ಶಿರಸಿ: ಅರ್ಜಿ ಕೊಟ್ಟವರನ್ನೇ ಪೊಲೀಸರು, ಕಂದಾಯ, ಅರಣ್ಯ ಇಲಾಖೆಗಳು ಅಲೆದಾಟ ಮಾಡಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಅಂಬೇಡ್ಕರ ಭವನದಲ್ಲಿ ನಡೆದ ಜನಸ್ನೇಹಿ ಜನಸ್ಪಂದನ ಅಧ್ಯಕ್ಷತೆವಹಿಸಿ ಮಾತನಾಡಿ, ಹದಿನೈದು ದಿನದಲ್ಲಿ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಆಗಬೇಕು. ಅಲೆದಾಟ ಮಾಡಿಸಿದ ದೂರು ಮರಳಿ ಬಂದರೆ ಸಹಿಸಲು ಸಾಧ್ಯವಿಲ್ಲ ಎಂದೂ ಹೇಳಿದರು.
ನಗರದ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ಕಸ ಚೆಲ್ಲುವವರು ಕ್ರಮ ಕೈಗೊಳ್ಳಬೇಕು. ಸಿಸಿ ಟಿವಿ ಕೂಡ ಹಾಕಿ ಕಣ್ಗಾವಲು ಇಡಬೇಕು ಎಂದರು.
ಈ ವೇಳೆ ತಹಸೀಲ್ದಾರ ರಮೇಶ ಹೆಗಡೆ, ಡಿಎಸ್ಪಿ ಗಣೇಶ ಕೆ.ಎಲ್. ಪೌರಾಯುಕ್ತ ಕಾಂತರಾಜ, ತೋಟಗಾರಿಕಾ ಅಧಿಕಾರಿ ಬಿ.ಪಿ.ಸತೀಶ, ಸತೀಶ ಹೆಗಡೆ, ಸುಮಾ ಉಗ್ರಾಣಕರ್ ಇತರರು ಇದ್ದರು.
ಇದನ್ನು ಓದಿ: Siruguppa: ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಅಕ್ಕಿ ವಶ