ಮುಂಬೈ: ಬಾಲಿವುಡ್ ಡ್ರಗ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಎನ್ ಸಿಬಿ ಅಧಿಕಾರಿಗಳು ಶನಿವಾರ ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮನೆಗೆ ದಾಳಿ ಮಾಡಿ ಅವರನ್ನು ಬಂಧಿಸಿದ ಬಳಿಕ ಇದೀಗ ಅವರ ಪತಿ ಹರ್ಚ್ ಲಿಂಬಾಚಿಯರನ್ನು ಕೂಡಾ ಬಂಧನಕ್ಕೆ ಒಳಪಡಿಸಿದ್ದಾರೆ.
ಶನಿವಾರ ಭಾರತಿ ಸಿಂಗ್ ಮನೆಗೆ ದಾಳಿ ನಡೆಸಿದ್ದ ಎನ್ ಸಿಬಿ ಅಧಿಕಾರಿಗಳು ಗಾಂಜಾ ವಶಪಡಿಸಿಕೊಂಡಿದ್ದರು. ಬೆಳಗ್ಗೆಯೇ ಭಾರತಿ ಸಿಂಗ್ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಈ ವೇಳೆ ಅವರ ಮನೆಯಲ್ಲಿ86.5 ಗ್ರಾಂ ಗಾಂಜಾ ಸಿಕ್ಕಿತ್ತು. ಅಲ್ಲದೆ, ಭಾರತಿ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ತಾವು ಡ್ರಗ್ ಸೇವಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ಬಳಿಕ ಭಾರತಿ ಅವರನ್ನು ಶನಿವಾರ ಬಂಧಿಸಲಾಗಿತ್ತು.
ಭಾರತಿ ಸಿಂಗ್ ಅವರ ಮನೆಯಲ್ಲಿ ಎನ್‌ಸಿಬಿ ವಶಪಡಿಸಿಕೊಂಡ ಗಾಂಜಾ ಪ್ರಮಾಣವನ್ನು “ವಾಣಿಜ್ಯ ಪ್ರಮಾಣ” ಕಾಯಿದೆಯಡಿ “ಸಣ್ಣ ಪ್ರಮಾಣ” ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ:ನಾನಿ-ನಜ್ರಿಯ ನಟನೆಯ ‘ಅಂಟೆ ಸುಂದರಾನಿಕಿ’ ಚಿತ್ರದ ಟೈಟಲ್ ಟೀಸರ್ ರಿಲೀಸ್
ಭಾರತಿ ಸಿಂಗ್ ಅನೇಕ ಹಾಸ್ಯ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಹ ಕೆಲವು ಪ್ರದರ್ಶನಗಳನ್ನು ಸಹ ಅವರು ಆಯೋಜಿಸಿದ್ದಾರೆ. ಜೂನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಎನ್‌ಸಿಬಿ ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆ ನಡೆಸುತ್ತಿರುವ ಬಗ್ಗೆ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ.