ಮುಂಬಯಿ: ಕಲಾ ಪ್ರತಿಭೆಗಳ ಅನಾವರಣ ಮತ್ತು ನಟನಾ ಪ್ರತಿಭಾನ್ವೇಷಣೆಗೆ ಸೂಕ್ತವಾದ ರಂಗಮಂಟಪಗಳು ಅಗತ್ಯವಾಗಿವೆ. ಅನುಕೂಲಕರ ಮತ್ತು ಸುಸಜ್ಜಿತ ರಂಗವೇದಿಕೆಗಳಿದ್ದರೆ ಕಲಾವಿದರ ಕಲಾ ಪ್ರದರ್ಶನಕ್ಕೆ ಪ್ರೇರಕವಾಗುತ್ತವೆ. ಅತ್ಯಾಧುನಿಕ ವ್ಯವಸ್ಥೆಗಳುಳ್ಳ ವೇದಿಕೆಗಳಿಂದ ಕಲಾವಿದರ ಉತ್ಸಾಹ ಇಮ್ಮಡಿಗೊಳ್ಳುವುದು. ಸೂಕ್ತ ವೇದಿಕೆ ಗಳಿಂದ ರಂಗಕ್ರಿಯೆಗಳು ಸರಾಗವಾಗಿ ನೆರವೇರಲು ಹಾಗೂ ಪ್ರತಿಭೆ ಅಭಿವ್ಯಕ್ತಗೊಳ್ಳಲು ಸಾಧ್ಯ ಎಂದು ಸಮಾಜ ಸೇವಕ ಮತ್ತು ಭವಾನಿ ಫೌಂಡೇಶನ್ ಮುಂಬಯಿ ಇದರ ಆಡಳಿತ ಮಂಡಳಿ ವಿಶ್ವಸ್ತ ಸದಸ್ಯ ಚೆಲ್ಲಡ್ಕ ರಾಧಾಕೃಷ್ಣ ಡಿ.ಶೆಟ್ಟಿ ತಿಳಿಸಿದರು.
ಫೆ. 5ರಂದು ಬಜ್ಪೆ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಇದರ ರಜತ ಸಂಭ್ರಮದ ನೆನಪಿಗಾಗಿ ಕಾಲೇಜು ಮಂಡಳಿಯ ಮನವಿಯ ಮೇರೆಗೆ ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ದಡªಂಗಡಿ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ ಮತ್ತು ವಿಶ್ವಸ್ಥ ಮಂಡಳಿಯ ಸುಮಾರು 1.35 ಲಕ್ಷ ರೂ. ವೆಚ್ಚದಲ್ಲಿ ಪುನರ್‌ನಿರ್ಮಿಸಲಾದ ನವೀಕೃತ ವೇದಿಕೆಯನ್ನು ಕಲಾಮಾತೆಗೆ ಸಮರ್ಪಿಸಿ ಎಸ್‌ಎನ್‌ಎಸ್ ಕಾಲೇಜು ಆಯೋಜಿಸಿದ್ದ ಮಂಗಳೂರು ವಿವಿ ಮಟ್ಟದ ಅಂತರ್‌ಕಾಲೇಜು ವೈವಿಧ್ಯಮಯ ಸ್ಪರ್ಧೆ “ಸಮƒದ್ಧಿ 2019’ಯನ್ನು ಉದ್ಘಾಟಿಸಿ ರಾಧಾಕೃಷ್ಣ ಶೆಟ್ಟಿ ಮಾತನಾಡಿದರು.
ಭವಾನಿ ಫೌಂಡೇಶನ್ ನಮ್ಮ ಸಂಸ್ಥೆ ಗಳಿಗೆ, ಕ್ಷೇತ್ರಕ್ಕೆ ವೇದಿಕೆ ಸಮರ್ಪಿಸಿ ರುವುದು ಶ್ಲಾಘನೀಯ. ಇದು ಭವಿಷ್ಯತ್ತಿನ ಸರ್ವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವರವಾಗಲಿ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿ ಖಜಾಂಚಿ, ವೇದಿಕೆ ನಿರ್ಮಾಣದ ಸಮನ್ವಯಕ, ಭವಾನಿ ಫೌಂಡೇಶನ್‌ನ ಆಡಳಿತ ಮಂಡಳಿ ಸದಸ್ಯ ಗೋಪಾಲ ಕೃಷ್ಣ ಕುಂದರ್ ಬಜ್ಪೆ ತಿಳಿದರು.
ಎಸ್‌ಎನ್‌ಎಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಎನ್. ಪೂಜಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲ್, ಕಾಲೇಜು ಅಭಿವೃದ್ಧಿ ಸಮಿತಿಯ ನಿಕಟ ಪೂರ್ವ ಖಜಾಂಚಿ ಹರೀಶ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಭಟ್, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಯುವವಾಹಿನಿ ಬಜ್ಪೆ ಘಟಕದ ನಿಕಟಪೂರ್ವ ಅಧ್ಯಕ್ಷ ದೇವರಾಜ ಅಮೀನ್, ಉಪಪ್ರಾಂಶುಪಾಲ ಗಣೇಶ್ ಬಿ.ಎಂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಗ್ರಂಥಪಾಲಕ ವಿಶ್ವನಾಥ ಪೂಜಾರಿ ರೆಂಜಾಳ ಸ್ವಾಗತಿಸಿ, ನಿರೂಪಿಸಿದರು. ಕಾಲೇಜ್‌ನ ಪ್ರಾಂಶುಪಾಲೆ ಡಾ| ಲತಾ.ಕೆ ಕೃತಜ್ಞತಾಭಾವ ವ್ಯಕ್ತಪಡಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್