ಮುಂಬಯಿ: ಭ್ರಾಮರಿ ಯಕ್ಷ ನೃತ್ಯಕಲಾ ನಿಲಯ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಸಭೆಯು ನಗರದ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ ಅವರ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಂಸ್ಥೆಯ ನೂತನ ಗೌರವಾಧ್ಯಕ್ಷರನ್ನಾಗಿ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ ಅವರನ್ನು ಸರ್ವಾನುಮತದಿಂದ ನೇಮಿಸಲಾಯಿತು.
ನೂತನ ಅಧ್ಯಕ್ಷೆಯನ್ನಾಗಿ ಸುಶೀಲಾ ಸಿ. ಶೆಟ್ಟಿ, ಉಪಾಧ್ಯಕ್ಷೆಯಾಗಿ ಸುಮತಿ ಶೆಟ್ಟಿ, ಕಾರ್ಯದರ್ಶಿಯಾಗಿ ಆನಂದ ಶೆಟ್ಟಿ ಇನ್ನ, ಜತೆ ಕಾರ್ಯದರ್ಶಿಯಾಗಿ ವಿಜಯ ಶೆಟ್ಟಿ ಕುತ್ತೆತ್ತೂರು, ಕೋಶಾಧಿಕಾರಿಯಾಗಿ ಮಹೇಶ್ ಶೆಟ್ಟಿ ನಕ್ರೆ, ಜತೆ ಕೋಶಾಧಿಕಾರಿಯಾಗಿ ಪ್ರವೀಣ್ ಶೆಟ್ಟಿ ಅವರನ್ನು ನೇಮಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೃಷ್ಣ ಪೂಜಾರಿ, ರೋಶನ್ ಕೋಟ್ಯಾನ್, ಹರೀಶ್ ಸಾಲ್ಯಾನ್, ಪವಿತ್ರಾ ಶೆಟ್ಟಿಗಾರ್, ಹೇಮಾ ಕೋಟ್ಯಾನ್, ಜಯಲಕ್ಷ್ಮೀ ದೇವಾಡಿಗ, ರಾಘು ದೇವಾಡಿಗ, ಹರೀಶ್ ಪೂಜಾರಿ, ಶಾಂತಾ ಆಚಾರ್ಯ, ಕಡ್ತಲ ಕೃಷ್ಣ ನಾಯಕ್, ಶಂಕರ ಜೆ. ಶೆಟ್ಟಿ, ಯಶೋದಾ ಕೆ. ಶೆಟ್ಟಿ ಅವರು ಆಯ್ಕೆಯಾದರು.
ಸಲಹೆಗಾರರಾಗಿ ಕೆ. ಕೆ. ಶೆಟ್ಟಿ, ಪಾಂಡು ಎಲ್. ಶೆಟ್ಟಿ ವಸಾಯಿ, ನಾರಾಯಣ ಶೆಟ್ಟಿ ಮೀರಾರೋಡ್, ಪ್ರಕಾಶ್ ಟಿ. ಆಳ್ವ ಸಾಕಿನಾಕಾ, ದೇವೇಂದ್ರ ಡಿ. ಬುನ್ನನ್ ವಸಾಯಿ, ಸುಧಾಕರ ಜಿ. ಪೂಜಾರಿ ಪೊವಾಯಿ ಅವರನ್ನು ಸರ್ವಾನುತದಿಂದ ನೇಮಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಗೌರವಾಧ್ಯಕ್ಷ ನ್ಯಾಯವಾದಿ ಪ್ರಕಾಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಆನಂದ ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು.
ನೂತನ ಗೌರವಾಧ್ಯಕ್ಷ ಕಡಂದಲೆ ಪರಾರಿ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ನನಗೆ ಯಕ್ಷಗಾನದ ಬಗ್ಗೆ ಅಭಿರುಚಿಯಿದ್ದು, ತುಳುನಾಡಿನ ಬಹಳ ಪ್ರಮುಖ ಕಲೆ ಇದಾಗಿದೆ. ಕಲೆಯ ಉಳಿವಿಗಾಗಿ ಹಾಗೂ ಕಲಾವಿದರ ಪೋಷಣೆಗಾಗಿ ನಾವೆಲ್ಲರೂ ಒಂದಾಗಿ ಸಹಕರಿಸೋಣ. ಸಮಿತಿಯಲ್ಲಿ ಎಲ್ಲರೂ ಶಿಸ್ತನ್ನು ಪಾಲಿಸಬೇಕು. ಆಗ ಸಂಸ್ಥೆಯ ಅಭಿವೃದ್ಧಿಯಾಗುತ್ತದೆ. ಕೇವಲ ಯಕ್ಷಗಾನಕ್ಕೆ ಮಾತ್ರ ನಾವು ಸೀಮಿತವಾಗಿರದೆ ಶೈಕ್ಷಣಿಕ, ಆರೋಗ್ಯ ಇತ್ಯಾದಿ ಸಂಬಂಧಿತ ಸಮಸ್ಯೆಗಳಿಗೂ ಸ್ಪಂದಿಸಿ ಈ ಸಂಸ್ಥೆಯನ್ನು ಮತ್ತಷ್ಟು ಉತ್ತಮವಾಗಿ ಬೆಳೆಸೋಣ ಎಂದರು.
ಅಧ್ಯಕ್ಷೆ ಸುಶೀಲಾ ಶೆಟ್ಟಿ ಅವರು ಮಾತನಾಡಿ, ನಮ್ಮ ಗುರುಗಳಾದ ಸದಾನಂದ ಶೆಟ್ಟಿ ಅವರು ಕಲೆ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಅವರಿಗೆ ಸಹಕರಿಸಿ, ಪ್ರೋತ್ಸಾಹಿಸೋಣ ಎಂದು ಹೇಳಿದರು. ಸಂಸ್ಥೆಯ ಟ್ರಸ್ಟಿ ಕೃಷ್ಣರಾಜ್ ಶೆಟ್ಟಿ ಸಂಸ್ಥೆಯು ನಡೆದು ಬಂದ ಬಗೆಯನ್ನು ವಿವರಿಸಿದರು. ಕಟೀಲು ಸದಾನಂದ ಶೆಟ್ಟಿ ಸಂಸ್ಥೆಯು ಹುಟ್ಟು ಹಾಗೂ ಸಾಧನೆಗಳು, ಶಿಬಿರಗಳ ಬಗ್ಗೆ ಮಾಹಿತಿ ನೀಡಿದರು. ವಿಜಯ ಶೆಟ್ಟಿ ಕುತ್ತೆತ್ತೂರು ವಂದಿಸಿದರು.