Advertisement

ಭಾಯಂದರ್‌ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ: ಮಹಾಪೂಜೆ

04:29 PM Apr 24, 2019 | Team Udayavani |

ಭಾಯಂದರ್‌: ಭಾಯಂದರ್‌ ಪೂರ್ವದ ಎಸ್‌. ವಿ. ರೋಡ್‌ನ‌ಲ್ಲಿರುವ ಸುಂದರಿ ಶೆಟ್ಟಿ ಮತ್ತು ಪರಿವಾರದವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡಿರುವ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ವಾರ್ಷಿಕ ಮಹಾಪೂಜೆಯು ಎ. 14ರಂದು ಸಮಿತಿಯ ಶೇಖರ್‌ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.

Advertisement

ಸಂಜೆ ಭಾರತ ರತ್ನ ಸಚಿನ್‌ ತೆಂಡೂಲ್ಕರ್‌ವೆುçದಾನದಲ್ಲಿ ಧಾರ್ಮಿಕ ಸಭೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿಯ ಪರಮಭಕ್ತ ಸಂತೋಷ್‌ ಗುರುಸ್ವಾಮಿ ಮೂಡುಮಾರ್ನಾಡು ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿದ ಮಾತನಾಡಿದ ಸಂತೋಷ್‌ ಗುರುಸ್ವಾಮಿ ಅವರು, ಮೂಕಾಂಬಿಕೆಯ ಪರಮ ಭಕ್ತನಾಗಿರುವ ನನಗೆ ಈ ಸಮ್ಮಾನ ನನ್ನ ಬದುಕಿಗೆ
ಶ್ರೀರಕ್ಷೆಯಾಗಿದೆ. ಶಾಂತರೂಪವಾಗಿ ನೆಲೆನಿಂತ
ದೇವಿ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯಾಗಿದೆ. ಅಂತರಂಗದ ಶ್ರೀಮಂತಿಕೆ ಭಗವಂತನಲ್ಲಿರಿಸಬೇಕಾಗಿದೆ. ನನ್ನನ್ನು ತವರೂರಿನಿಂದ ಬರಮಾಡಿಸಿಕೊಂಡು ಈ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸಿ ಗೌರವಪೂರ್ವಕವಾಗಿ ನಡೆಸಿದ ಸಮ್ಮಾನ ನನ್ನ ಮಾತಾಪಿತರಿಗೆ ಸಮರ್ಪಿಸುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕರಾಟೆಪಟು ವಸಂತ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ವಸಂತ್‌ ಶೆಟ್ಟಿ ಅವರು, ನಮ್ಮ ಬದುಕಿನಲ್ಲಿ ಯಾವುದೇ ಸಮಸ್ಯೆ ಎದುರಾ ಗಿದ್ದರೂ ನಮ್ಮಲ್ಲೊಂದು ಬದುಕಿನ ಯಶಸ್ವಿಯ ಗುರಿಯಿರಬೇಕು. ಅದಕ್ಕೆ ತಕ್ಕಂತೆ ಸಾಧನೆ ಮಾಡಬೇಕು. ನನ್ನ ಎಲ್ಲ ಸಾಧನೆಗಳಿಗೆ ತಾಯಿ ನೀಡಿದ ಮಾರ್ಗದರ್ಶನ, ಪ್ರೇರಣೆಯಾಗಿದೆ. ಬದುಕಿನಲ್ಲಿ ಕೆಟ್ಟವರು ಮತ್ತು ಒಳ್ಳೆಯವರ ಸಹವಾಸವಿದ್ದರೂ ನಮ್ಮನ್ನು ನಾವು ನಿಯಂತ್ರಿ
ಸುವ ಶಕ್ತಿ ನಮ್ಮಲ್ಲಿರಬೇಕು. ಆ ನಿಟ್ಟಿನಲ್ಲಿ ಬದುಕು ಸಾಗಿಸಿದಾಗ ಯಶಸ್ವಿಯಾಗುತ್ತೇವೆ. ಕರಾಟೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದೇನೆ. ನನ್ನಲ್ಲಿ ಕಲಿಯುತ್ತಿರುವ ಸಾಕಷ್ಟು ವಿದ್ಯಾರ್ಥಿಗಳು ದೇಶ ಗುರುತಿಸುವಂಥ ಸಾಧನೆ ಮಾಡಿದ್ದಾರೆ. ಹೆಣ್ಣು ಮಕ್ಕಳು ಕರಾಟೆ ಅಭ್ಯಸಿಸಬೇಕು. ತುಳು-ಕನ್ನಡಿಗರ ಮಕ್ಕಳಿಗೆ ಕರಾಟೆ ಆಸಕ್ತರಿಗೆ ನನ್ನಿಂದ ಯಾವುದೇ ರೀತಿಯ ಕರಾಟೆ ತರಬೇತಿ ನೀಡಲು ನಾನು ಸಿದ್ಧನಿದ್ದೇನೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಾ ಶೆಟ್ಟಿ ಅವರು ಮಾತನಾಡಿ, ಪ್ರತಿ ತಾಯಿಯು ತನ್ನ ಮಕ್ಕಳಿಗೆ ಒಳ್ಳೆಯವರ ಸಂಘವನ್ನು ಮಾಡುವಂತೆ ತಿಳಿ ಹೇಳಬೇಕು. ಮಾತಾ-ಪಿತರಿಗೆ, ಗುರುಹಿರಿಯರಿಗೆ ಗೌರವ ನೀಡಿದಾಗ ಬದುಕು ಸಮರ್ಥ ರೀತಿಯಲ್ಲಿ ಸಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಪ್ರವೀಣ್‌ ಶೆಟ್ಟಿ, ಸಂಪತ್‌ ಶೆಟ್ಟಿ, ಚಾರ್ಕೋಪ್‌ನಸಂತೋಷ್‌ ಭಟ್‌, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಮಿತ್ರಾ ಕರ್ಕೇರ, ಶೋಭಾ ಶೇಖರ್‌ ಶೆಟ್ಟಿ, ಶೋಭಾ ಸುಧಾಕರ್‌ ಶೆಟ್ಟಿ, ಪ್ರೇಮಲತಾ ಪುರುಷೋತ್ತಮ ಕುಲಾಲ್‌, ಯಶೋದಾ ಶೆಟ್ಟಿ, ಪ್ರೇಮಾ ಶೆಟ್ಟಿ, ಸಮಾಜ ಸೇವಕಿ ಲೀಲಾ
ಡಿ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಅತಿಥಿ-ಗಣ್ಯರಿಗೆ, ದಾನಿಗಳಿಗೆ ಸಮಿತಿಯ ಶೇಖರ್‌ ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಗೌರವಿಸಿದರು.

ಕಾರ್ಯಕ್ರಮವನ್ನು ಸಮಾಜ ಸೇವಕ ವಿಶ್ವನಾಥ್‌ ಶೆಟ್ಟಿ ಅವರು ನಿರೂಪಿಸಿದರು. ಬಳಿಕ ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ ಕಲಾವಿದರಿಂದ ಪರಕೆದ ಬದಿಕರ ಯಕ್ಷಗಾನ ಪ್ರದರ್ಶನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next