Advertisement
ನೌಬಾದ್, ಭೀಮನಗರ, ಮೈಲೂರು ಸೇರಿದಂತೆ ವಿವಿಧೆಡೆ ನಿರ್ಗತಿಕರು, ಕೂಲಿ ಕಾರ್ಮಿಕರು, ವಿಧವೆಯರು, ಅಲೆಮಾರಿಗಳು, ಬಡವರಿಗೆ ತಲಾ ಐದು ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಒಂದು ಕೆಜಿ ಸಿಹಿ ಎಣ್ಣೆ, ಒಂದು ಕೆಜಿ ಉಪ್ಪು, ಮಾಸ್ಕ್, ಪೌಷ್ಟಿಕಾಂಶ ಮಾತ್ರೆ ಮತ್ತಿತರ ಸಾಮಗ್ರಿ ಒಳಗೊಂಡ ಕಿಟ್ ವಿತರಿಸಿದರು.
27,500 ಕುಟುಂಬಗಳಿಗೆ ಕಿಟ್ ಒದಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಜನರಿಗೆ ನೆರವು ಕಲ್ಪಿಸಲಾಗುವುದು ಎಂದು ಸೂರ್ಯಕಾಂತ ನಾಗಮಾರಪಳ್ಳಿ ವಿವರಿಸಿದರು. ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಕೈಗೊಂಡ ಹಲವು ಕ್ರಮಗಳಿಂದಾಗಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ.ಕೋವಿಡ್ ನಿಂದ ತೊಂದರೆ ಗೊಳಗಾದವರಿಗೆ ಸಿಎಂ ವಿಶೇಷ ಪ್ಯಾಕೇಜ್ ಘೋಷಿಸಿ ಅವರಿಗೆ ಅಭಯ ನೀಡಿದ್ದಾರೆ ಎಂದು ಹೇಳಿದರು. ಕೋವಿಡ್ ತಡೆಗೆ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಮಾಸ್ಕ್ ಧರಿಸಬೇಕು. ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ನಗರಸಭೆ ಮಾಜಿ ಸದಸ್ಯರಾದ ವೀರಶೆಟ್ಟಿ ಭಂಗೂರೆ, ಶಶಿ ಹೊಸಳ್ಳಿ, ಅರುಣಕುಮಾರ, ಭೂಷಣ ಪಾಠಕ್, ರಾಜು ಚಿದ್ರಿ, ಕಿರಣ ಪಾಲಂ ಇದ್ದರು.