Advertisement

Heart Attack: ಅಡುಗೆ ಮಾಡುತ್ತಿದ್ದ ವೇಳೆ ಹೃದಯಾಘಾತ; ಕುಸಿದು ಬಿದ್ದು 22ರ ಯುವಕ ಮೃತ್ಯು

06:26 PM Dec 26, 2023 | Team Udayavani |

ಭೋಪಾಲ್:‌ ಅಡುಗೆ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಯುವಕನೊಬ್ಬ ಕುಸಿದು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್‌ ನಲ್ಲಿ ನಡೆದಿದೆ.

Advertisement

ರೇವಾ ಮೂಲದ ವಿವೇಕ್ ಸೋನಿ (22) ಮೃತ ಯುವಕ. ಈತ ಭೋಪಾಲ್‌ನ ಟಿಐಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿಯಾಗಿದ್ದ.

ಅಯೋಧ್ಯನಗರ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ವಿವೇಕ್. ಸೋಮವಾರ ರಾತ್ರಿ 8 ಗಂಟೆಯ (ಡಿ.25 ರಂದು) ಸುಮಾರಿಗೆ ಫ್ಲಾಟ್‌ನಲ್ಲಿ ಓದಲು ಸಿದ್ದತೆ ನಡೆಸುತ್ತಿದ್ದರು. ಸ್ನೇಹಿತರೊಂದಿಗೆ ಒಟ್ಟಿಗೆ ಓದುವ ಮೊದಲು ಊಟ ಮಾಡುವ ಎಂದು  ಹೇಳಿ ವಿವೇಕ್‌ ಅಡುಗೆ ಮನೆಗೆ ಹೋಗಿದ್ದಾರೆ.  ಈ ವೇಳೆ ವಿವೇಕ್‌ ತನಗೆ ಎದೆನೋವು ಆಗುತ್ತಿದೆ ಎಂದು ಸ್ನೇಹಿತರ ಬಳಿ ಹೇಳಿದ್ದಾರೆ. ಆದರೆ ನೋವಿನಲ್ಲೇ ಅಡುಗೆ ಮಾಡಲು ಕಿಚನ್‌ ಗೆ ತೆರಳಿದ್ದಾರೆ.

ತರಕಾರಿ ಕತ್ತರಿಸುವ ವೇಳೆ ಎದೆಗೆ ಕೈಯಿಟ್ಟುಕೊಂಡೇ ವಿವೇಕ್‌ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next