Advertisement

ಭವಾನಿ ಫೌಂಡೇಶನ್‌ ಮುಂಬಯಿ :ಸಮಾಜ ಭವನ ಉದ್ಘಾಟನೆ

06:02 PM Feb 10, 2019 | |

ಪನ್ವೇಲ್‌: ಪ್ರಸ್ತುತ ಆಧುನಿಕ ಸೌಲಭ್ಯವುಳ್ಳ ನಗರವಾಸಿ ನಾಗರಿಕರೇ ಆದಿವಾಸಿಗಳಂತ್ತಿದ್ದು, ಮಾನವೀಯತೆ ಮತ್ತು ಆರೋಗ್ಯಕರ ಜೀವನದಲ್ಲಿ ನಗರ ಪ್ರದೇಶದ ಜನತೆಗಿಂತ ಗ್ರಾಮಸ್ಥರೇ ಶ್ರೀಮಂತರು. ಸ್ವತ್ಛತಾ ಪರಿಸರ, ಮಾನವೀಯತೆಯಿಂದ  ಕೂಡಿದ ಮೌಲ್ಯಯುತ ಸಾಮರಸ್ಯದ ಬಾಳು, ಸಾಮಾಜಿಕ ಸ್ವಸ್ಥತೆ ಇವುಗಳಿಂದ ಇಲ್ಲಿನ ಜನತೆಯ  ಜೀವನ ಶ್ರೀಮಂತಿಕೆಯಿಂದ ಕೂಡಿದೆ. ಆದ್ದರಿಂದ ಇಲ್ಲಿನ ಜನತೆಯನ್ನು ಆದಿವಾಸಿಗಿಂತ ಅನಿವಾಸಿಯರೆಂದು ಹೇಳಲು ಅಭಿಮಾನವಾಗುತ್ತದೆ. ಸಂಬಂಧಗಳ ಬೆಳವಣಿಗೆಗೆ ಭಾಷೆ, ಪ್ರಾಂತ್ಯಗಳ ಅಗತ್ಯವಿಲ್ಲ.  ನಿಷ್ಕಳಂಕ ಮನಸ್ಸುಗಳ ಅಗತ್ಯವಿದೆ  ಎನ್ನುವುದನ್ನು ಭವಾನಿ ಫೌಂಡೇಶನ್‌ ನುಡಿದಂತೆ ನಡೆದು ತೋರಿಸಿದೆ ಎಂದು  ಸಕಾಳ್‌ ಮರಾಠಿ ದೈನಿಕದ ಮುಂಬಯಿ ಆವೃತ್ತಿಯ ಪ್ರಧಾನ ಸಂಪಾದಕ ರಾಹುಲ್‌ ಗ‌ಡಾ³ಲೆ ತಿಳಿಸಿದರು.
ಫೆ. 9 ರಂದು ಭವಾನಿ ಫೌಂಡೇಶನ್‌ ಮುಂಬಯಿ ಇದರ ವತಿಯಿಂದ ರಾಯಘಡ ಜಿಲ್ಲೆಯ ಪಿರ್ಕಟ್‌ವಾಡಿಯಾ ಆದಿವಾಸಿ ಜನಾಂಗದ ಮೂರು ಗ್ರಾಮಗಳಿಗೆ ಸಹಕಾರಿಯಾಗುವ ಭವಾನಿ ಫೌಂಡೇಷನ್‌ ಸಮಾಜ ಭವನವನ್ನು ಉದ್ಘಾಟಿಸಿ ಮಾತನಾಡಿ ಅವರು, ಭವಾನಿ ಭವನರ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ‌ ದಡ್ಡಿಂಗಡಿ ಚೆಲ್ಲಡ್ಕ ಕೆ. ಡಿ. ಶೆಟ್ಟಿ ಅವರ ಸಮಾಜಪರ ಕಾರ್ಯಗಳು ಇತರರಿಗೆ ಮಾದರಿಯಾಗಿದೆ ಎಂದರು.

Advertisement

ಸಮಾರಂಭದಲ್ಲಿ ಅತಿಥಿಗಳಾಗಿ ಖಾಲಾಪುರ್‌ ಪಂಚಾಯತ್‌ನ ಸಭಾಪತಿ ಕಾಂಚನ ಪಾರಂತೆ, ಸರ್‌ಪಂಚ್‌ಗಳಾದ ಚಂಗು ಚೌಧರಿ ಮತ್ತು ಜಯೇಶ್‌ ಸುತಾರ್‌, ರಾಜಕೀಯ ನೇತಾರರಾದ ಸುಧೀರ್‌ ಠೊಂಬರೆ, ಕೆ. ದೇಶ್‌ಮುಖ್‌, ನಿವೃತ್ತ ಶಿಕ್ಷಕ ಸುನೀಲ್‌ ಫರ್ವೇಕರ್‌, ಅನಂತ್‌ ಠಾಕೂರ್‌, ವಿಶೇಷ ಅತಿಥಿಗಳಾಗಿ ಫೌಂಡೇಶನ್‌ನ  ವಿಶ್ವಸ್ಥ ಸದಸ್ಯರಾದ ಸರಿತಾ ಕುಸುಮೋದರ್‌ ಶೆಟ್ಟಿ, ಉಪಾಧ್ಯಕ್ಷ ಜೀಕ್ಷಿತ್‌ ಕುಸುಮೋದರ್‌ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ. ಮೊಯಿದ್ಧೀನ್‌ ಮುಂಡ್ಕೂರು, ಧರ್ಮಪಾಲ್‌ ಯು. ದೇವಾಡಿಗ, ಚೆಲ್ಲಡ್ಕ ಪ್ರಕಾಶ್‌ ಡಿ. ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸೀಮಾ ಪವಾರ್‌, ಕೋಶಾಧಿಕಾರಿ ಚೈತಾಲಿ ಪೂಜಾರಿ, ಜೊತೆ ಕಾರ್ಯದರ್ಶಿ ನವೀನ್‌ ಎಸ್‌. ಶೆಟ್ಟಿ, ಜಗದೀಶ್‌ ಶೆಟ್ಟಿ ನಂದಿಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿ-ಗಣ್ಯರು ಮತ್ತು ಗ್ರಾಮಸ್ಥ ಮುಖ್ಯಸ್ಥರು ಫೌಂಡೇಶನ್‌ನ ಗ್ರಾಮಾಭಿವೃದ್ಧಿ ಚಿಂತನೆ, ಕಾರ್ಯ ನಿಷ್ಠೆ ಮತ್ತು ಸೇವಾ ವೈಖರಿಯನ್ನು  ಪ್ರಶಂಸಿಸಿ ಕೆ. ಡಿ. ಶೆಟ್ಟಿ ಅವರನ್ನು ಸಮ್ಮಾನಿಸಿ ಅಭಿನಂದಿಸಿದರು.

ಮುಖ್ಯರಸ್ತೆಯಿಂದ ಸುಮಾರು 14 ಕಿ. ಮೀ. ದೂರದ ಅರಣ್ಯದೊಳಗಿನ ನಿಸರ್ಗ ಪ್ರದೇಶವನ್ನು ಕಂಡು ಹಿಡಿದ ಭವಾನಿ ಫೌಂಡೇಶನ್‌ನ ಪ್ರಯತ್ನವೇ ಸಾಧನೀಯವಾದುದು.  ಅದೂ ಆದಿವಾಸಿ ಜನಾಂಗದ ನಿಮ್ಮ ಸೇವೆ ಶ್ಲಾಘನೀಯ. ನಾವೂ ಗ್ರಾಮಸ್ಥರನ್ನು ಕುಟುಂಬದಂತೆ ಕಂಡು ಸೇವಾ ನಿರತರಾಗಿದ್ದೇವೆ. ಎಂದು ಸುಧೀರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಆಡಳಿತ ಮಂಡಳಿ ಸದಸ್ಯರಾದ  ಅಂಕಿತಾ ಜೆ. ಶೆಟ್ಟಿ, ಪಂಡಿತ್‌ ನ‌ವೀನ್‌ಚ‌ಂದ್ರ ಆರ್‌. ಸನೀಲ್‌, ಪ್ರೇಮನಾಥ ಬಿ. ಶೆಟ್ಟಿ ಮುಂಡ್ಕೂರು, ಕರ್ನೂರು ಮೋಹನ್‌ ರೈ, ಶಶಿಕಾಂತ್‌ ಠಾಕ್ರೆ, ಸಂಜೀವ ಎನ್‌. ಶೆಟ್ಟಿ ಆಶ್ವಿ‌ತ್‌,  ದಿನೇಶ್‌ ಎಸ್‌. ಶೆಟ್ಟಿ ಪಡುಬಿದ್ರೆ ಸಕಾಳ್‌, ಧನಂಜಯ ಶೆಟ್ಟಿ ಕೊಲ್ಪೆ, ಸಂತೋಷ್‌ ಜಿ. ಶೆಟ್ಟಿ ಪನ್ವೇಲ್‌, ಸಂಜೀವ ಟಿ. ಶೆಟ್ಟಿ ಉಳೆಪಾಡಿ, ಭಾಸ್ಕರ್‌ ಎಂ. ಶೆಟ್ಟಿ ತಾಳಿಪಾಡಿಗುತ್ತು, ಸುಜಾತಾ ಧರ್ಮಪಾಲ್‌ ದೇವಾಡಿಗ, ಸುಜಾತಾ ಶೆಟ್ಟಿ, ಪೂರ್ಣಿಮಾ ಪಿ. ಶೆಟ್ಟಿ, ಹೇಮಲತಾ ಎಸ್‌. ಶೆಟ್ಟಿ, ಸುಮನಾ ಕೆ. ಶೆಟ್ಟಿ, ಪ್ರಭಾ ವಿ. ಶೆಟ್ಟಿ,  ಗುಣವತಿ ವೈ. ಶೆಟ್ಟಿ, ವೀಣಾ ಎ. ಶೆಟ್ಟಿ, ಯಶೋದಾ ಡಿ. ಶೆಟ್ಟಿ, ಗೀತಾ ಎಸ್‌.ಶೆಟ್ಟಿ, ಜಯಂತಿ ಸಿ. ಶೆಟ್ಟಿ, ಇಂದಿರಾ ಎಸ್‌. ಶೆಟ್ಟಿ, ಸಂಜೀವಿನಿ ಶೆಟ್ಟಿ, ಪ್ರೇರಣಾ ಗುರವ್‌ ಸೇರಿದಂತೆ ಖಾಲಾಪುರ್‌ ತಾಲೂಕು ಶಿಕ್ಷಕ ವೃಂದ, ಪಿರ್‌ಕಟ್‌ವಾಡಿ, ಆರ್‌ಕಟ್‌ವಾಡಿ ಮತ್ತು ಉಂಬರ್‌ಣೆವಾಡಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

ಸ್ವರ್ಗೀಯ ಚೆಲ್ಲಡ್ಕ ದೇರಣ್ಣ ಶೆಟ್ಟಿ ಮತ್ತು ಭವಾನಿ ಡಿ. ಶೆಟ್ಟಿ ಅವರನ್ನು ಸ್ಮರಿಸಿ, ಮಾತೆ ಸರಸ್ವತಿ, ಶಿವಾಜಿ ಮಹಾರಾಜ್‌, ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾಂ ಜಲಿಗೈದುನಾಮಫಲಕ ಅನಾವರಣಗೊಳಿಸಿ ಕೆ. ಡಿ. ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮಸ್ಥರು ಬ್ಯಾಂಡುವಾದ್ಯಗಳೊಂದಿಗೆ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸಮಾಜ ಭವನಕ್ಕೆ ಬರಮಾಡಿಕೊಂಡರು. ಪುರೋಹಿತ ದಿಲೀಪ್‌ ಜೋಶಿ ಪೂಜೆ ನೆರವೇರಿಸಿದರು. ಬಿಲವಲೆ ಮತ್ತು ಠಾಕೂರ್‌ವಾಡಿ ಶಾಲಾ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಶಿಕ್ಷಕ ಜೀತೂ ಠಾಕೂರ್‌ ಸ್ವಾಗತಿಸಿದರು. ಮುರಳೀಧರ್‌ ವಿಠಲ್‌ ಪಾಲ್ವೆ ಪ್ರಸ್ತಾವನೆಗೈದರು. ರಾಜೀವ ಉಗ್ಡೆ, ಗಣಪತ್‌ ವೀರ್‌, ವಾಮನ ಪಿರ್‌ಕಟ್‌, ಸಂಜಯ್‌ ಉಗ್ಡೆ, ವಾನೂRರ್‌ ವೀರ್‌, ಪಾರು ವಾಫ್‌, ಪಾರ್ವತಿ ಉಗಾx, ಶೈಲಾ ಪಾಲ್ವೆ, ಬಾಳ ಸೋಮ ಬಾಳಿÏ ಅವರು ಗಣ್ಯರನ್ನು ಗೌರವಿಸಿದರು. ಉಮೇಶ್‌ ವಿಚಾರೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪಶುìರಾಮ್‌ ಪುಂಡಲಿಕ್‌ ತಸೊÕàಡೆ ವಂದಿಸಿದರು. 

 ಸ್ವಾತಂತ್ರÂ ದೊರಕಿ 70 ವರ್ಷ ಸಂದರೂ ಭಾರತ ದೇಶದಲ್ಲಿ ಇಂತಹ ಆದಿವಾಸಿ ಗ್ರಾಮ ಇರುವಂತಹದ್ದು ಮತ್ತು ಇಲ್ಲಿನ ಜನತೆ ಕಡು ಬಡತನದಿಂದ ಬದುಕನ್ನು  ಕಾಣುತ್ತಿರುವುದು ರಾಷ್ಟ್ರದ ದುರದೃಷ್ಟ. 
   – ಮೊಯಿದ್ಧೀನ್‌ ಮುಂಡ್ಕೂರು 
ಕಾರ್ಯಕಾರಿ ಸಮಿತಿಯ ಸದಸ್ಯರು  ಭವಾನಿ ಫೌಂಡೇಷನ್‌ ಮುಂಬಯಿ

 ಭವಾನಿ ಸಂಸ್ಥೆಯ ಸಿಬಂದಿಗಳ ಸಂಬಳದ ಒಂದು ಭಾಗವೂ ಇಂತಹ ಪುಣ್ಯಾಧಿ ಸೇವೆಗೆ ಸಲ್ಲುತ್ತಿದ್ದು, ಇಂದು ಭವನ ನಿರ್ಮಾಣದ ಮೂಲಕ ಸಂಸ್ಥೆಯ ಉದ್ಯೋಗಿಗಳ ಮತ್ತು ನಮ್ಮ ಪರಿವಾರದ ಪರಿಶ್ರಮ ಸಾರ್ಥಕಗೊಂಡಂತಾಗಿದೆ..
  – ಕೆ. ಡಿ. ಶೆಟ್ಟಿ  
ಸಂಸ್ಥಾಪಕರು : ಭವಾನಿ ಫೌಂಡೇಷನ್‌ ಮುಂಬಯಿ

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next