Advertisement

ಶಿರಸಿಯ ಅದ್ವೈತನಿಗೆ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

03:50 PM Jun 30, 2024 | Team Udayavani |

ಶಿರಸಿ: ನಗರದ ಸೆಂಟ್ ಅಂಥೋನಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಅದ್ವೈತನಿಗೆ ಪ್ರತಿಷ್ಠಿತ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ನಗರದ ಪಾಂಡುರಂಗ ಸಭಾಭವನದಲ್ಲಿ‌ ರೋಟರಿ‌ ಕ್ಲಬ್ ಆಯೋಜಿಸಿದ್ದ ತನ್ನ ಗ್ರಾಟಿಡ್ಯುಡ್ ಡೇ ಕಾರ್ಯಕ್ರಮದಲ್ಲಿ ಈ ದಾಖಲೆ ಪ್ರಶಸ್ತಿ ಹಾಗೂ ಪದಕವನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ರೊ ಶೈಲೇಶ ಹಳದಿಪುರ ನೀಡಿದರು.

ಮೇ.1ರಂದು ಕಾರವಾರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಕಿ.ಮೀ. ರೋಲರ್ ಸ್ಕೇಟಿಂಗ್ ಮೂಲಕ ಮತದಾನ ಜಾಗ್ರತಿ ಅಭಿಯಾನ ಮಾಡಿದ್ದು, ಅದ್ವೈತನ ಈ ಸಾಧನೆಗೆ ಇಂಟರ್‌ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಿಂದ ಗೌರವ ಪ್ರಶಸ್ತಿ ಪಡೆದ ವಿಶ್ವದ ಪ್ರಥಮ ಕಿರಿಯ ಬಾಲಕನಾಗಿದ್ದಾನೆ.

ಕಳೆದ ಐದು ವರ್ಷಗಳಿಂದ ಶಿರಸಿಯ ಅದ್ವೈತ ಸ್ಕೇಟರ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದು, ಹಾವೇರಿಯ ಜ್ಞಾನ ಚೇತನ (ಪವರ್ ಆಫ್ ಸಿಕ್ಸ್ ಸೆನ್ಸ್) ಗುರುಕುಲ ತರಬೇತಿ ಕೇಂದ್ರದಲ್ಲಿ ಗಾಂಧಾರಿ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾನೆ.

ಮಾಸ್ಟರ್ ಅದ್ವೈತ ಕಳೆದೆರಡು ವರ್ಷಗಳ ಹಿಂದೆ ಹಾರ್ಮೋನಿಯಂ ಮೂಲಕ 75 ಬಾರಿ ನಮ್ಮ ರಾಷ್ಟ್ರ ಗೀತೆ ಜನಗಣಮನ ನುಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಯನ್ ಬುಕ್ ಆಫ್ ರೇಕಾರ್ಡ್ ಪ್ರಶಸ್ತಿಯನ್ನೂ ಪಡೆದಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next