Advertisement

ಪಾರ್ಲಿಮೆಂಟ್ ಮಾದರಿ ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ

06:25 PM Dec 09, 2022 | Team Udayavani |

ಹೊಸಪೇಟೆ: ದೇಶಕ್ಕೆ ಶ್ರೇಷ್ಟ ಸಂವಿಧಾನ ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ 9 ಅಡಿ ಎತ್ತರದ ನೂತನ ಕಂಚಿನ ಪುತ್ಥಳಿಯನ್ನು ಪಾರ್ಲಿಮೆಂಟ್ ಮಾದರಿಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.

Advertisement

ನಗರದ ಅಂಬೇಡ್ಕರ್ ವೃತ್ತದಲ್ಲಿ ನೂತನ ವೃತ್ತ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ನೂತನ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶದ ಪಾರ್ಲಿಮೆಂಟ್ ಭವನ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಅದರ ಮೇಲೆ ಅಂಬೇಡ್ಕರ್ ಅವರ 9 ಅಡಿ ಎತ್ತರ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗುವುದು. ಇದು ರಾಜ್ಯದಲ್ಲಿ ಪ್ರಥಮವಾಗಿದೆ. ಇದಕ್ಕೆ ಹಂಪಿ ವಿರೂಪಾಕ್ಷೇಶ್ವರ ಆರ್ಶಿವಾದ ಫಲದಿಂದ ಈ ಕಾರ್ಯ ಸಾಧ್ಯವಾಗಿದೆ. ವಿಜಯನಗರ ನೆಲದ ಮಹತ್ವವಾಗಿದೆ. ಹೊಸ ಜಿಲ್ಲೆಯಲ್ಲಿ ಎಲ್ಲವೂ ಮಾದರಿ ಕಾರ್ಯಗಳೇ ಆಗುತ್ತಿವೆ. ಅದರಲ್ಲಿ ಅಂಬೇಡ್ಕರ್ ವೃತ್ತವೊಂದು ಮಾದರಿಯಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ನಗರದಲ್ಲಿ ಮಾದರಿ ಅಂಬೇಡ್ಕರ್ ವೃತ್ತ ತಲೆ ಎತ್ತಲಿದೆ ಎಂದರು.

ಈ ಸಂದರ್ಭದಲ್ಲಿ ಮಾತಂಗ ಆಶ್ರಮದ ಪೂರ್ಣಾನಂದ ಸ್ವಾಮಿಜಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್,ಎಸ್ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ್, ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷ ವೀರಸ್ವಾಮಿ, ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಉಮಾಪತಿ, ಹೆಚ್ ಎಸ್ ವೆಂಕಪ್ಪ. ಮೈಶಾಕ್ ಆಂಕಾಳಿ, ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ತಾಯಣ್ಣ ದೊಡ್ಡಮನಿ. ತಾಲುಕು ಅಧ್ಯಕ್ಷ ವಿಜಯಕುಮಾರ್. ಜೆ ಬಿ ರಾಘವೇಂದ್ರ, ಮರಿದಾಸ್, ಹೆಚ್ ಬಿ ಶ್ರೀನಿವಾಸ. ಜಿ ಪಿ ತಾಯಪ್ಪ, ಭರತ್ ಕುಮಾರ್, ವಿಜಯಕುಮಾರ್, ಓಬಳೇಶ್. ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next