Advertisement

ಹೊಸ ಜಿಲ್ಲೆ ಹೆಬ್ಬಾಗಿಲಲ್ಲಿ ಭುವನೇಶ್ವರಿ ಪ್ರತಿಮೆ

03:23 PM Feb 27, 2021 | Team Udayavani |

ಹೊಸಪೇಟೆ: ನೂತನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ಹೆಬ್ಟಾಗಿಲಿನಲ್ಲಿ ಇನ್ನುಂದೆ ನಾಡ ದೇವತೆ ಕನ್ನಡ ಭುವನೇಶ್ವರಿ ದೇವಿ ಪ್ರತಿಮೆ ರಾರಾಜಿಸಲಿದೆ.

Advertisement

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗದ ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ವಿಜಯನಗರ ಜಿಲ್ಲೆಗೆ ಸ್ವಾಗತ ಎಂಬ ನಾಮಫಲಕ ನೋಡುಗರ ಗಮನ ಸೆಳೆಯುತ್ತಿದ್ದು, ಅದರ ಕೆಳಭಾಗದಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಆನಾವರಣಗೊಳ್ಳಲಿದೆ. ಜತೆಗೆ ಹತ್ತಿರದಲ್ಲಿ ಸುಂದರ ಉದ್ಯಾನವನ ತಲೆ ಎತ್ತಲಿದೆ.

ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಹಂಪಿಗೆ ಆಗಮಿಸುವ ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ. ನಗರದ ಹೆಬ್ಟಾಗಿಲಿನಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಸ್ಥಾಪನೆಯಾಗುತ್ತಿರುವುದು  ಹೊಸಪೇಟೆ ಹಾಗೂ ಪಶ್ಚಿಮ ತಾಲೂಕುಗಳ ಜನರಲ್ಲಿ ಸಂತಸ ತಂದಿದೆ.

ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನ ಹಂಪಿಯಲ್ಲಿ ಕನ್ನಡ ಭುವನೇಶ್ವರಿ ದೇವಿ  ದೇವಾಲಯ  ಸ್ಥಾಪನೆಯಾಗಿದೆ. ಈ ಹಿಂದೆ ವಿದ್ಯಾರಣ್ಯರ ತಪಸ್ಸಿಗೆ ಪ್ರಸನ್ನಳಾದ ತಾಯಿ ಭುವನೇಶ್ವರಿ ದೇವಿ ಹಂಪಿಯಲ್ಲಿ ಸುವರ್ಣ ಮಳೆಗೈದಿದ್ದಳು. ದೇವಿ ಕೃಪಾಶೀರ್ವಾದಿಂದ ವಿಜಯನಗರ ಬಲಿಷ್ಠ ಸಾಮ್ರಾಜ್ಯ ಸ್ಥಾಪನೆಯಿತು ಎಂಬುದು ಐತಿಹ್ಯ. 1950 ದಶಕದಲ್ಲಿ ಹಂಪಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕವಷ್ಟೆ ಕನ್ನಡ ಏಕೀಕರಣ ಚಳವಳಿ ಆರಂಭವಾಯಿತು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವ ಮುನ್ನ ಹಂಪಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿರುವುದು ವಿಶೇಷ. ಹಂಪಿ ವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿಯ ಆಶೀರ್ವಾದ ಫಲದಿಂದ ವಿಜಯನಗರ ಹೆಸರಿನಲ್ಲಿ ಜಿಲ್ಲೆ ಸ್ಥಾಪನೆಯಾಗಿದೆ ಎಂಬುದು ಸಚಿವ ಆನಂದ ಸಿಂಗ್‌ ಅವರ ಅಚಲ ನಂಬಿಕೆ. ಜಿಲ್ಲೆ ಘೋಷಣೆಯ ಅಧಿಕೃತ ಆದೇಶ ಹೊರ ಬೀಳುತ್ತಿದಂತೆ ಸಚಿವ ಆನಂದ ಸಿಂಗ್‌ ಮೆರವಣಿಗೆ ಮೂಲಕ ಹಂಪಿಗೆ ತೆರಳಿ, ಅಧಿಕೃತ ಆದೇಶ ಪತ್ರವನ್ನು ಹಂಪಿ ವಿರೂಪಾಕ್ಷ ಹಾಗೂ ಭುವನೇಶ್ವರಿ ದೇವಿ ಮುಂದೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next