Advertisement
ಹರಾಜು ನಡೆಯುತ್ತಿರುವ ವೀಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುವ ಮೂಲಕ ಹರಾಜು ನಡೆದಿರುವುದನ್ನು ದೃಢೀಕರಿಸುತ್ತಿದೆ.
Related Articles
Advertisement
ಗ್ರಾಮದ ಶ್ರೀನಿವಾಸ್, ಬೆದ್ಲಿ ಚೌಡರೆಡ್ಡಿ ಹಾಗೂ ಇರಗಸಂದ್ರ ಶ್ರೀರಾಮಪ್ಪ ಸೇರಿದಂತೆ ನಾಲ್ವರ ನಡುವೆ ಬಿಡ್ ಪೈಪೋಟಿ ನಡೆದು ಅಂತಿಮವಾಗಿ ಶ್ರೀರಾಮಪ್ಪ ಐದು ಲಕ್ಷ ರೂಗಳಿಗೆ ಬಿಡ್ ಗೆಲ್ಲುತ್ತಾರೆ.
ಹರಾಜು ಪ್ರಕ್ರಿಯೆಯನ್ನು ಪೂರ್ತಿ ವೀಡಿಯೋ ಮಾಡಲಾಗಿದ್ದು, ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡಲಾಗಿದೆ. ಈ ಹರಾಜು ಪ್ರಕ್ರಿಯೆ ಕುರಿತಂತೆ ಯಾರೂ ದೂರು ದಾಖಲಿಸಿಲ್ಲವಾದರೂ, ಗ್ರಾಮದಲ್ಲಿಯೇ ಹರಾಜಿಗೆ ವಿರೋಧ ವ್ಯಕ್ತವಾಗಿದೆಯೆನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಾಜು ಕೂಗಿದರೂ ಕೆಲವರು ಇದನ್ನು ವಿರೋಧಿಸಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನ ಮುಗಿಯುವವರೆಗೂ ಗ್ರಾಮಸ್ಥರು ಹರಾಜಿಗೆ ಯಾವ ರೀತಿ ಬದ್ಧರಾಗಿರುತ್ತಾರೆಂಬುದು ಕಾದು ನೋಡಬೇಕಾಗಿದೆ.
ಈ ಘಟನೆಯು ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.