Advertisement

Bhubaneswar; ಪೂಜಾದ್ವೇಷಿ ಕಾಂಗ್ರೆಸ್‌ ಪ್ರಧಾನಿ ಮೋದಿ ಕಿಡಿ

12:31 AM Sep 18, 2024 | Team Udayavani |

ಭುವನೇಶ್ವರ: ಪೂಜೆಯನ್ನು ದ್ವೇಷಿಸುವಷ್ಟು ಕನಿಷ್ಠ ಮಟ್ಟಕ್ಕೆ ಕಾಂಗ್ರೆಸ್‌ ಇಳಿದಿದೆ. ನಾನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್‌ ಹಾಗೂ ಅವರ ಜತೆಗಾರರು ಕೋಪಗೊಂಡಿದ್ದಾರೆ. ದೇಶವನ್ನು ಒಡೆದ ಇವರೇ ಗಣಪತಿಯನ್ನು ಕರ್ನಾಟಕದಲ್ಲಿ ಜೈಲು ಸೇರಿಸಿದರು ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ಮಂಗಳವಾರ ವಾಗ್ಧಾಳಿ ನಡೆಸಿದ್ದಾರೆ.

Advertisement

ಒಡಿಶಾದ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಸಮಯದಲ್ಲಿ ಕಾಂಗ್ರೆಸ್‌ ದೇಶವನ್ನು ಒಡೆಯುವ ಕೆಲಸ ಮಾಡಿತು. ಈಗಲೂ ಅದನ್ನೇ ಮುಂದುವರಿಸಿರುವ ಆ ಪಕ್ಷ ಗಣಪತಿ ಪೂಜೆಯನ್ನು ಕೂಡ ದ್ವೇಷಿಸುತ್ತಿದೆ. ಗಣೇಶೋತ್ಸವ ಎಂಬುದು ನಮ್ಮ ದೇಶದಲ್ಲಿ ಕೇವಲ ಹಬ್ಬವಲ್ಲ; ಅದು ದೇಶದ ನಂಬಿಕೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು ಎಂದರು.

ಸ್ವಾತಂತ್ರ್ಯ ದೊರಕುವ ಸಮಯದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದ ಬ್ರಿಟಿಷರು ಗಣಪತಿ ಉತ್ಸವ ವನ್ನು ದ್ವೇಷಿಸುತ್ತಿದ್ದರು. ಈಗ ಅಧಿಕಾರದ ದಾಹದಿಂದ ಕುರುಡಾಗಿರುವ ಕಾಂಗ್ರೆಸ್‌ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಇವರಿಗೂ ಗಣಪತಿ ಉತ್ಸವದ ಮೇಲೆ ದ್ವೇಷವಿದೆ. ಇದೇ ಕಾಂಗ್ರೆಸ್‌ ಸರಕಾರ ಕರ್ನಾಟಕದಲ್ಲಿ ಗಣಪತಿಯನ್ನು ಜೈಲಿಗೆ ಹಾಕಿತು ಎಂದು ಆರೋಪಿಸಿದರು.

ಕಾಂಗ್ರೆಸ್‌ ನಡೆಯಿಂದ ಇಡೀ ದೇಶ ಗೊಂದಲಕ್ಕೀಡಾಗಿದೆ. ಇದು ಮುಂದುವರಿಯಲು ನಾವು ಬಿಡಬಾರದು. ಗಣೇಶ ಉತ್ಸವ ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಸಂಭ್ರಮವಾಗಿಯೇ ಉಳಿದುಕೊಳ್ಳಬೇಕು ಎಂದರು.

ಕೆಲವು ದಿನಗಳ ಹಿಂದೆ ಸಿಜೆಐ ಚಂದ್ರಚೂಡ್‌ ಅವರ ಮನೆಯಲ್ಲಿ ನಡೆದ ಗಣಪತಿ ಪೂಜೆಯಲ್ಲಿ ಪ್ರಧಾನಿ ಭಾಗಿಯಾಗಿದ್ದರು. ಈ ಬಗ್ಗೆ ವಿಪಕ್ಷ ಒಕ್ಕೂಟದ ಕೆಲವು ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.

Advertisement

ಹುಟ್ಟುಹಬ್ಬದಂದೇ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ
-ಒಡಿಶಾದ ಮಹಿಳೆಯರಿಗೆ 50 ಸಾವಿರ ರೂ. ಸಹಾಯಧನ ನೀಡುವ “ಸುಭದ್ರಾ ಯೋಜನೆ’ ಉದ್ಘಾಟನೆ
-2,871 ಕೋಟಿ ರೂ. ಮೌಲ್ಯದ ರೈಲ್ವೇ ಯೋಜನೆಗಳಿಗೆ ಒಡಿಶಾದಲ್ಲಿ ಚಾಲನೆ
-ಒಂದು ಸಾವಿರ ಕೋಟಿ ರೂ. ಮೊತ್ತದರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಹಸುರು ನಿಶಾನೆ
-ಪಿಎಂಎವೈಯ 26 ಲಕ್ಷ ಫ‌ಲಾನುಭವಿಗಳ ಗೃಹ ಪ್ರವೇಶ ಸಮಾರಂಭಕ್ಕೆ ಚಾಲನೆ
-ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ)ಯ 10 ಲಕ್ಷ ಫ‌ಲಾನುಭವಿಗಳಿಗೆ ಮೊದಲ ಕಂತಿನ ಮೊತ್ತ ಬಿಡುಗಡೆ
-ಭುವನೇಶ್ವರದ ಸಬರ್‌ಶಾಹಿ ಕೊಳಗೇರಿ ಪ್ರದೇಶಕ್ಕೆ ಭೇಟಿ, 20 ಪಕ್ಕಾ ಮನೆಗಳ ಉದ್ಘಾಟನೆ, ಫ‌ಲಾನುಭವಿಗಳ ಜತೆಗೆ ಸಂವಾದ

Advertisement

Udayavani is now on Telegram. Click here to join our channel and stay updated with the latest news.