ಹೊಸದಿಲ್ಲಿ: ”ಆಪಾದಿತ ಮುಡಾ ಹಗರಣದ ಸಿಬಿಐ ತನಿಖೆಗೆ ಕರ್ನಾಟಕ ಕಾಂಗ್ರೆಸ್ ಸರಕಾರ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿದ್ದು ಪಕ್ಷವು ಮೊಹಬ್ಬತ್ ಕಿ ದುಕಾನ್ ನಡೆಸುವ ಬದಲು ಭ್ರಷ್ಟಾಚಾರ್ ಕೆ ಭಾಯಿಜಾನ್ ಆಗಿ ಬದಲಾಗಿದೆ” ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.
ಶುಕ್ರವಾರ(ಸೆ27)ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಉಳಿಯಲು ನೈತಿಕ ಆಧಾರವೇನಿದೆ ಎಂದು ಪ್ರಶ್ನಿಸಿದರು, ಕಾಂಗ್ರೆಸ್ ಪಕ್ಷದ ಆಡಳಿತವು ಭ್ರಷ್ಟ ಆಚರಣೆಗಳ ಮೂಲಕ ಅವರ ಕುಟುಂಬದ ಸದಸ್ಯರಿಗೆ ಲಾಭದಾಯಕವಾಗಿದೆ ಎಂದು ಕಿಡಿ ಕಾರಿದರು.
“ಕಾಂಗ್ರೆಸ್ ಒಂದು ‘ಜಮೀನ್ ಸೆ ಜೂಡಿ ಹುಯಿ’(ಭೂಮಿಗೆ ಅಂಟಿಕೊಂಡ) ಪಕ್ಷ. ಅವರು ಅಧಿಕಾರಕ್ಕೆ ಬಂದಾಗಲೆಲ್ಲ,ತಮ್ಮ ಸಂಬಂಧಿಕರ ಹೆಸರಿಗೆ ಭೂಮಿಯನ್ನು ನೋಂದಾಯಿಸುತ್ತಾರೆ. ಅದು ನ್ಯಾಷನಲ್ ಹೆರಾಲ್ಡ್ ಆಗಿರಬಹುದು, ಹರಿಯಾಣದ ‘ದಮದ್’ ಅಥವಾ ಕರ್ನಾಟಕದ ಹೆಂಡತಿ. ಅವರು ತಮ್ಮ ಕುಟುಂಬದ ಸದಸ್ಯರನ್ನು ಫಲಾನುಭವಿಗಳನ್ನಾಗಿ ಮಾಡುತ್ತಾರೆ ಮತ್ತು ಆದ್ದರಿಂದ ಇದನ್ನು ‘ಜಮೀನ್ ಸೆ ಜೂಡಿ ಹುಯಿ’ ಪಾರ್ಟಿ ಎಂದು ಕರೆಯಲಾಗುತ್ತದೆ”ಎಂದರು.
ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರನ್ನು ಲೂಟಿ ಮಾಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯ.ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮುಡಾ ಹಗರಣ ಬಹಿರಂಗವಾದ ನಂತರ, ಕಾಂಗ್ರೆಸ್ ಸರ್ಟಿಫೈಡ್ ಲೂಟಿಕೋರನಂತೆ ವರ್ತಿಸಿದೆ. ಕಾನೂನಿನ ಕೈಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಅವರು ಸಿಬಿಐನ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡರು. ಅವರು ವೃತ್ತಿಪರ ಕಳ್ಳರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಧೋರಣೆ ಮೊದಲು ಕದಿಯುವುದು ಮತ್ತು ನಂತರ ನಿರ್ಭಯದಿಂದ ವರ್ತಿಸುವುದಾಗಿದೆ. ಭ್ರಷ್ಟಾಚಾರದ ಬಗೆಗಿನ ಈ ಧೋರಣೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಾದ್ಯಂತ ವ್ಯಾಪಕವಾಗಿದೆ ಎಂದು ಪೂನಾವಾಲಾ ಕಿಡಿ ಕಾರಿದರು.
ಕಾಂಗ್ರೆಸ್ ನಾಯಕರು ಕರ್ನಾಟಕ ರಾಜ್ಯಪಾಲರನ್ನು ಅವಮಾನಿಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೈಕೋರ್ಟ್‌ನ ಆದೇಶದ ಹೊರತಾಗಿಯೂ ಕಾಂಗ್ರೆಸ್ ಪಕ್ಷವು ರಾಜ್ಯಪಾಲರ ತೀರ್ಪನ್ನು ಪ್ರಶ್ನಿಸುವುದನ್ನು ಮುಂದುವರೆಸಿದೆ ಎಂದು ಪೂನಾವಾಲಾ ಕಿಡಿ ಕಾರಿದರು.