Advertisement

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

07:14 PM Oct 28, 2020 | sudhir |

ಮಣಿಪಾಲ: ಗುಜರಾತ್‌ನ ನರ್ಮದಾ ಜಿಲ್ಲೆಯ ದಾದಿಯಪದಾ ತಹಸಿಲ್‌ನಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಕಳೆದ ಶನಿವಾರ ಇದರ ಗುದ್ದಲಿ ಪೂಜೆ ನೆರವೇರಿತ್ತು. ಭಾರತೀಯ ಬುಡಕಟ್ಟು ಪಕ್ಷದ (ಬಿಟಿಪಿ) ಶಾಸಕ ಮಹೇಶ್‌ ವಾಸವ ಮತ್ತು ಮಾಜಿ ಬಿಜೆಪಿ ಶಾಸಕ ಮೋತಿ ಸಿಂಗ್‌ ವಾಸವ ಸೇರಿದಂತೆ ಹಲವಾರು ನಾಯಕರು ಭೂಮಿ ಪೂಜೆ ನೆರವೇರಿಸಿದರು.

Advertisement

ಆದರೆ ಇದು ಇಷ್ಟೇ ನಡೆದರೆ ಸುದ್ದಿಯಾಗುತ್ತಿರಲಿಲ್ಲ. ಭೂಮಿ ಪೂಜೆಯ ಸಂದರ್ಭ ಉಭಯ ನಾಯಕರು ಮದ್ಯವನ್ನು ಪೂಜೆಗೆ ಬಳಸಿದ್ದಾರೆ. ಇದು ಬಳಿಕದ ದಿನಗಳಲ್ಲಿ ವೈರಲ್‌ ಆಗಿದೆ. ಮದ್ಯ ಮುಕ್ತ ರಾಜ್ಯ ಎಂದು ಗುಜರಾತ್‌ ಅನ್ನು ಕರೆಯಲಾಗುತ್ತದೆ.

ಆದರೆ ಇಲ್ಲಿ ಮದ್ಯ ಬಳಸಿದಕ್ಕೆ ಆಕ್ರೋಶಗಳು ಹೆಚ್ಚಾಗುತ್ತಿವೆ. ಬುಡಕಟ್ಟು ಸಂಪ್ರದಾಯದಂತೆ ಈ ಕಾರ್ಯ ನಡೆಸಲಾಗಿದೆ ಎಂದು ನಾಯಕರು ಸಮರ್ಥಿಸಿಕೊಂಡಿದ್ದಾರೆ. ಭರೂಚ್‌ನ ಬಿಜೆಪಿ ಸಂಸದ ಮನ್ಸುಖ್‌ ವಾಸವ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

Advertisement

ಭೂಮಿ ಪೂಜನ್‌ ಸಂದರ್ಭದಲ್ಲಿ, ಹಲವು ಬಿಜೆಪಿ-ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು. ಬುಡಕಟ್ಟು ಸಂಪ್ರದಾಯದ ಕುರಿತು ಮಾತನಾಡಿದ ಬಿಟಿಪಿಯ ಶಾಸಕ ಮಹೇಶ್‌ ವಾಸವ ಅವರು ಹೂ ಮತ್ತು ತೆಂಗಿನಕಾಯಿಯಿಂದ ಭೂಮಿಯನ್ನು ಪೂಜಿಸಲಾಗುತ್ತದೆ.ಆದರೆ ಇಲ್ಲಿ ಬುಡಕಟ್ಟು ಸಂಪ್ರದಾಯದ ಪ್ರಕಾರ ಮದ್ಯದಿಂದ ಅಭಿಷೇಕಿಸಲಾಯಿತು ಎಂದಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಬುಡಕಟ್ಟು ಮುಖಂಡರು ಇದು ತಮ್ಮ ಸಂಪ್ರದಾಯದ ಭಾಗ ಎಂದಿರುವುದಾಗಿ ವರದಿಯಾಗಿದೆ.
ಭರೂಚ್‌ನ ಬಿಜೆಪಿ ಸಂಸದ ಮನ್ಸುಖ್‌ ವಾಸವ ಅವರು ಇದನ್ನು ವಿರೋಧಿಸಿದ್ದಾರೆ. ಹಣ್ಣುಗಳು, ಹಾಲು ಮತ್ತು ನೀರಿನಿಂದ ಪೂಜೆ ಮಾಡಲಾಗುತ್ತದೆ. ಆದರೆ ಇಲ್ಲಿ ನಾಯಕ ಇದಕ್ಕೆ ಪ್ರತಿಯಾಗಿ ಮದ್ಯವನ್ನು ಬಳಸಿದ್ದಾರೆ. ಇಲ್ಲಿ ಮದ್ಯವನ್ನು ಬಳಸಿದ್ದಲ್ಲದೇ ಅವುಗಳನ್ನು ಪ್ರಸಾದದ ರೂಪದಲ್ಲಿ ಹಂಚಿದ್ದಾರೆ. ಇದು ತುಂಬಾ ತಪ್ಪು ಸಂದೇಶವಾಗಿದೆ. ಗುಜರಾತ್‌ನಲ್ಲಿ ಮದ್ಯ ನಿಷೇಧವಿದೆ. ರಾಜ್ಯದಲ್ಲಿ ಮದ್ಯ ಮುಕ್ತ ಮಾಡಲು ಸರಕಾರವು ಹಲವಾರು ಅಭಿಯಾನಗಳನ್ನು ನಡೆಸಿತ್ತು. ಆದರೆ ಜನಪ್ರತಿನಿಧಿಗಳು ಇದನ್ನು ಮರೆತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next