ್, ಕಾರ್ಯದರ್ಶಿ ಮಿನ್ಹಾಜೊದ್ದೀನ್, ಪ್ರಮುಖರಾದ ಶೈಲೇಶ, ತುಕಾರಾಂ ಚಿದ್ರಿ, ದಯಾನಂದ ಸ್ವಾಮಿ, ರಾಜೇಶ, ರಿಷಿಕೇಷ, ಪ್ರವೀಣ ಸ್ವಾಮಿ ಸೇರಿದಂತೆ ಇತರರು ಇದ್ದರು.
ಸಾಯಿನಾಥ ಸ್ವಾಗತಿಸಿದರು. ತುಕಾರಾಂ ಚಿಮಕೋಡ ವಂದಿಸಿದರು. ಮೆರವಣಿಗೆ : ಪ್ಲಂಬರ್ ದಿನಾಚರಣೆ ಪ್ರಯುಕ್ತ ನಗರದ ಸಾಯಿ ಆದರ್ಶ ಶಾಲಾ ಅವರಣದಲ್ಲಿ ಪ್ಲಂಬರ್ಕಾ ರ್ಮಿಕರ ಮೆರವಣಿಗೆಗೆ ಜೆಡಿಎಸ್ ಜಿಲ್ಲಾ ಎಸ್.ಸಿ. ವಿಭಾಗದ ಅಧ್ಯಕ್ಷ ದೇವೆಂದ್ರ ಸೋನಿ ಚಾಲನೆ ನೀಡಿದರು. ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಕಾರ್ಯಕ್ರಮದ ವೇದಿಕೆಗೆ ಬಂದು ಸಮಾವೇಶಗೊಂಡಿತ್ತು.