Advertisement
ತಾಲೂಕಿನಲ್ಲಿ ಬುಧವಾರ 9ನೇ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ನನ್ನ ನಾಯಕತ್ವದಲ್ಲಿ ಚನ್ನಪಟ್ಟಣ ತಾಲೂಕು ಬೆಂಗಳೂರಿಗೆ ಸೇರಲಿದೆ. ಭೂಮಿ ಬೆಲೆ ಕೂಡ ಹೆಚ್ಚಾಗಲಿದೆ. ನಾವೆಲ್ಲರೂ ಬೆಂಗಳೂರಿನ ಸಮೀಪವಿದ್ದೇವೆ ಎಂದರು.ಚನ್ನಪಟ್ಟಣ ಸುತ್ತಮುತ್ತ ಸುಮಾರು 30 ಎಕರೆ ವ್ಯಾಪ್ತಿಯಲ್ಲಿ ಹೊಸ ಟೌನ್ ನಿರ್ಮಾಣವಾಗಲಿದೆ. ಎಲ್ಲ ಬಡವರಿಗೆ ಸೈಟ್ ಕೊಡುವ ಕೆಲಸ ಆಗುತ್ತದೆ. ಕನಕಪುರದಲ್ಲಿ ಈಗಾಗಲೇ 100 ಎಕರೆಯಲ್ಲಿ ಸೈಟ್ ನಿರ್ಮಿಸಿ ಬಡವರಿಗೆ ಕೊಟ್ಟಿದ್ದೇವೆ. ಜನಸಾಮಾನ್ಯರ ಎಲ್ಲ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೇವೆ. ನಿಮ್ಮ ಜತೆ ಸಂಪರ್ಕದಲ್ಲಿರುತ್ತೇನೆ. ನನ್ನ ಕೈ ಬಲಪಡಿಸಿ, ನನಗೆ ಶಕ್ತಿ ತುಂಬಿ. ನಮ್ಮವರನ್ನು ಶಾಸಕರನ್ನಾಗಿ ಮಾಡಲು ಸಹಕಾರ ಕೊಡಿ. ನನ್ನ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ನಮ್ಮ ಕಾಲದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಅವರ ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಮೂಡಾ ಹಗರಣ ವಿರೋಧಿಸಿ ಬಿಜೆಪಿಯಿಂದ ಸಿಎಂ ಮನೆಗೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ ಎಂದು ಹೇಳಿದರು.