Advertisement
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಮಂಗಳವಾರವೇನಿದ್ದರೂ ಮನೆ ಮನೆ ಪ್ರಚಾರ ನಡೆಯಲಿದೆ. ಬುಧ ವಾರದ ಮತದಾನಕ್ಕೆ ಅಖಾಡ ಸಿದ್ಧವಾಗಿದ್ದು, ತೆರೆಮರೆಯ ಆಟವೂ ಆರಂಭವಾಗಿದೆ.
Related Articles
ಎಲ್ಲರಿಗಿಂತ ಮುನ್ನವೇ ತನ್ನ ಅಭ್ಯರ್ಥಿಗಳ ಪರ ಅಖಾಡಕ್ಕೆ ಇಳಿದ ಕುಮಾರಸ್ವಾಮಿ ರಾಜ್ಯಾದ್ಯಂತ ಜೆಡಿಎಸ್ ಪರ ಪಂಚರತ್ನ ಯಾತ್ರೆ ನಡೆಸಿದರು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಅಬ್ಬರದ ಮುಂದೆ ಜೆಡಿಎಸ್ ತುಸು ಮಂಕಾಯಿತು. ಬಿಜೆಪಿ ಇದುವರೆಗೆ 206 ಪ್ರಚಾರ ಸಭೆ ಹಾಗೂ 90 ರೋಡ್ ಶೋ ನಡೆಸಿದರೆ, ಕಾಂಗ್ರೆಸ್ 173 ಪ್ರಚಾರ ಸಭೆ ಹಾಗೂ 55 ರೋಡ್ ಶೋ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಿಜೆಪಿ ಪರ ಬ್ಯಾಟ್ ಬೀಸಿದರೆ, ಕಾಂಗ್ರೆಸ್ ಪರ ಪ್ರಿಯಾಂಕಾ ವಾದ್ರಾ ಈ ಬಾರಿ ಹೆಚ್ಚು ಕಾಣಿಸಿಕೊಂಡರು. ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 57 ಸಾರ್ವಜನಿಕ ಸಭೆ ಹಾಗೂ 35 ರೋಡ್ ಶೋದಲ್ಲಿ ಭಾಗಿಯಾಗುವ ಮೂಲಕ ಉಳಿದೆಲ್ಲ ಪಕ್ಷಗಳ ನಾಯಕರಿಗಿಂತ ಹೆಚ್ಚು ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಇದರ ಜತೆಗೆ ಚಿತ್ರನಟರಾದ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಘಟಾನುಘಟಿ ಚಿತ್ರ ತಾರೆಯರೂ ಈ ಬಾರಿ ಚುನಾವಣ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ತವರಿನತ್ತ ನಾಯಕರ ಚಿತ್ತಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರ, ರಾಮನಗರದಲ್ಲಿ ಪ್ರಚಾರ ನಡೆಸಿದರೆ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ ಯಾ ಚನೆ ನಡೆಸಿದರು. ಯಡಿಯೂರಪ್ಪ, ಚಿತ್ರನಟ ಸುದೀಪ್ ಶಿಕಾರಿ ಪುರ ದಲ್ಲಿ ವಿಜ ಯೇಂದ್ರ ಪರ ವಾಗಿ ಪ್ರಚಾರ ನಡೆಸಿದರು. ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ. ಮಂಗಳವಾರ ಅಭ್ಯರ್ಥಿ ಜತೆಗೆ ಐದಾರು ಮಂದಿ ಮಾತ್ರ ಮನೆ ಮನೆಗೆ ತೆರಳಿ ಮತ ಯಾಚಿಸಲು ಅವಕಾಶವಿದೆ. ಯಾವುದೇ ರೀತಿಯ ಬಹಿರಂಗ ಸಭೆ, ರೋಡ್‌ಶೋಗಳು ಇರುವುದಿಲ್ಲ. ವಿವಾದದ ಸದ್ದು
ವಿವಾದದ ದೃಷ್ಟಿಯಿಂದಲೂ ಈ ಬಾರಿಯ ಚುನಾವಣೆ ಗಮನ ಸೆಳೆದಿದೆ. ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬರ್ಥದ ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿವಾದದ “ಖಾತೆ’ ಪ್ರಾರಂಭಿಸಿದರೆ, ಪ್ರಧಾನಿ ನರೇಂದ್ರ ಮೋದಿ ಯವರನ್ನು “ವಿಷದ ಹಾವು” ಎಂದು ಕರೆದ ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಪ್ರಯೋಗಿಸಿದ “ನಾಲಾಯಕ್’ ಪದ ರಾಷ್ಟ್ರಮಟ್ಟ ದಲ್ಲಿ ಸದ್ದು ಮಾಡಿತು. ತನ್ನ ಪ್ರಣಾಳಿಕೆಯಲ್ಲಿ “ಬಜರಂಗ ದಳ’ ಸೇರಿದಂತೆ ಸಂವಿಧಾನ ವಿರೋಧಿ ಕೃತ್ಯ ಎಸಗುವ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಕೊಟ್ಟ ಭರವಸೆ ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿತು.