Advertisement

ಬೀದರ್ ನಗರಸಭೆ ಚುನಾವಣೆ: ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ

02:43 PM Apr 30, 2021 | Team Udayavani |

ಬೀದರ್: ಬೀದರ್ ನಗರಸಭೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖ ಭಂಗವಾಗಿದೆ. ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಗದಿದ್ದರೂ ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Advertisement

ನ್ಯಾಯಾಲಯದ ತಡೆಯಿಂದಾಗಿ ಮೂರು ವರ್ಷಗಳ ಬಳಿಕ ಬೀದರ‍ ನಗರಸಭೆಗೆ ಚುನಾವಣೆ ನಡೆದಿದೆ. ಒಟ್ಟು 35 ವಾರ್ಡ್ ಗಳ ಪೈಕಿ 32 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಎರಡು ವಾರ್ಡ್ ಗೆ ಕೋರ್ಟ್ ತಡೆ ಇದ್ದರೇ, ಒಂದು ವಾರ್ಡ್ ಗೆ ಅವಿರೋಧ ಆಯ್ಕೆ ನಡೆದಿದೆ.

ಇದನ್ನೂ ಓದಿ:ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಮತದಾರರಿಗೆ ಧನ್ಯವಾದ ಹೇಳಿದ ಕುಮಾರಸ್ವಾಮಿ

ಈಗ ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, 8 ಸ್ಥಾನ ಬಿಜೆಪಿ, 7 ಸ್ಥಾನ ಜೆಡಿಎಸ್, 2 ಸ್ಥಾನ ಎಂಐಎಂ ಮತ್ತು ಒಂದು ಸ್ಥಾನ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ವಿಜಯಶಾಲಿ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next