Advertisement
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಕದ ಮನೆಯ ಕೂಸು ನಮ್ಮ ಮನೆಯ ತೊಟ್ಟಿಲಲ್ಲಿ ಹಾಕಿದರೆ ಅದು ನಮ್ಮದಾಗದು ಎಂಬುದನ್ನು ಅವರುಗಳು ನೆನಪಿಡಬೇಕು. 400 ಪಾರ್ ಹೇಗೂ ಆಗುತ್ತದೆ, ಇಲ್ಲಿ ಸೊತರೇನು ಎಂದು ಉಡಾಫೆ ಮಾತನಾಡಿದರು. 2014 ಮತ್ತು 2019 ರಲ್ಲಿ ನಮ್ಮಲ್ಲಿ ಒಬ್ಬಿಬ್ಬರು ಶಾಸಕರು ಮಾತ್ರ ಇದ್ದರು. ಆ ಸಮಯದಲ್ಲಿ ಕಾರ್ಯಕರ್ತರ ಜೊತೆ ನಿಂತಿದ್ದು ನಾನು, ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ನವರ ಬಣ್ಣ ಬಯಲು ಮಾಡಿರುವೆ, ನೇರವಾಗಿ ವಿರೋಧಿಸಿರುವೆ ಎಂದರು.
Related Articles
Advertisement
ಶಾಸಕ ಡಾ. ಸಿದ್ದು ಪಾಟೀಲ ಮಾತನಾಡಿ, ಕಾಂಗ್ರೆಸ್ ನವರು ದುಡ್ಡಿನಿಂದ ಚುನಾವಣೆ ಗೆದ್ದಿದ್ದಾರೆ. ಆದರೆ ನಾವು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ 5.40 ಲಕ್ಷ ಮತ ಪಡೆದಿದ್ದೇವೆ. ನಾವು ನಾಲ್ಕು ಶಾಸಕರುಗಳು ಬೆಂಗಳೂರಿಗೆ ಹೋದಾಗ ಸೋಲಿಸಿ ಬಂದಿರೇನಪ್ಪ ಎಂದು ಕೇಳುತ್ತಿದ್ದಾರೆ, ನಾವೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಇವತ್ತು ಖೂಬಾ ಗೆದ್ದು, ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿ ಆಗುತ್ತಿದ್ದರು. ನಮ್ಮ ಎಲ್ಲಾ ಕೆಲಸಗಳು ಆಗುತ್ತಿದ್ದವು ಎಂದರು.
ಮುಖಂಡ ಬಸವರಾಜ ಆರ್ಯ ಮಾತನಾಡಿದರು. ಬಿಜೆಪಿ ಉಪಾದ್ಯಕ್ಷೆ ಶೋಭಾ ತೆಲಂಗ್, ಮುಖಂಡರಾದ ಶಕುಂತಲಾ ಬೆಲ್ದಾಳೆ, ರಾಜಶೇಖರ ನಾಗಮೂರ್ತಿ, ಬಾಬು ವಾಲಿ, ಪೀರಪ್ಪ ಔರಾದೆ, ಕಿರಣ ಪಾಟೀಲ, ಮಾಧವ ಹಾಸೂರೆ, ರಾಜೇಂದ್ರ ಪೂಜಾರಿ, ಅಶೋಕ ವಕಾರೆ, ರಾಜರೆಡ್ಡಿ ಶಾಬಾದ, ವೀರಣ್ಣಾ ಕಾರಬಾರಿ, ಸಂಗಮೇಶ ನಾಸಿಗಾರ, ಗಜೇಂದ್ರ ಕನಕಟಕರ್ ಮತ್ತಿತರರಿದ್ದರು.