Advertisement

ಆಸೀಸ್‌ ಸರಣಿಗೆ ಇಶಾಂತ್‌, ಭುವನೇಶ್ವರ್ ಕುಮಾರ್ ಅನುಮಾನ!

12:53 PM Oct 24, 2020 | keerthan |

ಹೊಸದಿಲ್ಲಿ: ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ತೆರಳಿ ಪೂರ್ಣ ಪ್ರಮಾಣದ ಕ್ರಿಕೆಟ್‌ ಸರಣಿ ಆಡಲಿದ್ದು, 32 ಸದಸ್ಯರ ಜಂಬೋ ತಂಡ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿದೆ.

Advertisement

ಇದರಲ್ಲಿ ಗಾಯಾಳು ಪೇಸ್‌ ಬೌಲರ್‌ ಗಳಾದ ಇಶಾಂತ್‌ ಶರ್ಮ ಮತ್ತು ಭುವನೇಶ್ವರ್‌ ಕುಮಾರ್‌ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಇವರಿಬ್ಬರೂ ಪ್ರಸಕ್ತ ಐಪಿಎಲ್‌ ವೇಳೆ ಗಾಯಾಳಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ. ಅನುಭವಿ ಇಶಾಂತ್‌ ಆಸೀಸ್‌ ಪ್ರವಾಸಕ್ಕೆ ಲಭಿಸಿದೇ ಹೋದರೆ ಭಾರತದ ಟೆಸ್ಟ್‌ ಹೋರಾಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಫಿಸಿಯೋ ಪ್ಯಾಟ್ರಿಕ್‌ ಫ‌ರ್ಹಾತ್‌ ಅವರು ಇಶಾಂತ್‌ ಆರೋಗ್ಯ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. 2018-19ರ ಐತಿಹಾಸಿಕ ಆಸ್ಟ್ರೇಲಿಯ ಪ್ರವಾಸದ ವೇಳೆ ಇಶಾಂತ್‌ ಶರ್ಮ 3 ಟೆಸ್ಟ್‌ ಪಂದ್ಯಗಳಿಂದ 11 ವಿಕೆಟ್‌ ಉರುಳಿಸಿ ಮಿಂಚಿದ್ದರು. ಅಕಸ್ಮಾತ್‌ ಇಶಾಂತ್‌ ಲಭಿಸದೇ ಹೋದರೆ ಸೈನಿ, ಠಾಕೂರ್‌, ಸಿರಾಜ್‌ ಅವರಂಥ ಯುವ ಸೀಮರ್ ಟೆಸ್ಟ್‌ ತಂಡವನ್ನು ಸೇರಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ:ಬೌಲ್ಟ್, ಬುಮ್ರಾ ಭಯಾನಕ ಬೌಲಿಂಗ್‌; ಚೆನ್ನೈ ಬೌಲ್ಡ್‌

Advertisement

ವೇಗಿ ಭುವನೇಶ್ವರ್ ಕುಮಾರ್ ಮಂಡಿರಜ್ಜು ಗಾಯದಿಂದ ಐಪಿಎಲ್ ನಿಂದ ಹೊರಬಿದ್ದಿದ್ದು, ಅವರು ಕೂಡಾ ಆಸೀಸ್ ಸರಣಿಗೆ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ.

ಭಾರತ ಏಕದಿನ ಸರಣಿಯೊಂದಿಗೆ ಆಸ್ಟ್ರೇಲಿಯ ಪ್ರವಾಸವನ್ನು ಆರಂಭಿಸಲಿದೆ. ಮೊದಲೆರಡು ಪಂದ್ಯಗಳನ್ನು ನ. 27 ಮತ್ತು 29ರಂದು “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಆಡಲಾಗುವುದು. ಕ್ಯಾನ್‌ಬೆರಾದಲ್ಲಿ ಅಂತಿಮ ಏಕದಿನ (ಡಿ. 1) ಮತ್ತು ಮೊದಲ ಟಿ20 ಪಂದ್ಯ (ಡಿ. 4)  ನಡೆಯಲಿದೆ. ಬಳಿಕ ಎರಡೂ ತಂಡಗಳು ಸಿಡ್ನಿಗೆ ವಾಪಸಾಗಿ ಉಳಿದೆರಡು ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ (ಡಿ. 6 ಮತ್ತು ಡಿ. 8).

Advertisement

Udayavani is now on Telegram. Click here to join our channel and stay updated with the latest news.

Next