ಮುಂಬಯಿ: ನಗರದ ಯಕ್ಷಗಾನ ತರಬೇತಿ ಸಂಸ್ಥೆ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್ ಇದರ ದಶಮಾನೋತ್ಸವ ಸಮಾರಂಭದ ಪೂರ್ವಭಾವಿ ಸಭೆಸಾಕಿನಾಕಾದಲ್ಲಿರುವ ಹೊಟೇಲ್ ಮುಂಬಯಿ ಮೆಟ್ರೋ ಇದರ ಸಭಾಗೃಹದಲ್ಲಿ ನಡೆಯಿತು.
ಸಂಸ್ಥೆಯ ಗೌರವಾಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದಶಮಾನೋತ್ಸವ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉದ್ಯಮಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಅವರನ್ನು ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಅರವಿಂದ ಶೆಟ್ಟಿ ಕೊಜಕೊಳ್ಳಿ, ಬಾಲಕೃಷ್ಣ ಆದ್ಯಪಾಡಿ, ಲಕ್ಷ್ಮಣ್‌ಕಾಂಚನ್, ಜನಾರ್ದನ ಪೂಜಾರಿ, ಕಾರ್ಯದರ್ಶಿಯಾಗಿ ಸುನಿಲ್ ಗೋಪಾಲ್ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ದಿವ್ಯಾ ಜಯೇಶ್ ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ಮಹೇಶ್ ಶೆಟ್ಟಿ ನಕ್ರೆ ಇವರನ್ನು ಆಯ್ಕೆ ಮಾಡಲಾಯಿತು.
ದಶಮಾನೋತ್ಸವ ವರ್ಷದಲ್ಲಿ ಭಾÅಮರಿಯ ಏಳು ಶಿಬಿರಗಳಿಂದ ಏಳು ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ, ಯಕ್ಷಗುರು ಕಟೀಲು ಸದಾನಂದ ಶೆಟ್ಟಿ ತಿಳಿಸಿ ಎಲ್ಲರ ಸಹಕಾರ ಬಯಸಿದರು. ಸಭೆಯಲ್ಲಿ ಗೌರವಾಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಸುಮತಿ ಆರ್. ಶೆಟ್ಟಿ, ಪ್ರಕಾಶ್ ಟಿ. ಆಳ್ವ, ಕೃಷ್ಣರಾಜ್ ಶೆಟ್ಟಿ, ವಿಜಯ ಪಿ. ಶೆಟ್ಟಿ, ಮಹೇಶ್ ಶೆಟ್ಟಿ, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಸ್ಮಿತಾ ಶೆಟ್ಟಿ, ಲಕ್ಷ್ಮಣ್ ಕಾಂಚನ್, ನಾರಾಯಣ ಶೆಟ್ಟಿ, ಶಿಬಿರದ ಪ್ರಮುಖರಾದ ವಿಜಯಲಕ್ಷ್ಮೀ ಶೆಟ್ಟಿ, ಸುರೇಖಾ ಶೆಟ್ಟಿ, ಪೂರ್ಣಿಮಾ ದೇವಾಡಿಗ, ಗೀತಾ ದೇವಾಡಿಗ, ಹೇಮಾ ಎಲ್. ಕೋಟ್ಯಾನ್, ಶಶಿ ಪೂಜಾರಿ, ಜಯೇಶ್ ಶೆಟ್ಟಿಗಾರ್, ಶೋಭಾ ಪೂಜಾರಿ, ಶಶಿಕಲಾ ಪೂಜಾರಿ, ನಿತೇಶ್ ದೇವಾಡಿಗ, ವಿಜಯ ಶೆಟ್ಟಿ ಕುತ್ತೆತ್ತೂರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯ ಪಿ. ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.