Advertisement

Bidar; ‌ರಾಜ್ಯಪಾಲರ ವಿರುದ್ದ ಹೇಳಿಕೆ; ಐವಾನ್ ಡಿಸೋಜಾ ವಿರುದ್ಧ ಬಿಜೆಪಿ ದೂರು

06:06 PM Aug 20, 2024 | Team Udayavani |

ಬೀದರ್:  ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ದೇಶದ್ರೋಹ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕ್ರಮ ವಹಿಸಬೇಕು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಗರದ ನ್ಯೂ ಟೌನ್ ಠಾಣೆಯಲ್ಲಿ ದೂರು ನೀಡಿದೆ.

Advertisement

ಸಿಎಂ ವಿರುದ್ಧ ಮುಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಪಕ್ಷದ ಕಾಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಡಿಸೋಜಾ ಅವರು ರಾಜ್ಯಪಾಲರ ವಿರುದ್ಧ ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ಬೆದರಿಕೆ, ಪ್ರಚೋದನೆ ಮತ್ತು ದೇಶದ್ರೋಹ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರು ಹಿಂದಕ್ಕೆ ಹೋಗಬೇಕು ಇಲ್ಲವಾದರೆ ಬಾಂಗ್ಲಾದಂತೆ ಗವರ್ನರ್ ಕಚೇರಿ, ಮನೆಗೆ ನುಗ್ಗುವಂಥ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗುತ್ತದೆ. ಮಾನ ಮರ್ಯದೆ ಇದ್ದರೆ ಗವರ್ನರ್ ರಾಜ್ಯ ಬಿಟ್ಟು ತೊಲಗಬೇಕು. ಇಲ್ಲದಿದ್ದರೆ, ರಾಜಭವನ ನುಗ್ಗುವುದು ಖಂಡಿತ. ರಾಜಭವನದಲ್ಲಿ ಏನಾದರೂ ಆದರೇ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕೂಡಲೇ ಎಂಎಲ್‌ಸಿ ಐವಾನ್ ಡಿಸೋಜಾ ಅವರ ವಿರುಧ್ಧ ಸೂಕ್ತ ಪ್ರಕರಣ ದಾಖಲಿಸಿಬೇಕು ಎಂದು ಒತ್ತಾಯಿಸಲಾಗಿದೆ.

ಈ ವೇಳೆ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಶ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ಸ್ವಾಮಿ, ರಮೇಶ ಕಲ್ಲೂರ, ನಗರ ಅಧ್ಯಕ ಸಂದೀಪ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಕಕುಮಾರ ಜಾಧವ, ಬಸವ ಮೂಲಗೆ, ಪ್ರಮುಖರಾದ ಸಾಯಿನಾಥ ಪಾಟೀಲ, ಶಿವು ಸುಲ್ತಾನಪುರೆ, ಗುರು ಪಾಂಪಡೆ, ಅರವಿಂದ ಬುಳ್ಳಾ, ಶರಣು ಬಿರಾದಾರ, ಬಾಲಾಜಿ ಪಾಟೀಲ, ಸಂದೀಪ ಪಸರ್ಗೆ, ಕೃಷ್ಣ ಉಪ್ಪಾರ, ಅಜಯ, ಆಕಾಶ ರಾಜಗೀರಾ, ವೆಂಕಟ ಆಣದೊರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next