Advertisement
ಬಂಟಕಲ್ಲು ರಾಜಾಪುರ ಸಾರಸ್ವತ ಸಂಘದ ನಿಕಟಪೂರ್ವ ಅಧ್ಯಕ್ಷ ಉಪೆಂದ್ರ ನಾಯಕ್ ಜನಗಣತಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿ ಮಾತ ನಾಡಿ, ಉದಾಸೀನ ಪ್ರವೃತ್ತಿ ಬಿಟ್ಟು ನಮ್ಮತನವನ್ನು ಉಳಿಸಿ ಸಂವಹನವಾಗಿ ಸ್ವ ಭಾಷೆಯನ್ನೇ ಬಳಸಿ ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಕಾರಣ ಕರ್ತರಾಗಬೇಕು ಎಂದರು.
ಸಮಿತಿಯನ್ನು ಆರ್ಥಿಕವಾಗಿ ಬಲ ಪಡಿಸುವುದು, ಕುಂಟಿಕಾನ ರಾಮ ಚಂದ್ರ ನಾಯಕ್ ಅವರ ಜನ್ಮಶತಾಬ್ದದ ಬಗ್ಗೆ ಸಾರಸ್ವತ ಸಮ್ಮೇಳನ ನಡೆಸುವುದು, “ವಿದ್ಯಾನಿಧಿ’ ವಿದ್ಯಾರ್ಥಿವೇತನದ ಬಗ್ಗೆ, ಸಾರಸ್ವತ ಸಂಪರ್ಕವಾಣಿ ಹಾಗೂ ಜನಗಣತಿಯ ಕೈಪಿಡಿ ರಚನೆ, ಜನಗಣತಿಯ ಖರ್ಚುವೆಚ್ಚ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ-ವಿಮರ್ಶೆ ನಡೆದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ವಿರಾಜಪೇಟೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಮೋಂತಿಮಾರು, ಪೈವಳಿಕೆ ಸಂಘಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಸುನಿಲ್ ಬೋರ್ಕರ್ ಮುಂಡಕೊಚ್ಚಿ ಸ್ವಾಗ ತಿಸಿ, ಗಣತಿಯ ವ್ಯವಸ್ಥಾಪಕ ಬಾಲಕೃಷ್ಣ ನಾಯಕ್ ತೆಂಕಿಲ ಅವರು ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ ಪುಂಡಿಕಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.