ಭಟ್ಕಳ: ನಾವು ಹನುಮನನ್ನು ಇಷ್ಟಪಟ್ಟು ಆರಾಧಿಸಲು ಆತನ ಕೃತ್ವತ್ವ ಶಕ್ತಿಯೇ ಕಾರಣ ಎಂದು ಉಡುಪಿ ಅಷ್ಟಮಠಗಳಲ್ಲೊಂದಾದ ಅದಮಾರು ಮಠದ ಪೀಠಾಧಿಪತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳು ಹೇಳಿದರು.
Advertisement
ನಗರದ ಮಣ್ಕುಳಿಯಲ್ಲಿರುವ ಶ್ರೀ ಹನುಮಂತ ಹಾಗೂ ಶ್ರೀಲಕ್ಷ್ಮೀ ನಾರಾಯಣ ದೇಗುಲ ನಿರ್ಮಾಣ ಕಾರ್ಯಕ್ರಮದ ಪೂರ್ವಭಾವಿಯಾಗಿ ನಿಧಿ ಕುಂಭ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಭಂಗಿಯಾಗಿದೆ ಎಂದರು. ನಮ್ಮ ಸನಾತನ ಸಂಸ್ಕೃತಿ ಉಳಿವಿಗಾಗಿ ಮಕ್ಕಳಲ್ಲಿ ಶಾಲೆ, ಮನೆಯಲ್ಲೂ ಕೂಡ ಹನುಮನ ಶಕ್ತಿ ತುಂಬಬೇಕು. ಮಕ್ಕಳು ಸರಿಯಾದ ಮಾರ್ಗದಲ್ಲಿ ಹೋಗುವಂತೆ ಮಾಡುವ ಕಾರ್ಯ ಆಗಬೇಕು. ಪ್ರತಿದಿನ ದೇವಾಲಯಕ್ಕೆ ಹೋಗುವುದರಿಂದ ಮಕ್ಕಳಲ್ಲಿ ದೇವರ ಹಾಗೂ ತಂದೆ-ತಾಯಿಯರಲ್ಲಿ ಭಕ್ತಿ ಮೂಡುತ್ತದೆ ಎಂದರು.
Related Articles
ಮಂಕಾಳ ವೈದ್ಯ ಮಾತನಾಡಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುವುದು ಒಂದು ಭಾಗ್ಯ. ನಾವು ಮಾಡಿದ ಸಾಧನೆ ಈ ಸಮಾಜಕ್ಕೆ ಕೊಟ್ಟ ಕೊಡುಗೆಯೇ ಜೀವನ. ಸಮಾಜಕ್ಕೆ ಕೊಟ್ಟ ಕೊಡುಗೆ ಮಾತ್ರ ಶಾಶ್ವತ. ನಾವು ಉತ್ತಮ ಕೆಲಸ ಮಾಡಿದಾಗ ನಮ್ಮ ಜೀವನ ಸಾರ್ಥಕವಾಗಲಿದೆ ಎಂದರು. ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಒಂದು ವರ್ಷದ ಒಳಗೆ ಮುಗಿಸುವುದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
Advertisement
ಇದೇ ಸಂದರ್ಭದಲ್ಲಿ ಮಂಕಾಳ ವೈದ್ಯ ದಂಪತಿಗಳನ್ನು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಗೌರವಿಸಲಾಯಿತು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ್ ಎಂ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿದರು. ದೇವಾಲಯದ ಟ್ರಸ್ಟಿ ಮಹಾಬಲೇಶ್ವರ ಶೆಟ್ಟಿ, ಹಾಡುವಳ್ಳಿ ಗ್ರಾ.ಪಂ.ಅಧ್ಯಕ್ಷ ಶ್ರೀಧರ ಶೆಟ್ಟಿ, ಉಧ್ಯಮಿ ಮಂಜುನಾಥ ಶೆಟ್ಟಿ ಬೆಂಗಳೂರು, ವಿನಾಯಕ ಮುಂಬೈ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಮನೋಜ ಶೆಟ್ಟಿ, ತೇಜಸ್ವಿನಿ ಆರ್.ಶೆಟ್ಟಿ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಉದಯ್ ಶೆಟ್ಟಿ ಸಹಕರಿಸಿದರು.