Advertisement

ಭಟ್ಕಳದಲ್ಲಿ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಖಂಡನೀಯ: ರವೀಂದ್ರ ನಾಯ್ಕ

03:09 PM Oct 01, 2021 | Team Udayavani |

ಭಟ್ಕಳ: ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಭಟ್ಕಳದಲ್ಲಿ ಮಿತಿ ಮೀರಿದ್ದು ಖಂಡನೀಯ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಅವರು ಕಳೆದ ಮಂಗಳವಾರದಂದು ಹೆಬಳೆಯ ದುರ್ಗಮ್ಮ ಶನಿಯಾರ ನಾಯ್ಕ ಅವರ ಸುಮಾರು 45 ವರ್ಷ ಹಳೆಯ ಅಂಗಡಿ ಛಾವಣಿಯನ್ನು ಕೆಡವಿದ್ದನ್ನು ಪರಿಶೀಲಿಸಿ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿ ಮಾತನಾಡಿದರು.

ಬಡ ವಿಧವೆ ಮಹಿಳೆಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗಿದೆ, ಆಕೆಗೆ ನ್ಯಾಯ ದೊರೆಯುವ ತನಕವೂ ಕೂಡಾ ನಮ್ಮ ವೇದಿಕೆ ಹೋರಾಟ ಮಾಡುತ್ತದೆ ಎಂದ ಅವರು ಮುಂದಿನ 48 ಗಂಟೆಗಳ ಒಳಗೆ ಇಲ್ಲಿಂದ ತೆಗೆದುಕೊಂಡು ಹೋಗಿದ್ದ ಶೀಟು ಹಾಗೂ ಇತರೆ ಸಾಮಗ್ರಿಗಳನ್ನು ಹಿಂತಿರುಗಿಸುವುದಕ್ಕೆ ಗಡುವು ನೀಡಿದ್ದೇವೆ ಎಂದರು.

ಕಾನೂನಿನ ವಿಧಿ ವಿಧಾನವನ್ನು ಅನುಸರಿಸದೆ ಬಡ ಮಹಿಳೆಯ ಮೇಲೆ ದೌರ್ಜನ್ಯ ಎಸಗಲಾಗಿದೆ, ಅರಣ್ಯ ಅತಿಕ್ರಮಣದಾರರ ಮೇಲೆ ದೌರ್ಜನ್ಯ, ಕಿರುಕುಳ ಖಂಡನಾರ್ಹವಾಗಿದ್ದು ಅರಣ್ಯಾಧಿಕಾರಿಗಳು ಕಾನೂನು ಬಾಹೀರ ಕೃತ್ಯ ನಡೆಸಿದರೂ ಕೂಡಾ ಜನಪ್ರತಿನಿಧಿಗಳು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ಅವರು ದೂರಿದರು.

ಜೀವನೋಪಾಯಕ್ಕಾಗಿ ದಿವಂಗತ ಶನಿಯಾರ ನಾಯ್ಕನ ಪತ್ನಿ ದುರ್ಗಮ್ಮ ಅನಾಧಿಕಾಲದಿಂದ ಇದ್ದ ಕಟ್ಟಡವನ್ನು ದ್ವಂಸಗೊಳಿಸುವ ಸಂದರ್ಭದಲ್ಲಿ ಯಾವುದೇ ಕಾನೂನು ವಿಧಿ ವಿಧಾನ ಅನುಸರಿಸದೆ, ಕಾನೂನಿನ ನೀತಿ ನಿಯಮವನ್ನು ಪಾಲಿಸದೆ, ಅರಣ್ಯ ಸಿಬ್ಬಂದಿಗಳ ವರ್ತನೆ ಕುರಿತು ಜನಪ್ರತಿನಿಧಿಗಳು ಮೌನವಾಗಿರುವುದು ವಿಷಾದಕರ. ಅರಣ್ಯವಾಸಿಗಳ ಸಹನೆ ಪರೀಕ್ಷಿಸುವ ಪ್ರವೃತ್ತಿಗೆ ಅರಣ್ಯ ಇಲಾಖೆಯು ಮುಂದಾಗಬಾರದು. ಅರಣ್ಯ ಸಿಬ್ಬಂದಿಗಳ ಧಮನಕಾರಿ ಕೃತ್ಯಕ್ಕೆ ಹೋರಾಟದಿಂದಲೇ ಉತ್ತರಿಸಬೇಕಾದೀತು ಎಂದು ಅವರು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.

Advertisement

ಈ ಕುರಿತು ಸ್ಥಳದಿಂದಲೇ ಡಿ.ಎಫ್.ಓ. ಗಣಪತಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು ಮುಂದಿನ 48 ಗಂಟೆಯೊಳಗೆ ಬಡ ಮಹಿಳೆಗೆ ನ್ಯಾಯ ದೊರಕದೆ ಇದ್ದಲ್ಲಿ ಬೃಹತ್ ಹೋರಾಟದ ಮೂಲಕ ಪ್ರತಿಭಟನೆ ಅನಿವಾರ್ಯ ಎಂದೂ ಹೇಳಿದರು.

ಇದನ್ನೂ ಓದಿ:ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರುತ್ತೇನೆ : ಎಂಎಲ್ ಸಿ ಸಂದೇಶ್ ನಾಗರಾಜ್

ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾಗಿ, ಆಘಾತಕ್ಕೆ ಒಳಗಾಗಿರುವ ದುರ್ಗಮ್ಮ ಶನಿಯಾರ ನಾಯ್ಕ ಅವರನ್ನು ಹೋರಾಟಗಾರರ ವೇದಿಕೆಯು ಸಂತೈಸಿ ಬೆಂಬಲವನ್ನು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೋಡ, ಕಯೀಂ ಸಾಬ, ಪಾಂಡುರಂಗ ನಾಯ್ಕ ಬೆಳಕೆ, ರಿಜವಾನ ಸಾಬ, ಹತ್ಸಾಪ ದಾಮುದ್ದೀನ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅರಣ್ಯ ಅತಿಕ್ರಮಣದಾರರು ಹಿಂಸೆಗೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಂಖ್ಯೆಯಲ್ಲಿ ಭಟ್ಕಳ ಪ್ರಥಮ ಸ್ಥಾನದಲ್ಲಿರುವುದು. ಇದ್ದವರಿಗೆ ಒಂದು ಇಲ್ಲದಿದ್ದವರಿಗೆ ಒಂದು ನೀತಿ ಅನುಸರಿಸುವ ಅರಣ್ಯ ಇಲಾಖೆಯ ನೀತಿ ಖೇದಕರ. ಅಲ್ಲದೇ, ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ವರ್ತನೆ ಅಮಾನವೀಯತೆಯಿಂದ ಕೂಡಿರುವುದು ದುಃಖಕರ ಸಂಗತಿಯಾಗಿದೆ.

ರವೀಂದ್ರ ನಾಯ್ಕ.

Advertisement

Udayavani is now on Telegram. Click here to join our channel and stay updated with the latest news.

Next