ವಾರಾಣಸಿ/ಲಕ್ನೋ : ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಪ್ರತಿಭಟನ ನಿರತ ವಿದ್ಯಾರ್ಥಿಗಳ ಮೇಲೆ ಅತಿಯಾದ ಪೊಲೀಸ್ ಬಲಪ್ರಯೋಗಿಸಿದ ಆರೋಪದ ಮೇಲೆ ಉತ್ತರಪ್ರದೇಶ ಸರಕಾರ ಇಂದು ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಪೂರ್ಣ ವರದಿಯನ್ನು ಕೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆ ಪ್ರಕಾರ ಲಂಕಾ ಎಸ್‌ಎಚ್‌ಓ, ಭೇಲ್‌ಪುರ ಸರ್ಕಲ್ ಆಫೀಸರ್ ಮತ್ತು ಒಬ್ಬ ಹೆಚ್ಚುವರಿ ಸಿಟಿ ಮ್ಯಾಜಿಸ್ಟ್ರೇಟ್ (ಎಸಿಎಂ) ಅವರನ್ನು “ವಾರ್ಸಿಟಿ ಕ್ಯಾಂಪಸ್ ಒಳಗೆ ಹಿಂಸೆಯನ್ನು ನಿಯಂತ್ರಿಸುವಲ್ಲಿ ವಿಫಲರಾದ’ ಕಾರಣಕ್ಕೆ ತೆಗೆದು ಹಾಕಲಾಗಿದೆ.
ಕ್ಯಾಂ±ಸ್ ಒಳಗಿನ ಹಿಂಸೆಗೆ ಹೊರಗಿನವರೇ ಕಾರಣ ಎಂದು ಯುನಿವರ್ಸಿಟಿ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಕಮಿಷನರ್ ಘಟನೆಯ ಬಗ್ಗೆ ಸವಿವರ ವರದಿಯನ್ನು ಕೇಳಿದ್ದಾರೆ.
ಪ್ರತಿನಟನೆ ಹಾಗೂ ಹಿಂಸಾ ನಿರತ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಒಳಗಿನಿಂದ ಎತ್ತಂಗಡಿ ಮಾಡಲು ನಿನ್ನೆ ಭಾನುವಾರ ಪೊಲೀಸರು ಬಲ ಪ್ರಯೋಗ ನಡೆಸಿದ್ದರು. ಪ್ರತಿಭಟನೆ ನಿರತ ಡಜನ್‌ಗಟ್ಟಲೆ ವಿದ್ಯಾರ್ಥಿಗಳನ್ನು ಪೊಲಿಸರು ಬಂಧಿಸಿದ್ದರು.
ಹಿಂಸೆಯು ಕ್ಯಾಂಪಸ್ ತುಂಬ ಆವರಿಸಿಕೊಂಡಿದ್ದು 1,200 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.