“ಜೈ ಹಾಸ್ಯ ಭುವನೇಶ್ವರಿ’
Advertisement
ಭು. ಹೆ. ಅವರು ವೃತ್ತಿಯಿಂದ ನಿವೃತ್ತ ರಾಗುತ್ತಿ¨ªಾರೆ. ಅಭಿನಂದನಾ ಸಮಾರಂಭ ಇಟ್ಟುಕೊಳ್ಳುವ ಅಂತ ಮಂಗಳೂರು ನಗರದ ಕೆಲ ಸಾಹಿತ್ಯಾಸಕ್ತ ಬಂಧುಗಳು ಹೇಳಿದಾಗ ನನಗೆ ನಂಬಲಿಕ್ಕಾಗಲಿಲ್ಲ. ಭುವನೇಶ್ವರಿಯವರಿಗೆ ಅರುವತ್ತಾಯಿತಾ? ಅವರಿಗೇ ಫೋನಾಯಿಸಿ ಕೇಳಿದರೆ… ಏನೋ ಹಾಸ್ಯದ ಮಾತಾಡಿ ಪ್ರಶ್ನೆಯನ್ನೇ ಮರೆಸಿ ಬಿಟ್ಟಿದ್ದರು. ನೀಳ ಜಡೆಯನ್ನು ಹಾವಿನಂತೆ ತಿರುವುತ್ತ ಪುಟು ಪುಟು ನಡೆಯುವ ಉತ್ಸಾಹದ ಚಿಲುಮೆ ಭು. ಹೆ. ಅವರ ಚಿರ ಯೌವ್ವನದ ರಹಸ್ಯ ಅವರ ಹಾಸ್ಯಪ್ರಜ್ಞೆಯೇ ಇರಬೇಕು. ವಯಸ್ಸನ್ನು ಮರೆಯಾಗಿಸುವ ರಸಾಯನದ ಕೆಲಸ ಮಾಡಿದೆ ಈ ಹಾಸ್ಯ!
Related Articles
Advertisement
ಭು. ಹೆ.ಯವರ ಹಾಸ್ಯದ ಕಂಪು ನಮ್ಮ ಕನ್ನಡನಾಡಿನಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪಸರಿಸಿದೆ. ಅಮೆರಿಕೆಯಲ್ಲಿ ಕನ್ನಡ ಸಾಹಿತ್ಯ ರಂಗ ತುಂಬಾ ವಿಶಿಷ್ಟವಾದ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ. ಅದರ ಸ್ಥಾಪಕಾಧ್ಯಕ್ಷರಾದ ಹೆಚ್. ವೈ. ರಾಜಗೋಪಾಲ ಅವರು ಒಮ್ಮೆ ಬೆಂಗಳೂರಿನ ಅಪರಂಜಿ ಹಾಸ್ಯೋತ್ಸವದಲ್ಲಿ ಭು. ಹೆ. ಅವರ ಭಾಷಣ ಕೇಳಿದರಂತೆ. ಮರುವರ್ಷದ ( ಮೇ 2011) ಸಾಹಿತ್ಯೋತ್ಸವಕ್ಕೆ ಭು. ಹೆ. ವಿಶೇಷ ಅತಿಥಿಯಾಗಿ ಫಿಕ್ಸ್ ಆದರು. ಸುಮತೀಂದ್ರ ನಾಡಿಗರ ಜತೆ ಸ್ಯಾನ್‌ಫ್ರಾನ್ಸಿಸ್ಕೊಗೆ ಹೋಗಿಳಿದು ಕ್ಯಾಲಿಫೋರ್ನಿಯಾ ಕನ್ನಡ ಕೂಟ, ಲಾಸ್ ಏಂಜಲೀಸ್ ಕನ್ನಡ ಸಂಘಗಳಲ್ಲಿ ಸಹ ಉಪನ್ಯಾಸ ನೀಡಿ ಬಂದರು. ಅದೇ ವರ್ಷ ಅಕ್ಟೋಬರಿನಲ್ಲಿ ಲಂಡನ್ ನಗರದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಯುರೋಪ್ 2011ರಲ್ಲಿ ಸನ್ಮಾನಿತರಾಗಿದ್ದರು. 2012 ಅಕ್ಟೋಬರಿನಲ್ಲಿ ಅಮೆರಿಕೆಯ ಬಾಸ್ಟನ್ ನಗರದ ಕನ್ನಡ ಕೂಟದ ರತ್ನ ಮಹೋತ್ಸವವನ್ನು ಉದ್ಘಾಟಿಸಿ ಹೊರನಾಡ ಕನ್ನಡಿಗರಿಗೆ ಹಾಸ್ಯದೌತಣ ಬಡಿಸಿ¨ªಾರೆ. ಅಲ್ಲಿಯ ಅನುಭವ, ಅಲ್ಲಿಯ ಬಿಡುಗೇಶಿ ಬೆಡಗಿಯರನ್ನು , “ಕಿಡುÕ’ಗಳನ್ನೂ ಕಟೆದಿಟ್ಟು ಅವರನ್ನು ಸಂಭ್ರಮ ಪೀಡಿತರೆಂದು ಕರೆದು ತಮಾಷೆ ಮಾಡಿ ಬರೆದ ಲೇಖನಗಳು ಪ್ರಕಟವಾಗಿದ್ದವು.
ಕನ್ನಡದ ಹೆಚ್ಚಿನ ಪತ್ರಿಕೆಗಳಲ್ಲಿ ಇವರ ಅಂಕಣ ಬರಹಗಳು ಪ್ರಕಟವಾಗಿವೆ. ಹನ್ನೊಂದು ಹಾಸ್ಯ ಪ್ರಬಂಧ ಸಂಕಲನ ರಚಿಸಿದ್ದು ಎಲ್ಲ ಕೃತಿಗಳಿಗೂ ಅಕಾಡೆಮಿ ಪ್ರಶಸ್ತಿಯಿಂದ ಹಿಡಿದು ಉಗ್ರಾಣ ಪ್ರಶಸ್ತಿಯ ತನಕ ಅನೇಕ ಪ್ರಶಸ್ತಿಗಳು ಸಂದಿವೆ.
ಕಳೆದ 32 ವರ್ಷಗಳಿಂದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ (ಹಳೆಯ ಸರ್ಕಾರೀ ಕಾಲೇಜು ) ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಇದೇ ಮೇ 31ರಂದು ನಿವೃತ್ತರಾಗುತ್ತಿ¨ªಾರೆ ಭು. ಹೆ. ಮಂಗಳೂರು ವಿಶ್ವ ವಿದ್ಯಾಲಯದ ಡಾ. ಕೆ. ಶಿವರಾಮ ಕಾರಂತ ಪೀಠದ ಮುಖ್ಯಸ್ಥೆಯಾಗಿರುವ ಗರಿಮೆಯೂ ಅವರದು.
ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಾಹಿತ್ಯದ ಕಡೆಗೆ ಪ್ರೇರೇಪಿಸಿ ಅನೇಕ ಯುವ ಬರಹಗಾರರನ್ನೂ ರೂಪಿಸಿದ ಕೀರ್ತಿ ಅವರದ್ದು. ಮನೆಕೆಲಸದ ಹುಡುಗನಿಂದ ಹಿಡಿದು ಕಾಲೇಜಿನ ಅಟೆಂಡರ್‌ವರೆಗೆ, ಅಷ್ಟೇ ಯಾಕೆ, ಹಾಲಿನ ಬೂತಿನವರ ಕೈಯಿಂದಲೂ ಲೇಖನಿ ಹಿಡಿಸಿ, ಬರೆಸಿದ ತಾಕತ್ತು ಇವರದ್ದು. ಕನ್ನಡನಾಡಿನ ಉದ್ದಗಲಗಳಲ್ಲೂ, ಗೋವಾ, ಚೆನ್ನೈ, ದಿಲ್ಲಿಗಳ ಕನ್ನಡ ಸಂಘಗಳಿಗೂ ಹೋಗಿ ಉಪನ್ಯಾಸ ನೀಡಿ¨ªಾರೆ. ದಕ್ಷಿಣೋತ್ತರ ಕನ್ನಡ ಜಿÇÉೆಗಳಲ್ಲಿಯಂತೂ ಭು. ಹೆ. ಹೋಗಿ ಭಾಷಣ ಮಾಡದ ಶಾಲೆ-ಕಾಲೇಜುಗಳಿಲ್ಲ ಅನ್ನಬೇಕೇನೋ ! ನಾಡಿನ ರೋಟರಿ, ಲಯನ್ಸ್‌ನಂಥ ಸಂಸ್ಥೆಗಳು ಇವರನ್ನು ಕರೆದು ವಿಶೇಷ ಭಾಷಣ ಏರ್ಪಡಿಸಿವೆ.
ಬಹಿರಂಗವಾಗಿ ಹೋರಾಟಗಳು, ಬಹಿಷ್ಕಾರ, ಘೋಷಣೆಗಳಲ್ಲಿ ತೊಡಗಿಸಿಕೊಳ್ಳದೆ, ಭು. ಹೆ. ಅವರು ಹಾಸ್ಯವೆಂಬ ಅಸ್ತ್ರದಿಂದ ಜನಸಾಮಾನ್ಯರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ, ಯುವ ಜನಾಂಗದಲ್ಲಿ ಜಾಗೃತಿಯನ್ನು, ಮಾನವೀಯ ದೃಷ್ಟಿಕೋನವನ್ನು ಮೂಡಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ¨ªಾರೆ. ಮಲೆನಾಡಿನಲ್ಲಿ ಹುಟ್ಟಿ, ದಕ್ಷಿಣಕನ್ನಡದಲ್ಲಿ ಈ ಎತ್ತರಕ್ಕೆ ಬೆಳೆದ ಭು. ಹೆ. ಯವರಿಗೆ ತುಳುನಾಡಿನ ಸಂಸ್ಕೃತಿ ಮತ್ತು ದಕ್ಷಿಣ ಕನ್ನಡದ ಜನತೆ ಬಗ್ಗೆ ವಿಶೇಷ ಪ್ರೀತಿ, ಅಭಿಮಾನ. ಮಂಗಳೂರಿನವರೇ ಆಗಿ ಬಿಟ್ಟಿರುವ ಭು.ಹೆ.ಯವರ ನಗಿಸುವ ಪ್ರವೃತ್ತಿ ಅವರ ನಿವೃತ್ತಿಯ ನಂತರ ಮತ್ತಷ್ಟು ಹೆಚ್ಚಿ ನಾವೆಲ್ಲರೂ ಹಾಸ್ಯದ ಅರಬ್ಬೀಸಮುದ್ರದಲ್ಲಿ ತೇಲಾಡುವಂತಾಗಲಿ.
– ಡಾ. ಮೀರಾ