Advertisement

ಭವಾನಿ ಹಾಸನದಲ್ಲಿ ಗೆಲ್ಲುವುದಿಲ್ಲ, ನನಗೆ ತೊಂದರೆ ಕೊಡುವುದು ಬೇಡ: ಎಚ್ ಡಿ ಕುಮಾರಸ್ವಾಮಿ

12:53 PM Apr 11, 2023 | Team Udayavani |

ಹುಬ್ಬಳ್ಳಿ: ಹಾಸನ ಕ್ಷೇತ್ರದ ವಾಸ್ತವದ ನೆಲೆಗಟ್ಟು ಅರಿತುಕೊಂಡೇ ಅಭ್ಯರ್ಥಿಯ ಆಯ್ಕೆ ಬಗ್ಗೆ ನನ್ಬ ನಿರ್ಧಾರ ಕೈಗೊಂಡಿದ್ದೇನೆ. ಭವಾನಿ ರೇವಣ್ಣರವರಿಗೆ ಟಿಕೆಟ್ ನೀಡಿದೆರೆ ಕುಟುಂಬ ರಾಜಕೀಯ ಆರೋಪ ಜತೆಗೆ ಪಕ್ಷ ಸೋಲಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದ ಹಿಂದಿನಿಂದಲೂ ಅಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂದು ಹೇಳುತ್ತಲೇ ಬಂದಿದ್ದೇನೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲುವುದಿಲ್ಲ ಎಂಬ ವಾಸ್ತವವನ್ನು ಅರಿತುಕೊಳ್ಳಬೇಕಾಗಿದೆ ಎಂದರು.

ದೇವೇಗೌಡರ ಕುಟುಂಬವನ್ನು ಮುಗಿಸಬೇಕೇಂದು ಕೆಲವರು ಯತ್ನಿಸುತ್ತಿದ್ದಾರೆ. ಹಿತೈಷಿಗಳು ಎನ್ನಿಸಿಕೊಂಡವರೇ ಶಕುನಿಗಳ ರೂಪದಲ್ಲಿ ರೇವಣ್ಣನವರ ತಲೆಕೆಡಿಸುತ್ತಿದ್ದಾರೆ. ಇದನ್ನು ಅವರು ಅರಿತುಕೊಳ್ಳಬೇಕು. ರಾಜ್ಯದಲ್ಲಿ ಪಕ್ಷ ಸ್ವತಂತ್ರ ವಾಗಿ ಅಧಿಕಾರಕ್ಕೆ ತರಲು ದಿನಕ್ಕೆ 15-16 ತಾಸು ಶ್ರಮಿಸುತ್ತಿದ್ದೇನೆ ನನಗೆ ಸಹಕಾರ ನೀಡುವ ಕೆಲಸ ಮಾಡಬೇಕೆ ವಿನಃ ತೊಂದರೆ ಕೊಡುವುದು ಬೇಡ ಎಂದರು.

ಇದನ್ನೂ ಓದಿ:ರಚೆಲ್‌ ಎಂಬ ಮಲಯಾಳಿ ಸುಂದರಿ: ನವನಟಿಯ ಕೈ ತುಂಬಾ ಸಿನಿಮಾ

ಹಾಸನ ಕ್ಷೇತ್ರದ ಟಿಕೆಟ್ ಸಣ್ಣ ವಿಷಯ ಮಧ್ಯಮದಲ್ಲಿ ದೊಡ್ಡ ವಿಷಯವಾಗಿ ಚರ್ಚೆ ಆಗುತ್ತಿದೆ. ನಮ್ಮದು ಒಂದು ಕ್ಷೇತ್ರ ಸಮಸ್ಯೆ ಬಿಜೆಪಿಯಲ್ಲಿ ಇಂತಹ ಅನೇಕ ಕ್ಷೇತ್ರಗಳಿವೆ ಎಂದರು.

Advertisement

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನದ ಬಗ್ಗೆ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಸಿದ ಅವರು, 2008ರಲ್ಲಿ ಅವಕಾಶ ಇತ್ತು. 2018ರಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಬಳಿ ಸರಕಾರ ರಚನೆ ವಿಷಯವಾಗಿ ಮಾತನಾಡಲು ಬಂದಾಗ ಎಚ್.ಡಿ.ದೇವೇಗೌಡ ಅವರು ಖರ್ಗೆ ಅವರನ್ನು ಸಿಎಂ ಮಾಡಿ ನಮ್ಮ ಬೆಂಬಲ ನೀಡುವುದಾಗಿ ತಿಳಿಸಿದ್ದರು ಕಾಂಗ್ರೆಸ್ ನವರು ಒಪ್ಪಲಿಲ್ಲ. ಇದೀಗ ಇನ್ನು ಬಹುಮತವೇ ಬಂದಿಲ್ಲ ದಲಿತ ಸಿಎಂ ಕನವರಿಕೆಯಲ್ಲಿ ಇದ್ದಾರೆ. ಕೆಲ ಶಾಸಕರನ್ನು ಬಿಜೆಪಿ ಕಳುಹಿಸಿದ್ದು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next